ಶೇಕಡಾ 14.50ರಷ್ಟು ಡಿವಿಡೆಂಡ್ ನೀಡಲು ತೀರ್ಮಾನ
ನೂತನ ನಿರ್ಮಿತ ಸಹಕಾರ ಭವನ ಲೋಕಾರ್ಪಣೆ
ಬಳ್ಳಾರಿ: ಇಲ್ಲಿನ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಸಹಕಾರ ಸಂಘದ ಎಂಟನೇ ವಾರ್ಷಿಕ ಮಹಾಸಭೆ ಮತ್ತು ನೂತನವಾಗಿ ನಿರ್ಮಾಣಗೊಂಡ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಸಹಕಾರ ಸಂಘದ ಸಹಕಾರ ಭವನದ ಲೋಕಾರ್ಪಣೆ, ಪೂಜಾ ಕಾರ್ಯಕ್ರಮ ಶನಿವಾರ ನಡೆಯಿತು.
ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಸಹಕಾರ ಸಂಘ ವಾರ್ಷಿಕ 68.67 ಲಕ್ಷ ರೂ. ಲಾಭ ಗಳಿಸಿದ್ದು, ಶೇಕಡಾ 14.50ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು. ಸಂಘದಲ್ಲಿ 5524 ಸದಸ್ಯರಿದ್ದು, 4.43 ಕೋಟಿ ರೂ. ಷೇರು ಬಂಡವಾಳವಿದೆ. 37.13 ಕೋಟಿ ರೂ. ಠೇವಣಾತಿಯಿದೆ.
https://chat.whatsapp.com/Ge11n7QCiMj5QyPvCc0H19
2017ರಲ್ಲಿ ಆರಂಭವಾದ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಕೇವಲ 8 ವರ್ಷಗಳ ಅವದಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರಾರಂಭದ ದಿನಗಳಲ್ಲಿ ರೂ.42 ಲಕ್ಷ ಷೇರು ಹಣದೊಂದಿಗೆ ಪ್ರಾರಂಭವಾದ ಈ ಸಹಕಾರಿ ಸಂಘವು ಸದಸ್ಯರ ಷೇರು ಬಂಡವಾಳ, ಠೇವಣಿ, ನಿರಂತರ ಪಿಗ್ಮಿ ಯೋಜನೆ, ಸಿ.ಆರ್.ಡಿ ಯೋಜನೆ, ಚಾಲ್ತಿ ಖಾತೆಗಳ ಮೂಲಕ ಬಂಡವಾಳ ದೃಢೀಕರಿಸಿ ದುಡಿಯುವ ಬಂಡವಾಳದ ಆರ್ಥಿಕ ಬಲವನ್ನು ಹೆಚ್ಚಿಸಿಕೊಂಡು ಪತ್ತಿನ ವ್ಯಾಪಾರ ವಹಿವಾಟಿನ ಮೂಲಕ ವೃತ್ತಿಪರತೆಯಿಂದ ಮುನ್ನೆಡೆಸುತ್ತ ಬಂದಿದೆ.
ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯ ಸಿರಗುಪ್ಪ, ಕಂಪ್ಲಿ, ಹೂವಿನ ಹಡಗಲಿಗಳಲ್ಲಿ ಶಾಖೆಗಳನ್ನು ತೆರೆಯುವುದರ ಮೂಲಕ ವ್ಯಾಪಾರ ವಹಿವಾಟು ವೃದ್ಧಿಸಿಕೊಂಡು ಷೇರುದಾರರ, ಠೇವಣಿದಾರರ ಹಾಗೂ ಸಮಾಜದ ವಿಶ್ವಾಸಕ್ಕೆ ಪಾತ್ರವಾಗಿದೆ.
ಸಹಕಾರಿ ಸಂಘದ ಅಧ್ಯಕ್ಷ ಬಸಪ್ಪ ಕೇಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎರ್ರಿಸ್ವಾಮಿ ಬೈಲುವದ್ದಿಗೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಶಂಭುಲಿಂಗಪ್ಪ, ನಿರ್ದೇಶಕರಾದ ಹಾವಿನಾಳ್ ಬಸವರಾಜ್, ಕಲ್ಗುಡಿ ಮಂಜನಾಥ,
ಜಿ.ವೀರೇಶ್, ಟೆಂಗಿನಕಾಯಿ ಮಹಾಂತೇಶ್, ಹೆಚ್ ಹೇಮಾದ್ರಿ, ಜಿ.ಜಡೇಮೂರ್ತಿ, ಕೆ.ಎಂ.ಚನ್ನರಾಮೇಶ್ವರ, ಬಾಡದ ಪ್ರಕಾಶ್, ಶಿವಾ ರಮೇಶ್, ವಂಟೆ ನಾಗರಾಜ್, ಹಾವಿನಾಳ್ ನೀಲಾವತಿ, ಜಿ.ಉಮಾದೇವಿ, ಕಾರ್ಯನಿರತ ನಿರ್ದೇಶಕರಾದ ಆರ್.ಮಲ್ಲಿಕಾರ್ಜುನ ಗೌಡ, ಗಾಳಿ ರಾಜಶೇಖರ, ಮುಂಡವಾಡ ಉಮೇಶ, ನಾಮ ನಿರ್ದೇಶಕರಾದ ಜಾನೇಕುಂಟೆ ತಿಪ್ಪೇರುದ್ರಪ್ಪ, ಶಿಡಿಗಿನಮೊಳೆ ಬಸವರಾಜ ಸಭೆಯಲ್ಲಿ ಹಾಜರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com