ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆ.ರವಿರಾಜ ಹೆಗ್ಡೆ, ಉಪಾಧ್ಯಕ್ಷರಾಗಿ ಉದಯ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವಿರಾಜ್ ಹೆಗ್ಡೆ ಮತ್ತು ಉದಯ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಯಿತು.
https://chat.whatsapp.com/EbVKVnWB6rlHT1mWtsgbch
ಈ ಹಿಂದೆ ನಡೆಇದ್ದ ನಿರ್ದೇಶಕರ ಚುನಾವಣೆಯಲ್ಲಿ ಕುಂದಾಪುರ ಉಪವಿಭಾಗದಿಂದ ರವಿರಾಜ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ಉದಯ ಎಸ್.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಧಾಕರ ಶೆಟ್ಟಿ ಮುಡಾರು, ಎನ್.ಮಂಜಯ್ಯ ಶೆಟ್ಟಿ ಕೆ.ಶಿವಮೂರ್ತಿ, ಮಂಗಳೂರು ಉಪವಿಭಾಗದಿಂದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುಚರಿತ ಶೆಟ್ಟಿ, ಬಿ.ಸುಧಾಕರ ರೈ, ನಂದರಾಮ ರೈ, ಪುತ್ತೂರು ಉಪವಿಭಾಗದಿಂದ ಎಸ್.ಬಿ.ಜಯರಾಮ ರೈ ಭರತ್ ಎನ್., ಕೆ.ಚಂದ್ರಶೇಖರ ರಾವ್, ಎಚ್.ಪ್ರಭಾಕರ, ಉಡುಪಿ ಜಿಲ್ಲಾ ಮಹಿಳಾ ಸ್ಥಾನ ಮಮತಾ ಆರ್.ಶೆಟ್ಟಿ, ದ.ಕ. ಜಿಲ್ಲಾ ಮಹಿಳಾ ಸ್ಥಾನದಿಂದ ಸವಿತಾ ಎನ್.ಶೆಟ್ಟಿ ವಿಜಯ ಸಾಧಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com