ಮೂಡುಬಿದಿರೆ: ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 11ನೇ ವಾರ್ಷಿಕ ಮಹಾಸಭೆ ಮೂಡುಬಿದಿರೆ ಸಮಾಜ ಮಂದಿರ ದಲ್ಲಿ ಭಾನುವಾರ ನಡೆಯಿತು.
ಸಹಕಾರಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಶಿವರಾಮ್ ಜೆ.ಶೆಟ್ಟಿ ಹಾಗೂ ನಿರ್ದೇಶಕ ವಿಶ್ವನಾಥ್, ಬಾಬು ಎಂ, ನಾಗರಾಜ್ ಶೆಟ್ಟಿ, ದಯಾನಂದ, ನಾರಾಯಣ ಶೆಟ್ಟಿ, ಶಾಂತಾ, ಗೀತಾಂಜಲಿ, ರೆನಿಟಾ ಗ್ರೇಸಿ ಡಿಸೋಜ ಸಭೆಯನ್ನು ಉದ್ಘಾಟಿಸಿದರು.
https://chat.whatsapp.com/Ge11n7QCiMj5QyPvCc0H19
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ,ಕಳೆದ 11 ವರ್ಷಗಳಲ್ಲಿ ಸಹಕಾರಿಯು ಪ್ರತಿ ವರ್ಷವೂ ಲಾಭದಲ್ಲಿದ್ದು ಈ ವರ್ಷ ರೂ. 36,48,266.80 ಲಾಭ ಗಳಿಸಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುತ್ತಿದೆ. ಅಲ್ಲದೆ ಸಾಲ ಪಡೆದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಸಂಸ್ಥೆಯ ವತಿಯಿಂದ ಆರೋಗ್ಯ ವಿಮೆ ಕಾರ್ಡ್ ಮಾಡಲಾಗುವುದು. ಇದರಿಂದ ಸಾಲ ಪಡೆದ ಸದಸ್ಯರು ಅಪಘಾತದಲ್ಲಿ ಗಾಯಗೊಂಡರೆ, ಅಥವಾ ಅನಾರೋಗ್ಯ ಸಂಭವಿಸಿದರೆ ವಿವಿಧ ಚಿಕಿತ್ಸೆಗೆ ಖರ್ಚಿನ ಮೊತ್ತದಲ್ಲಿ ಸಹಕಾರಿಯು ರೂಪಾಯಿ 10,000/- ವರೆಗೆ ಭರಿಸುವುದಾಗಿ, ಹಾಗೂ ಸಾಲ ಪಡೆದ ಸದಸ್ಯರು ಮರಣ ಹೊಂದಿದರೆ ರೂಪಾಯಿ 30,000/- ವರೆಗೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು.
ಸಹಕಾರಿಯ ಶಾಖೆಯಲ್ಲಿ ನಿರಖು ಠೇವಣಿ, ಆವರ್ತನ ಠೇವಣಿ, ಉಳಿತಾಯ ಖಾತೆ, ಪಿಗ್ಮಿ ಖಾತೆ ಸೌಲಭ್ಯ, ಆರ್‌ಟಿಜಿಎಸ್, ನೆಫ್ಟ್, ಹಾಗೂ ಕಡಿಮೆ ಬಡ್ಡಿಯಲ್ಲಿ ಚಿನ್ನಾಭರಣ ಸಾಲ, ವೈಯಕ್ತಿಕ ಸಾಲ ನೀಡಲಾಗುತ್ತಿದ್ದು ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು. ಸಹಕಾರಿಯಲ್ಲಿ ಒಟ್ಟು 45 ಸ್ವ ಸಹಾಯ ಗುಂಪುಗಳಿದ್ದು ಉತ್ತಮ ಗುಂಪು ಎಂದು ಒಟ್ಟು 6 ಗುಂಪುಗಳಿಗೆ ಬಹುಮಾನ ನೀಡಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಜನ್ಯ ಡಿ.ಶೆಟ್ಟಿ ವಾರ್ಷಿಕ ಲೆಕ್ಕಪತ್ರ , ಲಾಭ ಗಳಿಕೆ, ನಿವ್ವಳ ಲಾಭ ವಿಂಗಡಣೆಯ ಲೆಕ್ಕವನ್ನು ಸಭೆಯಲ್ಲಿ ಮಂಡಿಸಿದರು.
ನಿರ್ದೇಶಕ ದಯಾನಂದ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com