ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಲೂವಿಸ್ ಲೋಬೊ, ಉಪಾಧ್ಯಕ್ಷರಾಗಿ ಜೇಮ್ಸ್ ಡಿಸೋಜ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಗುರುವಾರ ಉಡುಪಿ ಕ್ರಿಸ್ತಜೋತಿ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ ಲೂವಿಸ್ ಲೋಬೊ ಆದಿ ಉಡುಪಿ ಹಾಗೂ ಉಪಾಧ್ಯಕ್ಷ ಜೇಮ್ಸ್ ಡಿಸೋಜ ಕಾಪು ಅವರನ್ನು ಆರಿಸಲಾಯಿತು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸಹಕಾರ ಅಭಿವೃಧಿ ಅಧಿಕಾರಿ ಜಯಂತಿ ಎಸ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಎ.ಫೆರ್ನಾಂಡಿಸ್ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು. ಆಡಳಿತ ಮಂಡಳಿಗೆ ನೂತನವಾಗಿ ಚುನಾಯಿತರಾದ ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್ ಮೂಡುಬೆಳ್ಳೆ, ಪರ್ಸಿ ಜಿ.ಡಿಸೋಜ ಕಲ್ಯಾಣಪುರ, ಆರ್ಚಿಬಾಲ್ಡ್ ಎಸ್. ಡಿಸೋಜ ತೊಟ್ಟಂ, ಡಾ॥ ನೇರಿ ಕರ್ನೇಲಿಯೋ ಕಕ್ಕುಂಜೆ-ಅಂಬಾಗಿಲು, ಶ್ರೀಮತಿ ಲಾಯ್ಸೆಟ್ ಜೆ.ಕರ್ನೇಲಿಯೋ ಕನ್ನರ್ಪಾಡಿ-ಕಡೇಕಾರು, ರಿಚರ್ಡ್ ಡಾಯಸ್ ಸಂತೆಕಟ್ಟೆ, ರಾಬರ್ಟ್ ಮ್ಯಾಕ್ಸಿಂ ಡಿಸೋಜ ಉಡುಪಿ, ಡಾಲ್ಫಿ ವಿಕ್ಟರ್ ಲೂವಿಸ್ ಉಡುಪಿ, ವಿಲಿಯಂ ಬಿ.ಮಚಾದೋ ಶಿರ್ವ, ಓನಿಲ್ ಜಾನ್ಸನ್ ಡಿಸೋಜ ಕೊಡವೂರು ಹಾಗೂ ಜೆನೆವಿವ್ ಮರೀನಾ ಮಿನೇಜಸ್ ಕಲ್ಮಾಡಿ ಉಪಸ್ಥಿತರಿದ್ದರು.
ಫೆಬ್ರವರಿ 2ರಂದು ನಡೆದ ನೂತನ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿತಾಯ, ಅಭಿವೃದ್ಧಿ, ಹಂಚುವಿಕೆ ಎಂಬ ಧ್ಯೇಯದೊಂದಿಗೆ 28 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಹಕಾರ ಸಂಸ್ಥೆಯು ಉಡುಪಿ ಕೆ.ಎಂ. ಮಾರ್ಗದಲ್ಲಿ ಆಡಳಿತ ಕಚೇರಿಯನ್ನು ಹೊಂದಿದೆ. ಉಡುಪಿ, ಮಲ್ಪೆ, ಉದ್ಯಾವರ, ಶಿರ್ವ ಮತ್ತು ಹೂಡೆ-ಕೆಮ್ಮಣ್ಣುಗಳಲ್ಲಿ ಶಾಖೆಗಳು ಕಾರ್ಯಾಚರಿಸುತ್ತಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com