ನವದೆಹಲಿ: ಪ್ರಸಿದ್ಧ ವಿಧಿವಿಜ್ಞಾನ ತಜ್ಞ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ.ಜೆ.ಎಂ. ವ್ಯಾಸ್ (ಜಯಂತ್‌ಕುಮಾರ್ ಮಗನ್‌ಲಾಲ್ ವ್ಯಾಸ್ ) ಅವರನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಗಿದೆ.
https://chat.whatsapp.com/EbVKVnWB6rlHT1mWtsgbch
ಗೃಹ ಸಚಿವಾಲಯದ ಅಧೀನದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) ಸ್ಥಾಪಕ ಉಪಕುಲಪತಿಯಾಗಿರುವ ಡಾ.ಜೆ.ಎಂ.ವ್ಯಾಸ್ ಈ ಹೊಸ ಹುದ್ದೆ ವಹಿಸಿಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಹೊಸ ಮಜಲು ಏರಿದ್ದಾರೆ. ಭಾರತದಲ್ಲಿ ವಿಧಿವಿಜ್ಞಾನ ಮತ್ತು ಶಿಕ್ಷಣದ ಪ್ರವರ್ತಕರೂ ಆಗಿರುವ ಜಯಂತ್‌ಕುಮಾರ್ ಮಗನ್‌ಲಾಲ್ ವ್ಯಾಸ್ ಗುಜರಾತ್ ರಾಜ್ಯದ ಗಾಂಧಿನಗರದ ಎನ್‌ಎಫ್‌ಎಸ್‌ಯುನ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 1993ರಿಂದ 2009ರ ತನಕ ನಿವೃತ್ತರಾಗುವವರೆಗೆ ಗುಜರಾತ್ ರಾಜ್ಯದ ವಿಧಿವಿಜ್ಞಾನ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಮೂರು ದಶಕಗಳ ಕಾಲ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದರು. ಡಾ.ವ್ಯಾಸ್ ಅವರು 2009 ರಲ್ಲಿ ಪ್ರಾರಂಭವಾದಾಗಿನಿಂದ 2020ರಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳ್ಳುವವರೆಗೆ ಗುಜರಾತ್ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಉಪಕುಲಪತಿಯಾಗಿ ನೇತೃತ್ವ ವಹಿಸಿದ್ದರು.
ತಮ್ಮ ಸೇವಾವಧಿಯಲ್ಲಿ ಡಾ.ವ್ಯಾಸ್ ಅವರು ಹಲವಾರು ಪ್ರತಿಷ್ಠಿತ ಗೌರವಗಳನ್ನೂ ಪಡೆದಿದ್ದಾರೆ. ಅವರಿಗೆ 1997ರಲ್ಲಿ ರಾಷ್ಟ್ರಪತಿ ಪದಕ ಮತ್ತು 2004ರಲ್ಲಿ 15 ನೇ ಅಖಿಲ ಭಾರತ ವಿಧಿವಿಜ್ಞಾನ ವಿಜ್ಞಾನ ಸಮ್ಮೇಳನದಲ್ಲಿ ಅತ್ಯುತ್ತಮ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ನಿರ್ದೇಶಕರಾಗಿ ಪ್ರಶಂಸಾ ಪ್ರಮಾಣಪತ್ರ ಲಭಿಸಿತ್ತು. 2008ರಲ್ಲಿ ಅಮಿಟಿ ವಿಶ್ವವಿದ್ಯಾಲಯ ಮತ್ತು ನವದೆಹಲಿಯ ಏಮ್ಸ್ನಿಂದ ವಿಧಿವಿಜ್ಞಾನ ರಸಾಯನಶಾಸ್ತ್ರದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದರು. ವಿಧಿವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ, 2022ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಡಾ.ವ್ಯಾಸ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಹಲವಾರು ಕಾರ್ಯತಂತ್ರಗಳನ್ನು ರೂಪಿಸಲಾಗಿದ್ದು, ಇದರಲ್ಲಿ ಜಿಸಿಟಿಸಿ ಮತ್ತು ಥಿಂಕ್‌ಟ್ಯಾಂಕ್, ಪೆನಿನ್ಸುಲಾ ಫೌಂಡೇಶನ್ ಮತ್ತು ಅದಾನಿ ಗ್ರೂಪ್‌ನೊಂದಿಗೆ ಮಾರ್ಚ್ 2, 2022ರಂದು ಸಹಿ ಹಾಕಲಾದ ಒಪ್ಪಂದಗಳೂ ಸೇರಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com