ಶೇ. 22 ಡಿವಿಡೆಂಡ್ ಘೋಷಣೆ
ಮಂಗಳೂರು: ದಿ ಕರಾವಳಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅತ್ತಾವರ ಮಂಗಳೂರು ಇದರ 33ನೇ ವಾರ್ಷಿಕ ಮಹಾಸಭೆ ಸೊಸೈಟಿ ಅಧ್ಯಕ್ಷ ಎ.ಎಸ್ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಪ್ಪು ಜೆರೋಸಾ ಹೈಸ್ಕೂಲ್‌ನಲ್ಲಿ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಎಂ. ಗತವರ್ಷದ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ರಮೇಶ್ ಮೆಂಡನ್ ಟಿ., ನಿರ್ದೇಶಕರಾದ ಪ್ರಕಾಶ್ ಬಿ., ತಾರಾನಾಥ ಸುವರ್ಣ, ಭರತ್ ಕುಮಾರ್ ಎ., ಶೋಭಾ ಎ, ಪದ್ಮನಾಭ, ಉಷಾ,
ರಾಜನ್ ಕುಮಾರ್ ಎಚ್.ಎಸ್. ಉಪಸ್ಥಿತರಿದ್ದರು. ನಿರ್ದೇಶಕರಾದ ವಿಶ್ವಾಸ್ ಕುಮಾರ್ ದಾಸ್, ರವೀಂದ್ರ ಟಿ. ಸೊಸೈಟಿಯ ಬೆಳವಣಿಗೆಯ ಬಗ್ಗೆ ತಿಳಿಸಿದರು. ಸೊಸೈಟಿ 2023-24ನೇ ಸಾಲಿನಲ್ಲಿ 5.51 ಕೋಟಿ ರೂ. ಲಾಭ ಗಳಿಸಿದೆ. ಶೇ.22ರಷ್ಟು
ಡಿವಿಡೆಂಡ್ ಘೋಷಣೆ ಮಾಡಿದೆ. ಜಾಮೀನು ಸಾಲ, ಆಭರಣ ಸಾಲ, ಆಸ್ತಿ, ಆಧಾರ ಸಾಲ, ಗೃಹ ಸಾಲ, ವಾಹನ ಸಾಲ, ಜೀವ ವಿಮಾ ಪಾಲಿಸಿ, ರಾಷ್ಟ್ರೀಯ ಉಳಿತಾಯ ಪತ್ರ ಆಧಾರ ಸಾಲ ನೀಡುವ ಯೋಜನೆಗಳೊಂದಿಗೆ ಕಾರ್ಯವೆಸಗುತ್ತಿದೆ. ಸಂಘದ ನಿರ್ದೇಶಕ ನಾಗೇಶ್ ಎನ್. ಸ್ವಾಗತಿಸಿ, ಕೇಶವ ಎಂ. ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com