ಕಾರ್ಕಳ: ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಕಾರ್ಕಳ ಇದರ ವತಿಯಿಂದ ಕಾರ್ಕಳದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ರೆಫ್ರಿಜರೇಟರ್ ಕೊಡುಗೆ ಹಾಗೂ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
https://chat.whatsapp.com/EbVKVnWB6rlHT1mWtsgbch
ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ ಸಂಘ ಸಂಸ್ಥೆಗಳು ಇಂಥ ಕೊಡುಗೆಗಳನ್ನು ನೀಡುವುದರಿಂದ ಹಲವಾರು ಬಡವರಿಗೆ ಉಪಯೋಗವಾಗುತ್ತದೆ. ಎಲ್ಲವನ್ನೂ ಸರಕಾರದಿಂದ ಭರಿಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ನೀಡುವ ಕೊಡುಗೆಗಳಿಂದ ನೆರವಾಗುತ್ತದೆ ಎಂದು ತಿಳಿಸಿ ಸಂಘಕ್ಕೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಸಂತೋಷ್ ರಾವ್ ಮಾತನಾಡಿ ಸಂಘವು ಈ ಹಿಂದೆಯೂ ಸರಕಾರಿ ಆಸ್ಪತ್ರೆಗೆ ಕೊರೋನ ಸಂದರ್ಭದಲ್ಲಿ ಆಮ್ಲಜನಕ ಘಟಕಕ್ಕೆ ಧನಸಹಾಯ ನೀಡಿದೆ. ಇದರ ಜೊತೆಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಹಾಗೆಯೇ ಶಾಸಕರ ಸಹಕಾರ ಸಂಘಕ್ಕೂ ಇರಲಿ ಎಂದು ಆಶಿಸಿದರು.
ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಶಶಿಕಲಾ, ಸಹ ವೈದ್ಯರಾದ ಡಾ| ಅನಂತ್ ಕಾಮತ್, ಡಾI ಉದಯ ಕುಮಾರ್ ಹಾಗೂ ಸಂಘದ ಉಪಾಧ್ಯಕ್ಷ ವೃಷಭರಾಜ್ ಕಡಂಬ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ, ನಿರ್ದೇಶಕರಾದ ಯೋಗೀಶ್ ಸಾಲಿಯಾನ್, ಸಂದೀಪ್ ನಾಯಕ್, ದಿನೇಶ್ ಕುಮಾರ್, ವೈ. ಅನಿಲ್ ಕುಮಾರ್ ಸಂಘದ ಸಿಬ್ಬಂದಿ ಹಾಗೂ ಅಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com