Close Menu
    Top News

    ಶ್ರೀ ಗೋಕರ್ಣನಾಥ ಕೋ ಆಪರೇಟಿವ್‌ ಬ್ಯಾಂಕ್‌ಗೆ ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್ ಪ್ರಶಸ್ತಿ

    November 17, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪುನರಾಯ್ಕೆ

    November 17, 2026

    ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ ಆಯ್ಕೆ 

    November 17, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ ಆಯ್ಕೆ 
    News

    ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ ಆಯ್ಕೆ 

    adminBy adminNovember 17, 2026
    ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ನೀಡಲಾಗುವ ‘ಸಹಕಾರ ಮಾಣಿಕ್ಯ’ ಪ್ರಶಸ್ತಿಗೆ ಮಂಗಳೂರಿನ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಆಯ್ಕೆಯಾಗಿದೆ. ನವೆಂಬರ್‌ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
    https://chat.whatsapp.com/FCEnlTkAKCC0MGPhXtX4i4
    ಕೇಂದ್ರ ಸರ್ಕಾರ 1963ರಲ್ಲಿ ಸ್ವರ್ಣ ನಿಯಂತ್ರಣ ಕಾಯ್ದೆ ಜಾರಿಗೆ ತಂದಾಗ ವಂಶಪಾರಂಪರ್ಯವಾಗಿ ಚಿನ್ನದ ಕೆಲಸದ ವೃತ್ತಿಯನ್ನು ಹೊಂದಿರುವ ಸ್ವರ್ಣಕಾರ ಕುಶಲಕರ್ಮಿಗಳು ತಮ್ಮ ಕುಲಕಸುಬನ್ನು ಕಳೆದುಕೊಂಡ ಸಂದರ್ಭದಲ್ಲಿ ಕುಶಲಕರ್ಮಿಗಳಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶಕ್ಕಾಗಿ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ – ಸಂಸ್ಥಾಪಕ ಅಧ್ಯಕ್ಷರು ಮತ್ತು ಅಂದಿನ ಸಮಾಜದ ಸಮಾನಮನಸ್ಕ ಸದಸ್ಯರುಗಳ ನೇತೃತ್ವದಲ್ಲಿ 1964ರಲ್ಲಿ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆಯಾಯಿತು. ಹೀಗೆ ಪ್ರಾರಂಭವಾದ ಕೈಗಾರಿಕಾ ಶಾಖೆಯು ಕಬ್ಬಿಣ ಮತ್ತು ಮರದ ಗೃಹೋಪಯೋಗಿ ಪೀಠೋಪಕರಣಗಳನ್ನು ಸದಸ್ಯರಿಂದ ತಯಾರಿಸಲು ಪ್ರಾರಂಭಿಸಿತು. 1976ರಲ್ಲಿ ಮಂಗಳೂರಿನ ರಥಬೀದಿಯಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದ ವೀರಪ್ಪ ಮೊಯಿಲಿಯವರಿಂದ ಒಂದು ಬ್ಯಾಂಕಿಂಗ್ ವಿಭಾಗವನ್ನು ಉದ್ಘಾಟಿಸಿ ಪ್ರಾರಂಭಿಸಲಾಯಿತು. 167 ಸದಸ್ಯರಿಂದ 12 ಸಾವಿರ ಪಾಲು ಬಂಡವಾಳ ಹಾಗೂ ಏಳು ಸಾವಿರ ಠೇವಣಿಯೊಂದಿಗೆ ಪ್ರಾರಂಭವಾದ ಬ್ಯಾಂಕಿಂಗ್ ವ್ಯವಹಾರವು 31-03-2026ಕ್ಕೆ ಸದಸ್ಯರ ಸಂಖ್ಯೆ 23,530, ಪಾಲು ಬಂಡವಾಳ ರೂ.732.86 ಲಕ್ಷ ಮತ್ತು ಠೇವಣಿ ರೂ.31700.96 ಲಕ್ಷ ಹಾಗೂ ದುಡಿಯುವ ಬಂಡವಾಳ ರೂ.35,516.39 ಲಕ್ಷ ಹೊಂದಿದ್ದು, ಕರ್ನಾಟಕ ರಾಜ್ಯದಲ್ಲಿ ಸಹಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕೆಲವೇ ಕೆಲವು ಸಹಕಾರಿ ಸಂಸ್ಥೆಯಲ್ಲಿ ಒಂದಾಗಿದೆ.
    ಸಂಪನ್ಮೂಲದ ಕ್ರೋಢೀಕರಣಕ್ಕಾಗಿ ಆಕರ್ಷಕ ಬಡ್ಡಿದರ ನೀಡಿ ಸದಸ್ಯರಿಂದ ಸಂಘ/ ಸಂಸ್ಥೆಗಳಿಂದ ವಿವಿಧ ರೀತಿಯ ಠೇವಣಿ ಸಂಗ್ರಹ, ಶೇರುಗಳನ್ನು ಪಡೆಯುತ್ತಿದೆ. ಸದಸ್ಯರಿಗೆ ಆಸ್ತಿ ಅಡವು/ ಗೃಹ ನಿರ್ಮಾಣ/ ಖರೀದಿ/ಗೃಹ ದುರಸ್ಥಿ/ ವಾಹನ ಖರೀದಿ/ ಯಂತ್ರೋಪಕರಣ ಖರೀದಿ/ ಸೋಲಾರ್ ಖರೀದಿಗಳಿಗಾಗಿ ಹಾಗೂ ಜಾಮೀನು ಸಾಲಕ್ಕೆ ಆರ್ಥಿಕ ಸವಲತ್ತು ಒದಗಿಸುವುದು. ಸದಸ್ಯರ ಅನುಕೂಲಕ್ಕಾಗಿ ಚಿನ್ನಾಭರಣ ಸಾಲ/ ಗೃಹ ಬಳಕೆ ಸಾಲ ಹಾಗೂ ಕುಶಲಕರ್ಮಿ ಸದಸ್ಯರ ಮಕ್ಕಳ ಹಿತಾಸಕ್ತಿಗಾಗಿ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ನೀಡುತ್ತಿದೆ.
    ಪ್ರಸಕ್ತ ಸಂಸ್ಥೆಯ ಅಧ್ಯಕ್ಷರಾಗಿ ಪಿ.ಉಪೇಂದ್ರ ಆಚಾರ್ಯ, ಉಪಾಧ್ಯಕ್ಷರಾಗಿ ಎ.ಆನಂದ ಆಚಾರ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರಾಗಿ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್, ಕೆ.ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ವಿ., ರಮೇಶ್ ರಾವ್ ಯು., ಪ್ರಕಾಶ ಆಚಾರ್ಯ ಕೆ., ಮಂಜುನಾಥ ಆಚಾರ್ಯ ಮತ್ತು ಚಂದ್ರಶೇಖರ ಎ.ಎಸ್. ಆಡಳಿತ ನಿರ್ವಹಿಸುತ್ತಿದ್ದಾರೆ. ಪ್ರಧಾನ ವ್ಯವಸ್ಥಾಪಕರಾಗಿ ಯಜ್ಞೇಶ್ವರ ಕಾರ್ಯ ನಿರ್ವಹಿಸುತ್ತಿದ್ದಾರೆ.
    ಸಂಘವು ಪ್ರಸಕ್ತ ದಕ್ಷಿಣ ಕನ್ನಡ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 17 ಬ್ಯಾಂಕಿಂಗ್ ಮತ್ತು ಒಂದು ಕೈಗಾರಿಕಾ ಶಾಖೆಯನ್ನು ಹೊಂದಿದೆ. ಕೊಟ್ಟಾರ ಚೌಕಿಯಲ್ಲಿ ತನ್ನದೇ ಆದ ಸ್ವಂತ ಕಟ್ಟಡ ವಿಶ್ವಸೌಧದಲ್ಲಿ ಹವಾನಿಯಂತ್ರಿತವಾಗಿ ನವೀಕೃತಗೊಂಡ ಆಡಳಿತ ಕಛೇರಿ, ಕೊಟ್ಟಾರ ಚೌಕಿ ಶಾಖೆ/ ಕೈಗಾರಿಕಾ ಮಾರಾಟ ಮಳಿಗೆ ಹೊಂದಿ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಕಿನ್ನಿಗೋಳಿ ಶಾಖೆ, ಉಡುಪಿ ಶಾಖೆ, ಪಡುಬಿದ್ರೆ ಶಾಖೆ, ಕುಳಾಯಿ ಶಾಖೆ ಹಾಗೂ ಬೈಕಂಪಾಡಿಯ ಉದ್ದಿಮೆ ಘಟಕಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
    ಸಾಧನೆಯ ಮುಖ್ಯಾಂಶಗಳು
    ಪ್ರಸ್ತುತ 2025-26ನೇ ಸಾಲಿನಲ್ಲಿ ರೂ.1788.68 ಕೋಟಿ ಮಿಕ್ಕಿ ವ್ಯವಹಾರ ನಡೆಸಿದ್ದು ಆಪದ್ಧನ ನಿಧಿಯು ರೂ. 1308.65 ಲಕ್ಷ ; ಕಟ್ಟಡ ನಿಧಿಯು ರೂ.486.76 ಲಕ್ಷ; ಚರ ಮತ್ತು ಸ್ಥಿರ ಆಸ್ತಿಗಳು ರೂ.808.96 ಲಕ್ಷ ಹೊಂದಿದೆ. 41 ವರ್ಷಗಳಿಂದ ನಿರಂತರ ಲಾಭ ಗಳಿಸಿರುವ ಸಂಸ್ಥೆಯು ಕಳೆದ 35 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ `ಎ` ವರ್ಗ ಪಡೆಯುತ್ತಿದ್ದು, ಸದಸ್ಯರಿಗೆ 36 ವರ್ಷಗಳಿಂದ ಶೇ.18ರಷ್ಟು ಡಿವಿಡೆಂಡ್‌ ನೀಡಲಾಗುತ್ತಿತ್ತು. ಪ್ರಸ್ತುತ 2024ರಿಂದ ಶೇ.20 ಡಿವಿಡೆಂಡ್‌ ನೀಡಲಾಗುತ್ತಿದೆ. 2025-26ರ ಸಾಲಿನ ನಿವ್ವಳ ಲಾಭ ರೂ. 807.74 ಲಕ್ಷಗಳಾಗಿದೆ.
    ಪ್ರಶಸ್ತಿಗಳು :
    • 2007ರಲ್ಲಿ ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ
    • 2008ರಲ್ಲಿ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ
    • 2015ಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆ ಪ್ರಶಸ್ತಿ
    • 2016ರಲ್ಲಿ ಜಿಲ್ಲೆಯಲ್ಲಿಉತ್ತಮ ಸಹಕಾರ ಸಂಘ ಪ್ರಶಸ್ತಿ 
    • 2017ಲ್ಲಿ 8ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಇವರಿಂದ ಕರ್ನಾಟಕ ಸಂಘ ರತ್ನ ಗೌರವ ಪ್ರಶಸ್ತಿ
    • ಸತತ 9 ಬಾರಿ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಇವರಿಂದ ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 
    • 2023ರಲ್ಲಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ
    • 2024ರಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದಂದು ಉತ್ತಮ ಸಹಕಾರ ಸಂಘ ವಿಶೇಷ ಪ್ರಶಸ್ತಿ
    • 2025ರಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಂದು ವಜ್ರಮಹೋತ್ಸವ ಪೂರೈಸಿದ ಸಹಕಾರಿ ಸಂಘ ಎಂದು ವಿಶೇಷ ಪ್ರಶಸ್ತಿ
    ಸದಸ್ಯರಿಗೆ, ಸಾರ್ವಜನಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಆರ್ಥಿಕ ಸಹಾಯ ನೀಡುವುದಲ್ಲದೇ, ಅಶಕ್ತರಿಗೆ, ಅನಾರೋಗ್ಯ ಹೊಂದಿದವರಿಗೆ ಸಂಘದ ವತಿಯಿಂದ ಆರ್ಥಿಕ ಸಹಾಯ ನೀಡುತ್ತಿದ್ದೇವೆ. 2009-10ನೇ ಸಾಲಿನಿಂದ `ಎ` ಮತ್ತು `ಸಿ` ವರ್ಗದ ಸದಸ್ಯರ ಮತ್ತು ಸಿಬ್ಬಂದಿಗಳ ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಈವರೆಗೆ ಒಟ್ಟು 3139 ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ರೂ.82,96,000 ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ. ವಜ್ರಮಹೋತ್ಸವದ ಪ್ರಯುಕ್ತ 60 ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಎರಡು ತೀರಾ ಬಡ ಕುಟುಂಬಕ್ಕೆ ತಲಾ 7.5 ಲಕ್ಷದ ಎರಡು ಮನೆ ನಿರ್ಮಿಸಿ ಕೊಡಲಾಗಿದೆ. ನಿರಾಶ್ರಿತರಿಗೆ, ಸರ್ಕಾರಿ ಶಾಲೆ, ಅನುದಾನಿತ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ವನಮಹೋತ್ಸವ, ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಅಂಚೆ ಇಲಾಖೆಯ ಜನ ಸಂಪರ್ಕ ಯೋಜನೆಯಡಿಯಲ್ಲಿ ಆಧಾರ್ ನೋಂದಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
     ದಿನಾಂಕ 09-11-2025 ರಂದು ಆಡಳಿತ ಕಛೇರಿಯ ನವೀಕೃತ “ವಿಶ್ವಸೌಧ” ಕಟ್ಟಡದ ಉದ್ಘಾಟನೆ ಹಾಗೂ ವಜ್ರಮಹೋತ್ಸವ ಸಮಾರೋಪ ಸಮಾರಂಭವು ಸ್ವಾಮೀಜಿದ್ವಯರವರುಗಳ ಆಶೀರ್ವಚನ ಹಾಗೂ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಜರಗಿದ್ದು, ಈ ಕಾರ್ಯಕ್ರಮದಲ್ಲಿ 6 ಸ್ಥಾಪಕ ಸದಸ್ಯರು, 5 ಆಶಾ ಕಾರ್ಯಕರ್ತೆಯರಿಗೆ, 5 ಪೌರ ಕಾರ್ಮಿಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 4 ಸಾಧಕರಿಗೆ ಗೌರವಿಸಿ ನಗದಿನೊಂದಿಗೆ ಸನ್ಮಾನಿಸಲಾಯಿತು. ಮಂಗಳೂರಿನ ಮಣ್ಣಗುಡ್ಡೆ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯ ಕೊಡುಗೆ, ಕಿನ್ನಿಗೋಳಿಯ ಬಲವಿನಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಸ್ಟೀಲು ಕಪಾಟು, ಮಂಗಳೂರಿನ ಚೇತನ ಬಾಲ ವಿಕಾಸ ಕೇಂದ್ರಕ್ಕೆ 5 ವೀಲ್ ಚಯರ್ ಈ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಲಾಯಿತು. ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಿ ” ಗೋಲ್ಡ್ ಬ್ಯಾಂಕ್ “ ಎಂದೇ ಪ್ರಖ್ಯಾತಿ ಹೊಂದಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಹಕಾರಿ ಸಂಸ್ಥೆಯಾಗಿ ಬೆಳೆಸುವ ಆಶಯ ನಮ್ಮದಾಗಿದೆ.
    Banking Co Operative ministry Cooperative Cooperative Department Cooperative Registrar Sahakara Manikya SK Goldsmiths Industrial Co Operative Society Upendra Acharya
    Previous Articleಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಉತ್ತಮ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿ
    Next Article ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪುನರಾಯ್ಕೆ

    Related Posts

    ಶ್ರೀ ಗೋಕರ್ಣನಾಥ ಕೋ ಆಪರೇಟಿವ್‌ ಬ್ಯಾಂಕ್‌ಗೆ ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್ ಪ್ರಶಸ್ತಿ

    November 17, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪುನರಾಯ್ಕೆ

    November 17, 2026

    ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಉತ್ತಮ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿ

    November 17, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ಗೋಕರ್ಣನಾಥ ಕೋ ಆಪರೇಟಿವ್‌ ಬ್ಯಾಂಕ್‌ಗೆ ಅತ್ಯುತ್ತಮ ಪಟ್ಟಣ ಸಹಕಾರ ಬ್ಯಾಂಕ್ ಪ್ರಶಸ್ತಿ

    November 17, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪುನರಾಯ್ಕೆ

    November 17, 2026

    ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ ಆಯ್ಕೆ 

    November 17, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.