ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನೂತನ ನಿರ್ದೇಶಕರ ಆಯ್ಕೆ ಸಂಬಂಧಿಸಿ ಶನಿವಾರ ನಡೆದ ಚುನಾವಣೆಯಲ್ಲಿ 16 ಮಂದಿ ಆಯ್ಕೆಯಾಗಿದ್ದು ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಬೆಂಬಲಿಗರ ಹೈನುಗಾರ ಸಹಕಾರಿಗಳ ಬಳಗ ವಿಜಯ ದಾಖಲಿಸಿದೆ. ಮೇ 6ರಂದು ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಡಾ|ಎಂ.ಎನ್ ರಾಜೇಂದ್ರ ಕುಮಾರ್ ಬೆಂಬಲಿತ ತಂಡದ ಅಭ್ಯರ್ಥಿಗಳು ಗೆದ್ದಿದ್ದಾರೆ. ನಿರ್ದೇಶಕರ ಚುನಾವಣೆಗೆ ಒಟ್ಟು 41 ಮಂದಿ ಅಂತಿಮ ಕಣದಲ್ಲಿದ್ದು, ಅವಿರೋಧ ಆಯ್ಕೆಗಾಗಿ ಮಾತುಕತೆ ನಡೆದರೂ ಫಲಕಾರಿಯಾಗದೆ ಚುನಾವಣೆ ನಡೆದಿತ್ತು. ಕುಂದಾಪುರ ಉಪವಿಭಾಗದಿಂದ ರವಿರಾಜ ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ ಉದಯ ಎಸ್.ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಧಾಕರ ಶೆಟ್ಟಿ ಮುಡಾರು, ಎನ್.ಮಂಜಯ್ಯ ಶೆಟ್ಟಿ ಕೆ.ಶಿವಮೂರ್ತಿ ಆಯ್ಕೆಯಾಗಿದ್ದಾರೆ. ಮಂಗಳೂರು ಉಪವಿಭಾಗದಿಂದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುಚರಿತ ಶೆಟ್ಟಿ, ಬಿ.ಸುಧಾಕರ ರೈ, ನಂದರಾಮ ರೈ, ಪುತ್ತೂರು ಉಪವಿಭಾಗದಿಂದ ಎಸ್.ಬಿ.ಜಯರಾಮ ರೈ ಭರತ್ ಎನ್., ಕೆ.ಚಂದ್ರಶೇಖರ ರಾವ್, ಎಚ್.ಪ್ರಭಾಕರ, ಉಡುಪಿ ಜಿಲ್ಲಾ ಮಹಿಳಾ ಸ್ಥಾನ ಮಮತಾ ಆರ್.ಶೆಟ್ಟಿ, ದ.ಕ. ಜಿಲ್ಲಾ ಮಹಿಳಾ ಸ್ಥಾನದಿಂದ ಸವಿತಾ ಎನ್.ಶೆಟ್ಟಿ ವಿಜಯ ಸಾಧಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಪಡೆದ ಮತಗಳು: ಪುತ್ತೂರು ಉಪವಿಭಾಗ: ಕೆ.ಚಂದ್ರಶೇಖರ ರಾವ್ (169), ಜಗನ್ನಾಥ ಶೆಟ್ಟಿ (51), ಎಸ್.ಬಿ.ಜಯರಾಮ ರೈ (190), ಎಚ್.ಪ್ರಭಾಕರ (157), ಭರತ್ ಎನ್ (173), ಪಿ.ರಮೇಶ್ ಪೂಜಾರಿ(36), ರಾಮಕೃಷ್ಣ ಡಿ. (36)
ಮಂಗಳೂರು ಉಪವಿಭಾಗ: ನಂದರಾಮ್ ರೈ(96), ಸುಚರಿತ ಶೆಟ್ಟಿ(99), ಸುದರ್ಶನ್ ಜೈನ್ (22), ಸುಧಾಕರ ಪೈ(97), ಸುದೀಪ್ ಆರ್.ಅಮೀನ್ (83), ಸುಭದ್ರಾ ಎನ್.ರಾವ್ (79),
ಕುಂದಾಪುರ ಉಪವಿಭಾಗ: ಅಶೋಕ್ ಕುಮಾರ್ ಶೆಟ್ಟಿ (28), ಅಶೋಕ್ ರಾವ್(77), ಉದಯ ಎಸ್.ಕೋಟ್ಯಾನ್(172), ಉಲ್ಲಾಸ್ ಶೆಟ್ಟಿ (28), ಕಮಲಾಕ್ಷ ಹೆಬ್ಬಾರ್(68), ಕಾಪು ದಿವಾಕರ ಶೆಟ್ಟಿ (95), ದಿನಕರ ಶೆಟ್ಟಿ(96), ದೇವಿಪ್ರಸಾದ್ ಶೆಟ್ಟಿ (164), ಎಂ.ಪ್ರಕಾಶ್ ಶೆಟ್ಟಿ (27), ಎಸ್.ಪ್ರಕಾಶ್ಚಂದ್ರ ಶೆಟ್ಟಿ(185), ಟಿ.ವಿ.ಪ್ರಾಣೇಶ್ ಯಡಿಯಾಳ(73), ಭೋಜ ಪೂಜಾರಿ(77), ಕೆ.ಮೋಹನದಾಸ ಅಡ್ಯಂತಾಯ(85), ಮಂಜಯ್ಯ ಶೆಟ್ಟಿ (145), ರವಿರಾಜ್ ಎನ್.ಶೆಟ್ಟಿ (33), ರವಿರಾಜ ಹೆಗ್ಡೆ (220), ಕೆ.ಶಿವಮೂರ್ತಿ(124), ಕೆ.ಸರ್ವೋತ್ತಮ (20), ಸುಧಾಕರ ಶೆಟ್ಟಿ (162), ಸುಬ್ಬಣ್ಣ ಶೆಟ್ಟಿ(94), ಸುರೇಶ್ ಶೆಟ್ಟಿ( 104)
ಮಹಿಳಾ ಸ್ಥಾನ ದ.ಕ.: ಅನುರಾ ವಾಯೋಲಾ ಡಿಸೋಜ(32), ಉಷಾ ಅಂಚನ್ (5), ಶರ್ಮಿಳಾ ಕೆ (99), ಸವಿತಾ ಎನ್.ಶೆಟ್ಟಿ(235).
ಮಹಿಳಾ ಸ್ಥಾನ ಉಡುಪಿ: ಮಮತಾ ಆರ್.ಶೆಟ್ಟಿ(190), ಶಾಂತಾ ಎಸ್.ಭಟ್ (60), ಸ್ಮಿತಾ ಆರ್ ಶೆಟ್ಟಿ(67)
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com