ಸರ್ವ ಸದಸ್ಯರ ಮಹಾಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಡಾ.ಅಶೋಕ್‌ವರ್ಧನ್ ಹೇಳಿಕೆ
ಸೊಸೈಟಿಗೆ 61 ಲಕ್ಷ ನಿವ್ವಳ ಲಾಭ
ಕೆಜಿಎಫ್: ವಾಣಿಜ್ಯೋದ್ಯಮವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರು ಹಾಗೂ ಇತರೆ ವರ್ಗದವರಿಗೆ ಸಣ್ಣ ಪ್ರಮಾಣದ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಸ್ವರ್ಣ ವಿಲಾಸ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ.ಅಶೋಕ್‌ವರ್ಧನ್ ತಿಳಿಸಿದರು.
ಕೆಜಿಎಫ್ ನಗರದ ಒಂದನೇ ಅಡ್ಡರಸ್ತೆಯಲ್ಲಿರುವ ವಿಷ್ಣು ಸಮಾಜ ಭವನದಲ್ಲಿ ಹಮ್ಮಿಕೊಂಡಿದ್ದ ಏಳನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
https://chat.whatsapp.com/Ge11n7QCiMj5QyPvCc0H19
61 ಲಕ್ಷ ನಿವ್ವಳ ಲಾಭ : ಕಳೆದ ವರ್ಷ ರೂ.45.60.177 ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಉತ್ತಮ ರೀತಿಯಲ್ಲಿ ವಸೂಲಾತಿ ಮಾಡಿರುವುದರಿಂದ 61,52,874 ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಶೋಕ್‌ವರ್ಧನ್ ತಿಳಿಸಿದರು.
ಗ್ರಾಹಕರು 2023-24 ನೇ ಸಾಲಿನ ವರ್ಷಾಂತ್ಯಕ್ಕೆ ರೂ. 21,41,62.500 ಠೇವಣಿ ಇಟ್ಟಿದ್ದು, ಇದರಲ್ಲಿ 17,86,27,463 ರೂ. ಸಾಲ ಮತ್ತು ಮುಂಗಡಗಳನ್ನುನೀಡಿರುವುದಾಗಿ ಸಭೆಯಲ್ಲಿ ತಿಳಿಸಿದರು. ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು, ಬ್ಯಾಂಕ್‌ನ ಸಿಬ್ಬಂದಿ ವರ್ಗ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯವಾಯಿತು ಎಂದರು.
ಬ್ಯಾಂಕ್‌ನ ಸಿಇಒ ಬಸವರಾಜ್ ಮಾತನಾಡಿ, ಏಳು ವರ್ಷಗಳ ಅವಧಿಯಲ್ಲಿ ಸ್ವರ್ಣ ವಿಲಾಸ್ ಸೌಹಾರ್ದ ಪತ್ತಿನ ಶಾಖೆಗಳನ್ನು ಬಂಗಾರಪೇಟೆ ಮತ್ತು ಬೇತಮಂಗಲದಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಎರಡು ಬ್ಯಾಂಕ್‌ಗಳಲ್ಲಿ ಉತ್ತಮ ವಹಿವಾಟು ನಡೆಸಲಾಗುತ್ತಿದೆ ಎಂದರು.
ಬ್ಯಾಂಕ್‌ನ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಗ್ರಾಹಕರು ಬ್ಯಾಂಕ್‌ನ ಅಭಿವೃದ್ಧಿ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಶರ್ಮ 7ನೇ ವಾರ್ಷಿಕೋತ್ಸವದ ಶುಭ ಕೋರಿದರು, ಸಭೆಯಲ್ಲಿ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com