ನವದೆಹಲಿ: ಸಹಕಾರ ಕ್ಷೇತ್ರದ ವೃತ್ತಿಪರ ಸಾಧಕರಾದ ಡಾ.ಮಂಗಳಾ ರೈ ಹಾಗೂ ಡಾ.ಅಶೋಕ್ ಗುಲಾಟಿ ಅವರಿಗೆ 2023-24ನೇ ಸಾಲಿನ ಯು.ಎಸ್.ಅವಸ್ಥಿ ಇಫ್ಕೋ ಜೀವಮಾನ ಸಾಧಕ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
https://chat.whatsapp.com/Ge11n7QCiMj5QyPvCc0H19
ಗುರುವಾರ ಭಾರತೀಯ ರಸಗೊಬ್ಬರ ಸಂಘ(ಎಫ್‌ಎಐ- ಫರ್ಟಿಲೈಸರ್ ಅಸೋಸಿಯೇಶನ್ ಆಫ್ ಇಂಡಿಯಾ)ದ 60ನೇ ವಾರ್ಷಿಕ ಸೆಮಿನಾರ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೃಷಿ ಮತ್ತು ರಸಗೊಬ್ಬರ ಕ್ಷೇತ್ರದಲ್ಲಿ ಮಾಡಿರುವ ಅದ್ವಿತೀಯ ಸಾಧನೆಗಾಗಿ ಈ ಇಬ್ಬರಿಗೆ ಈ ಪ್ರಶಸ್ತಿ ನೀಡಲಾಗಿದೆ. ಡಾ.ಮಂಗಳಾ ರೈ ಅವರಿಗೆ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಈ ಪುರಸ್ಕಾರ ಪ್ರದಾನ ಮಾಡಲಾಗಿದ್ದರೆ, ಡಾ.ಅಶೋಕ್ ಗುಲಾಟಿ ರಸಗೊಬ್ಬರ ಕ್ಷೇತ್ರದಲ್ಲಿ ಮಾಡಿರುವ ಉನ್ನತ ಸಾಧನೆಗಾಗಿ ಈ ಪುರಸ್ಕಾರ ಪ್ರದಾನ ಮಾಡಲಾಗಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಅನುಪ್ರಿಯಾ ಎಸ್.ಪಟೇಲ್ ಈ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 2.5 ಮಿಲಿಯ ರೂ., ಚಿನ್ನದ ಪದಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
2017ರಲ್ಲಿ ಪ್ರಾರಂಭಿಸಲಾದ ಯು.ಎಸ್.ಅವಸ್ಥಿ ಜೀವಮಾನ ಸಾಧಕ ಪುರಸ್ಕಾರವು ಕೃಷಿ ಮತತು ರಸಗೊಬ್ಬರ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com