2024-25ನೇ ಸಾಲಿನ ಎರಡು ಲಕ್ಷ ರೂ.ಗಳ ವಿದ್ಯಾರ್ಥಿವೇತನಕ್ಕೆ ಮಾದರಿ ಪರೀಕ್ಷೆ
ಸಿಂಧನೂರು: ಇಲ್ಲಿನ ಆಕ್ಸ್‌ಫರ್ಡ್ ಸೌಹಾರ್ದ ಸಂಘದ ವತಿಯಿಂದ ನೀಡಲಾಗುವ ಎರಡು ಲಕ್ಷ ರೂ.ಗಳ ವಿದ್ಯಾರ್ಥಿವೇತನದ ಪೋಸ್ಟರ್ ಬಡುಗಡೆ ಕಾರ್ಯಕ್ರಮ ಶುಕ್ರವಾರ ಸಂಘದ ಲಕ್ಷ್ಮೀಪೂಜೆ ಸಂದರ್ಭದಲ್ಲಿ ನಡೆಯಿತು.https://chat.whatsapp.com/Ge11n7QCiMj5QyPvCc0H19
ಶುಕ್ರವಾರ ಸಹಕಾರಿಯ ಕಚೇರಿಯಲ್ಲಿ ಲಕ್ಷ್ಮೀದೇವಿ ಪೂಜಾ ಕಾರ್ಯಕ್ರಮ ನಡೆದ ಬಳಿ, ದೀಪಾವಳಿಯು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಭರವಸೆ ಮತ್ತು ನಾಳೆಯ ಹೊಸ ಕನಸುಗಳ ಈಡೇರಿಕೆಗೆ ನೆರವಾಗಲು 2024-25ನೇ ಸಾಲಿನ ಎರಡು ಲಕ್ಷ ರೂ.ಗಳ ಆಕ್ಸ್‌ಫರ್ಡ್ ವಿದ್ಯಾರ್ಥಿವೇತನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆಕ್ಸ್‌ಫರ್ಡ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಠಿ, ನಿರ್ದೇಶಕರಾದ ಪ್ರವೀಣ ಸೋಲಂಕಿ, ನಾಗರಾಜ್ ಗುಪ್ತ, ಬಸವರಾಜ್ ಪಾಟೀಲ್, ಮುಖ್ಯ ಕಾರ್ಯನಿರ್ವಾಹಕ ವಿಶ್ವನಾಥ ಕುಲಕರ್ಣಿ, ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.
2024-25ನೇ ಸಾಲಿನ ವಿದ್ಯಾರ್ಥಿವೇತನದ ವಿವರ:
- ಆಕ್ಸ್‌ಫರ್ಡ್ ಸೌಹಾರ್ದ ಸಹಕಾರಿ ಸಂಘದಿಂದ ಪ್ರಸಕ್ತ ಎರಡನೇ ವರ್ಷ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
- ವಿದ್ಯಾರ್ಥಿಗಳಿಗೆ ಎರಡು ಸಾವಿರ ರೂ.ಗಳ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿಭಾಗಕ್ಕೆ ಪ್ರತ್ಯೇಕಿಸಿ ನೀಡಲಾಗುವುದು.
- ವಿದ್ಯಾರ್ಥಿವೇತನ ಪಡೆಯುವವರು ಸಿಂಧನೂರಿನ ಆಕ್ಸ್‌ಫರ್ಡ್ ಸೌಹಾರ್ದ ಸಹಕಾರಿ ಸಂಘದಲ್ಲಿ ಖಾತೆ ಹೊಂದುವುದು ಕಡ್ಡಾಯ.
- ವಿದ್ಯಾರ್ಥಿವೇತನಕ್ಕೆ ಬಹು ಆಯ್ಕೆ ಮಾದರಿಯ ಪರೀಕ್ಷೆ ಮಾಡಲಾಗುವುದು.
- ವಿದ್ಯಾರ್ಥಿವೇತನಕ್ಕೆ ಪರೀಕ್ಷೆ ಬರೆಯುವವರು ಪ್ರಥಮ, ದ್ವಿತೀಯ ಪಿಯುಸಿ ಹಾಗೂ ಪದವಿ ಪ್ರಥಮ, ದ್ವಿತೀಯ, ಅಂತಿಮ ವರ್ಷದ ವಿದ್ಯಾರ್ಥಿಗಳು, ತಾಂತ್ರಿಕ ಮತ್ತು ಪಿಜಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರು.
- ಪಿಯುಸಿ, ಪದವಿ ಹಾಗೂ ಪಿಜಿ ವಿಭಾಗಕ್ಕೆ ಪ್ರತ್ಯೇಕ ಪ್ರಶ್ನೆಪತ್ರಿಕೆ ಇರುತ್ತದೆ.
- ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬರೆಯಲು ಮುಕ್ತ ಅವಕಾಶವಿದೆ.
- ವಿದ್ಯಾರ್ಥಿವೇತನ ಒಂದು ವರ್ಷಕ್ಕೆ ಮಾತ್ರ ಸೀಮಿತ.
- ಪರೀಕ್ಷೆಗೆ ವಿದ್ಯಾರ್ಥಿಗಳ ಖಾತೆ ವಿದ್ಯಾನಿಧಿ ಖಾತೆಯೊಂದಿಗೆ ನೋಂದಣಿ ಕಡ್ಡಾಯ.
- ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಇರಲಿದೆ.
- ಪರೀಕ್ಷೆ ದಿನ: 19-02-2025. ಸ್ಥಳ: ಆಕ್ಸ್‌ಫರ್ಡ್ ಮಹಾವಿದ್ಯಾಲಯ ಆರ್.ಕೆ ಕಾಂಪ್ಲೆಕ್ಸ್ ಸಿಂಧನೂರು
ನೋದಣಿಗೆ ಕೊನೆಯ ದಿನಾಂಕ: 25-01-2025
ಪರೀಕ್ಷೆಯಲ್ಲಿ ಪ್ರಥಮ 20,000 ರೂ., ದ್ವಿತೀಯ: 10,000, ತೃತೀಯ: 5,000 ರೂ. ಬಹುಮಾನವಿದೆ.
ಆಕ್ಸ್‌ಫರ್ಡ್ ವಿದ್ಯಾನಿಧಿ ಸದಸ್ಯತ್ವ, ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 9880421043, 9480139288, 9449050515, 8317423117, 7338429908.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com