ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಸ್ತಾಂತರ, ಸದಸ್ಯರಿಗೆ ಶೇ.6 ಡಿವಿಡೆಂಡ್
ಮಂಗಳೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿಯಮಿತ ಕಾವೂರು ಇದರ 4ನೇ ವಾರ್ಷಿಕ ಮಹಾಸಭೆ ಕಾವೂರು ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಭಾನುವಾರ ನಡೆಯಿತು.
ಸಹಕಾರಿಯ ಸದಸ್ಯರಾದ ಪದ್ಮನಾಭ ಕಾರ್ನಾಡು, ಸುಧಾಕರ ಕರ್ಕೇರ, ಕೃಷ್ಣ ಎನ್.ಪೂಜಾರಿ, ಪ್ರಮೀಳಾ ಈಶ್ವರ್ , ಶಿಲ್ಪಾಕುಮಾರಿ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಮಾತನಾಡಿ, ನಾಲ್ಕು ವರ್ಷಗಳಲ್ಲಿ ಕಾವೂರು ಹಾಗೂ ಕೋಡಿಕಲ್‌ನಲ್ಲಿ ಎರಡು ಶಾಖೆಗಳನ್ನು ತೆರೆಯಲಾಗಿದೆ, ಸಹಕಾರಿಯು ಪ್ರತಿ ವರ್ಷದಲ್ಲಿ ಲಾಭದಲ್ಲಿದ್ದು ಈ ವರ್ಷ ರೂ. 3,65,714.70 ಲಾಭ ಗಳಿಸಿ ಸದಸ್ಯರಿಗೆ ಶೇ.6 ಡಿವಿಡೆಂಡ್ ಘೋಷಿಸಲಾಗಿದೆ ಎಂದು ತಿಳಿಸಿದರು. ಸಹಕಾರಿಯ ಶಾಖೆಗಳಲ್ಲಿ ಈ ಸ್ಟ್ಯಾಂಪಿಂಗ್, ಆರ್‌ಟಿಜಿಎಸ್, ನೆಫ್ಟ್, ಆರ್.ಟಿ.ಸಿ ,ಮಿನಿ ಎಟಿಎಂ ಸೌಲಭ್ಯ ಹಾಗೂ ಕಡಿಮೆ ಬಡ್ಡಿಯಲ್ಲಿ ಚಿನ್ನಾಭರಣ ಸಾಲ ನೀಡಲಾಗುತ್ತಿದ್ದು ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
https://chat.whatsapp.com/Ge11n7QCiMj5QyPvCc0H19
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ ಎಂಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. 10 ಮಂದಿ ಸದಸ್ಯರಿಗೆ ಕರ್ನಾಟಕ ರಾಜ್ಯ ಸರಕಾರದ ಯಶಸ್ವಿನಿ ಆರೋಗ್ಯ ಕಾರ್ಡ್ ನೀಡಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಚನಾ ವಾರ್ಷಿಕ ಲೆಕ್ಕಪತ್ರ , ಲಾಭ ಗಳಿಕೆ ,ನಿವ್ವಳ ಲಾಭ ವಿಂಗಡಣೆಯ ಲೆಕ್ಕವನ್ನು ಸಭೆಯಲ್ಲಿ ಮಂಡಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಬೆಂಗಳೂರು ಇದರ ಮೈಸೂರು ವಿಭಾಗದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಉಪಸ್ಥಿತರಿದ್ದರು. ನಿರ್ದೇಶಕರಾದ ಸದಾಶಿವ ಪೂಜಾರಿ, ಹೇಮಚಂದ್ರ ಹೆಚ್ , ಚಂದ್ರಶೇಖರ್ ಜಿ , ಪುರುಷೋತ್ತಮ್ ಪೂಜಾರಿ, ದಿವಾಕರ್ , ಸದಾಶಿವ, ಕಿಶೋರ್ ಸುವರ್ಣ , ಪೂರ್ಣಿಮಾ ಕೆ ನಾಯ್ಕ್, ಬೋಳೂರು ಧನ್ಯಲತಾ , ಭವ್ಯ ಉಪಸ್ಥಿತರಿದ್ದರು. ನಿರ್ದೇಶಕರಾದ ಪುರುಷೋತ್ತಮ ಎನ್.ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಉಪಾಧ್ಯಕ್ಷ ಸಚ್ಚಿದಾನಂದ ಪೂಜಾರಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com