ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ ಅಭಿಮತ
ಹಿರೇಕೆರೂರು: ಮಹಾತ್ಮ ಗಾಂಧಿ ಈ ದೇಶ ಕಂಡ ಮಹಾನ್ ದೇಶಭಕ್ತ. ಅತ್ಯಂತ ಆತ್ಮಾಭಿಮಾನದ ಶ್ರೇಷ್ಠ ವ್ಯಕ್ತಿತ್ವ ರೂಢಿಸಿಕೊಂಡು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರು ಎಂದು ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘದ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ ಹೇಳಿದರು.
ಹಿರೇಕೆರೂರ ತಾಲೂಕಾ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲಾ ಶಾಲಾ-ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
ಮಹಾತ್ಮ ಗಾಂಧಿಯವರು ಮುಖ್ಯವಾಗಿ ಈ ದೇಶದ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಿ ತುಳಿತಕ್ಕೊಳಗಾದ ದೀನ-ದಲಿತರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರಬೇಕೆಂಬ ಕನಸು ಕಂಡಿದ್ದರು. ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯ ಕಲ್ಪನೆ ಅದ್ಭುತವಾದದ್ದು ಮತ್ತು ವಿಶ್ವಕ್ಕೆ ಮಾದರಿಯಾದದು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತ ಕಂಡ ಅಪ್ರತಿಮ ಪ್ರಧಾನಿಯಾಗಿ ಈ ದೇಶವನ್ನು ಸದೃಡ, ಸಮರ್ಥ ಭಾರತವನ್ನಾಗಿ ನಿರ್ಮಾಣಗೊಳಿಸಲು ತಮ್ಮನ್ನು ತೊಡಗಿಸಿಕೊಂಡ ಧೀಮಂತ ವ್ಯಕ್ತಿ. ಇಂತಹವರ ಆದರ್ಶ ತತ್ವಗಳು ಮತ್ತು ಅವರ ವ್ಯಕ್ತಿತ್ವ ಭಾರತೀಯರೆಲ್ಲರಿಗೂ ಆದರ್ಶಪ್ರಿಯ, ಅಂತಹ ತತ್ವಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣನವರ ಮಾತನಾಡಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಾಡಿರುವ ಸಾಧನೆಗಳು ಬರೀ ಭಾಷಣಕ್ಕೆ ಸೀಮಿತವಾಗದೇ ಈಗಿನ ಯುವಪೀಳಿಗೆ ಅಂತಹ ದಾರಿಯಲ್ಲಿ ಸಾಗುವಂತಾಗಬೇಕು, ಅವರು ತಮ್ಮ ಸತ್ಯ, ನಿಷ್ಠೆ, ತ್ಯಾಗ, ಬಲಿದಾನಗಳಿಂದ ಜಗತ್ತೇ ನಿಬ್ಬೆರಗಾಗುವಂತೆ ಇನ್ನೊಬ್ಬರಿಗಾಗಿ ತಮ್ಮ ಬದುಕನ್ನು ದಾರೆಯೆರೆದ ಮಹಾನ್ ಚೇತನ. ಅಂತಹ ಮಹಾನ್ ಚೇತನದ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ. ಅವರ ಬದುಕು, ಸ್ವತಂತ್ರ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆ ಇವೆಲ್ಲವನ್ನು ದೇಶಕ್ಕೆ ಧಾರೆಯೆರೆದ ಮಹಾ ಮಾನವತಾವಾದಿ ಅವರು. ಇಂತಹವರ ಬದುಕು ನಮಗೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸರ್ವಧರ್ಮೀಯ ಪಠಣ ಬೋಧಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ವಿ.ಸಿ.ಹೊಗಿಸೊಪ್ಪನವರ, ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಬಿ.ಚನ್ನಗೌಡ್ರ, ಬಿ.ಪಿ.ಹಳ್ಳೇರ, ಕೆ.ಹೆಚ್.ಮಾವಿನತೋಪ, ಮುಖ್ಯೋಪಾಧ್ಯಾಯ ಆರ್.ಹೆಚ್.ಬೆಟ್ಟಳ್ಳೇರ, ಆರ್.ಹೆಚ್.ಪೂಜಾರ, ಸತೀಶ ಬಣಕಾರ, ಬಿ.ವ್ಹಿ.ಸನ್ನೇರ, ರವಿ ಬಡಳ್ಳೇರ ಹಾಗೂ ಸಂಸ್ಥೆಯ ಶಾಲಾ-ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಆರ್.ಎಂ.ಕರೇಗೌಡ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಪಿ.ಎಂ.ಡಮ್ಮಳ್ಳಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com