Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಅಮಾವಾಸ್ಯೆ ದಿನವೇ ರಾಷ್ಟ್ರೀಯ ಸಹಕಾರ ನೀತಿ ಘೋಷಣೆ
    News

    ಅಮಾವಾಸ್ಯೆ ದಿನವೇ ರಾಷ್ಟ್ರೀಯ ಸಹಕಾರ ನೀತಿ ಘೋಷಣೆ

    adminBy adminJuly 11, 2025

    ಜುಲೈ 24ರಂದು ಸಹಕಾರ ಸಚಿವ ಅಮಿತ್‌ ಷಾ ಅವರಿಂದ ಔಪಚಾರಿಕವಾಗಿ ಬಿಡುಗಡೆ

    ನವದೆಹಲಿ: ಬಹುನಿರೀಕ್ಷಿತ ರಾಷ್ಟ್ರೀಯ ಸಹಕಾರ ನೀತಿ -2025 ಇದರ ಔಪಚಾರಿಕ ಘೋಷಣೆಗೆ ದಿನ ನಿಗದಿಯಾಗಿದೆ. ಇದೇ ಬರುವ ಜುಲೈ 24ರ ಗುರುವಾರ ದಿನ ಅಮಾವಾಸ್ಯೆಯಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಷಾ ಅವರು, ಸಹಕಾರ ಸಚಿವಾಲಯದ ಪ್ರಧಾನ ಕಚೇರಿ ನವದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದ ಸಭಾಂಗಣದಲ್ಲಿ ಔಪಚಾರಿಕವಾಗಿ ಬಿಡುಗಡೆ ಮಾಡಲಿದ್ದಾರೆ.

    https://chat.whatsapp.com/EbVKVnWB6rlHT1mWtsgbch
    ರಾಷ್ಟ್ರೀಯ ಸಹಕಾರ ನೀತಿಯ ಅನಾವರಣವು ಭಾರತದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಸಮೃದ್ಧಿ (ಸಹಕಾರದ ಮೂಲಕ ಸಮೃದ್ಧಿ) ದೃಷ್ಟಿಕೋನದಡಿ ಸಹಕಾರಿ ವಲಯವನ್ನು ಬಲಪಡಿಸುವ ಮತ್ತು ಆಧುನೀಕರಿಸುವ ಗುರಿಯನ್ನು ಹೊಂದಿರುವ ಪರಿವರ್ತನಾಶೀಲ ಸುಧಾರಣೆಗಳಿಗೆ ಈ ರಾಷ್ಟ್ರೀಯ ಸಹಕಾರ ನೀತಿ ಅಡಿಪಾಯ ಹಾಕುವ ನಿರೀಕ್ಷೆಯಿದೆ.


    ರಾಷ್ಟ್ರೀಯ ಸಹಕಾರಿ ನೀತಿಯನ್ನು ಸಿದ್ಧಪಡಿಸಲು, ಭಾರತ ಸರ್ಕಾರವು 2022ರ ಸೆಪ್ಟೆಂಬರ್ 2ರಂದು ಮಾಜಿ ಸಚಿವ ಸುರೇಶ್ ಪ್ರಭು ಅವರ ಅಧ್ಯಕ್ಷತೆಯಲ್ಲಿ ಸಹಕಾರಿ ವಲಯದ ತಜ್ಞರು, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಪ್ರಾಥಮಿಕ ಹಂತದ ಸಂಘಗಳ ಪ್ರತಿನಿಧಿಗಳು ಹಾಗೂ ಸಹಕಾರ ಸಚಿವಾಲಯ ಮತ್ತು ಇತರ ಕೇಂದ್ರ ಸಚಿವಾಲಯಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸಮಾಲೋಚನಾ ಪ್ರಕ್ರಿಯೆಯ ಭಾಗವಾಗಿ 17 ಸಭೆಗಳನ್ನು ನಡೆಸಿತ್ತಲ್ಲದೆ, ಸಹಕಾರಿ ಸಂಘಗಳು, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕಾ ತಜ್ಞರಿಂದ ಸಲಹೆಗಳನ್ನು ಸಂಗ್ರಹಿಸಲು ನಾಲ್ಕು ಪ್ರಾದೇಶಿಕ ಕಾರ್ಯಾಗಾರಗಳನ್ನು ಆಯೋಜಿಸಿತ್ತು. ಇಲ್ಲಿ ಬಂದ ಸಲಹೆಗಳನ್ನು ಆಯ್ಕೆ ಮಾಡಿ ಕರಡು ನೀತಿಯಲ್ಲಿ ಸೇರಿಸಲಾಗಿದೆ.
    ಸಹಕಾರಿ ನೀತಿಯು 2024ರಿಂದ 2047ರವರೆಗಿನ ಬೆಳವಣಿಗೆಗೆ ರಚನಾತ್ಮಕ ಮಾರ್ಗಸೂಚಿಯನ್ನು ಒದಗಿಸುವ ಮೂಲಕ ಭಾರತದ ಸಹಕಾರಿ ವ್ಯವಸ್ಥೆಯ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣ ಮಾಡಲು ಪ್ರಯತ್ನಿಸುತ್ತದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಕರಡಿನ ಪ್ರಮುಖ ಮುಖ್ಯಾಂಶಗಳಲ್ಲಿ ಹಲವಾರು ಹೊಸ ಉನ್ನತ ಮಟ್ಟದ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಸ್ತಾಪವಿದೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ ಸಹಕಾರಿ ಸಂಸ್ಥೆಗಳಿಗಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆ, ಸಹಕಾರಿ ಸಂಸ್ಥೆಗಳಲ್ಲಿ ಶ್ರೇಷ್ಠತಾ ಕೇಂದ್ರ, ರಾಷ್ಟ್ರೀಯ ಸಹಕಾರಿ ನೇಮಕಾತಿ ಮಂಡಳಿ, ರಾಷ್ಟ್ರೀಯ ಸಹಕಾರಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಮಂಡಳಿ ಮತ್ತು ರಾಷ್ಟ್ರೀಯ ಸಹಕಾರಿ ನ್ಯಾಯಮಂಡಳಿಗಳು ಸೇರಿವೆ ಎನ್ನಲಾಗಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    a Centre for Excellence in Cooperatives a National Cooperative Audit & Accounting Board a National Cooperative Recruitment Board and a National Cooperative Tribunal. Atal Akshay Urja Bhawan Cooperation Minister Amit Shah Development Financial Institution for Cooperatives National Co-op Policy 2025 National Level Committee New Delhi PM's vision of Sahakar se Samriddhi Prosperity through Cooperation Suresh Prabhakar Prabhu
    Previous Articleಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಮಲ್ಪೆ ಶಾಖೆ ಉದ್ಘಾಟನೆ
    Next Article ನಾಳೆ ಒಡಿಯೂರು ಸಂಸ್ಥಾನದಲ್ಲಿ ಬೃಹತ್‌ ವೈದ್ಯಕೀಯ ಸೇವಾ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.