Close Menu
    Top News

    ನವೆಂಬರ್‌ 14ರಿಂದ ಮೂಡುಬಿದಿರೆಯಲ್ಲಿ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ

    November 12, 2026

    ಏಕತೆ, ಮಾನವೀಯತೆ, ಸೌಹಾರ್ದದ ಸಂದೇಶದೊಂದಿಗೆ ಎಂಸಿಸಿ ಬ್ಯಾಂಕಿನಲ್ಲಿ ದೀಪಾವಳಿ ಸಂಭ್ರಮಾಚರಣೆ

    November 11, 2026

    ದಿ ಮೈ‌‌ಸೂರು ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಜಿ.ನಿರಂಜನ್‌, ಉಪಾಧ್ಯಕ್ಷರಾಗಿ ಎಂ.ರಾಮಕೃಷ್ಣ ಆಯ್ಕೆ

    November 11, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನವೆಂಬರ್‌ 14ರಿಂದ ಮೂಡುಬಿದಿರೆಯಲ್ಲಿ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ
    News

    ನವೆಂಬರ್‌ 14ರಿಂದ ಮೂಡುಬಿದಿರೆಯಲ್ಲಿ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ

    adminBy adminNovember 12, 2026

    ಜಯವರ್ಮ ರಾಜ್ ಬಲ್ಲಾಳ್‌ಗೆ ‘ಕಲ್ಪವೃಕ್ಷ’, ಡಾ.ಎನ್. ಪ್ರಭಾಚಂದ್ರರಿಗೆ ಸಮಗ್ರ ಸಾಧಕ ಪ್ರಶಸ್ತಿ

    ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ಕೋ-ಆಪರೇಟಿವ್ ಸೊಸೈಟಿ ಲಿ. ವತಿಯಿಂದ 2026ನೇ ಸಾಲಿನ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ ಸಹಕಾರ ಸಪ್ತಾಹ ಸಂಭ್ರಮ ಕಾರ್ಯಕ್ರಮ ನವೆಂಬರ್ 14ರಿಂದ 20ರವರೆಗೆ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಆಯೋಜಿಸಲಾಗಿದೆ.

    https://chat.whatsapp.com/FCEnlTkAKCC0MGPhXtX4i4

    14ರಂದು ಸಹಕಾರ ಸಪ್ತಾಹವನ್ನು ಆರೋಗ್ಯ ಸಚಿವ ಯು.ಟಿ.ಖಾದ‌ರ್‌ ಉದ್ಘಾಟಿಸಲಿದ್ದಾರೆ. ಉದ್ಯಮಿ ಕೆ.ಜಯವರ್ಮ ಬಲ್ಲಾಳ್ ಅವರಿಗೆ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ನಡೆಯಲಿದೆ. 20ರಂದು ಡಾ.ಎನ್ ಪ್ರಭಾಚಂದ್ರ ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಮತ್ತು ಸಹಕಾರ ಸಪ್ತಾಹ ಸಮಾರೋಪ ನಡೆಯಲಿದೆ. ಏಳೂ ದಿನಗಳಲ್ಲಿ ಪ್ರತೀ ದಿನ ಸಂಜೆ 6ರಿಂದ ಉಪನ್ಯಾಸ, ಬಳಿಕ ಸಾಂಸ್ಕೃತಿಕ ಕಲಾಪ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಸಮಾಜ ಸೇವೆ, ಉದ್ಯಮ, ಕ್ರೀಡೆ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಸಮಾಜ ಸೇವೆ, ಉದ್ಯಮ ಕ್ಷೇತ್ರ, ಕ್ರೀಡಾ ಕ್ಷೇತ್ರ, ಕೃಷಿ, ಹೈನುಗಾರಿಕೆ, ಸಂಘ ಸಂಸ್ಥೆಗಳು, ಅಂಗನವಾಡಿಗಳು ಶಾಲಾ ಕಾಲೇಜುಗಳಿಗೆ ಆರ್ಥಿಕ ನೆರವು, ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಹೀಗೆ ಸಾಧಕರನ್ನು ಗೌರವಿಸಲಾಗುವುದು. ಸೊಸೈಟಿಯಲ್ಲಿ ಅಳವಡಿಸಲಾದ ಸೋಲಾರ್‌ಗ್ರಿಡ್ ವ್ಯವಸ್ಥೆಯ ಉದ್ಘಾಟನೆಯೂ ನಡೆಯಲಿದೆ ಎಂದು ಮಾಹಿತಿ ನೀಡಿದರು.

    14ರಂದು ಸಂಜೆ ಸಂಸ್ಥಾಪಕರ ದಿನಾಚರಣೆ, ಸಹಕಾರ ಸಪ್ತಾಹ ಉದ್ಘಾಟನಾ ಮತ್ತು ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಸಮಾರಂಭವು ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್‌ ಅವರು ಸಹಕಾರ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಅಭಿನಂದನಾ ಭಾಷಣ, ಶಾಸಕ ಉಮಾನಾಥ ಎ.ಕೋಟ್ಯಾನ್ ಇವರಿಂದ ವಿವಿಧ ಯೋಜನೆಗಳ ಉದ್ಘಾಟನೆ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ಎಚ್.ಎನ್. ರಮೇಶ ಉಪಸ್ಥಿತಿಯಲ್ಲಿ ನಡೆಯಲಿದೆ.

    15ರಂದು ಕೃಷಿ ಮತ್ತು ಸಹಕಾರ ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾಯ್‌ ಗಣಪಯ್ಯ ಭಟ್ ಅವರಿಂದ ‘ಶತಮಾನದ ಸ್ಮರಣೆ ಕ್ಯಾಂಪ್ಕೊ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್ಟ’ ದಿಕ್ಕೂಚಿ ಭಾಷಣ. 16ರಂದು ಕಾನೂನು ಮತ್ತು ಸಹಕಾರ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು ಪ್ರಾಂಶುಪಾಲೆ ಡಾ. ರಶ್ಮಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳೂರಿನ ನ್ಯಾಯವಾದಿ ಪೃಥ್ವಿರಾಜ ರೈ ಅವರ ದಿಕ್ಕೂಚಿ ಭಾಷಣ. 17ರಂದು ಸಾಹಿತ್ಯ ಮತ್ತು ಸಹಕಾರ ಕಾರ್ಯಕ್ರಮದಲ್ಲಿ ಕಾಂತಾವರದ ಡಾ.ನಾ. ಮೊಗಸಾಲೆ ಅಧ್ಯಕ್ಷತೆಯಲ್ಲಿ ಉಪನ್ಯಾಸಕ ಟಿ.ಎ.ಎನ್ ಖಂಡಿಗೆ ಅವರ ದಿಕ್ಕೂಚಿ ಭಾಷಣ. 18ರಂದು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ ಕಾರ್ಯಕ್ರಮದಲ್ಲಿ ಆಳ್ವಾಸ್ ಮೆಡಿಕಲ್ ಕಾಲೇಜು ಡೀನ್ ಡಾ.ಕೆ. ಮಹಾಬಲೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯುರ್ವೇದ ವೈದ್ಯ ಡಾ.ಪ್ರಸನ್ನ ಕಾಕುಂಜೆ ಅವರ ದಿಕ್ಕೂಚಿ ಭಾಷಣ. 19ರಂದು ರಾಜಧರ್ಮ ಮತ್ತು ಸಹಕಾರ ಕಾರ್ಯಕ್ರಮದಲ್ಲಿ ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣರ ಅಧ್ಯಕ್ಷತೆಯಲ್ಲಿ ವಿದ್ವಾಂಸ ಸ್ಕಂದ ಪ್ರಸಾದ್ ಭಟ್ ಕಡಂದಲೆ ಅವರ ದಿಕ್ಕೂಚಿ ಭಾಷಣ ನಡೆಯಲಿದೆ. 20ರಂದು ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಮತ್ತು ಸಪ್ತಾಹ ಸಮಾರೋಪ ಸಮಾರಂಭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ಎನ್. ಪ್ರಭಾಚಂದ್ರ, ಮೂಡುಬಿದಿರೆ ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಂದ ಅಭಿನಂದನಾ ಭಾಷಣ, ಸಂಪಿಗೆ ಚರ್ಚ್ ಧರ್ಮಗುರು ರೆ.ಫಾ. ವಿನ್ಸೆಂಟ್ ಡಿಸೋಜ ಆಶೀರ್ವಚನ ನೀಡುವರು.

    ಸಾಂಸ್ಕೃತಿಕ ವೈಭವ: ಸಾಂಸ್ಕೃತಿಕ ವೈಭವದಲ್ಲಿ 14ರಂದು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಯಕ್ಷಗಾನ, 15ರಂದು ಶ್ರೀ ಶಾರದಾ ನಾಟ್ಯಾಲಯ ಪ್ರಸ್ತುತಪಡಿಸುವ ಸಾಂಸ್ಕೃತಿಕ ವೈಭವ, 16ರಂದು ವಿದುಷಿ ಸುಮನಾ ಪ್ರಸಾದ್, ಸಂಸ್ಥಾಪಕಿ, ಆದಿ ಸಾಂಸ್ಕೃತಿಕ ಅಕಾಡೆಮಿ ಇವರ ತಂಡದಿಂದ ಭರತನಾಟ್ಯ ವೈಭವ, 17ರಂದು ಟ್ವಿಸ್ಟರ್ಸ್ ಡಾನ್ ಅಕಾಡೆಮಿ ಮೂಡುಬಿದಿರೆಯ ವೈವಿಧ್ಯಮಯ ಕಾರ್ಯಕ್ರಮ, 18ರಂದು ನೃತ್ಯ ನಿಕೇತನ ಕೊಡವೂರು ಅವರ ನಾರಸಿಂಹ ನೃತ್ಯ ರೂಪಕ (ನಿರ್ದೇಶನ -ವಿದ್ವಾನ್ ಸುಧೀರ ರಾವ್, ಕೊಡವೂರು

    ಮತ್ತು ವಿದುಷಿ ಮಾನಸಿ ಸುಧೀರ್‌) 19ರಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ಕನ್ನಡ ಗಾನ ಗುಚ್ಛ, 20ರಂದು ಅಯನಾ ಏಕವ್ಯಕ್ತಿ ನಾಟಕ ‘ಉರ್ಮಿಳಾ’ ನಡೆಯಲಿದೆ.

    ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಗಣೇಶ್ ನಾಯಕ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ ಎಂ., ಮುಖ್ಯ ನಿರ್ವಹಣಾಧಿಕಾರಿ ಸುದರ್ಶನ್ ಭಟ್, ನಿರ್ದೇಶಕರಾದ ಕೆ. ಅಭಯಚಂದ್ರ ಜೈನ್, ಮನೋಜ್ ಕುಮಾರ್‌ ಶೆಟ್ಟಿ, ಎಂ. ಪದ್ಮನಾಭ, ಸಿ. ಎಚ್ ಗಫೂರ್, ಜಯರಾಮ್ ಕೋಟ್ಯಾನ್, ಎಂ. ಪಿ ಅಶೋಕ್ ಕಾಮತ್, ಅನಿತಾ ಶೆಟ್ಟಿ ಉಪಸ್ಥಿತರಿದ್ದರು.

    Dr.N Prabhachandra K Jayavarma Ballal Kalpavruksha Prashasti Mudubidire Co Operative Service Society Sahakara Sapthaha Saptha Sandhya Sahakari Chintana Sarani U T Khadar
    Previous Articleಏಕತೆ, ಮಾನವೀಯತೆ, ಸೌಹಾರ್ದದ ಸಂದೇಶದೊಂದಿಗೆ ಎಂಸಿಸಿ ಬ್ಯಾಂಕಿನಲ್ಲಿ ದೀಪಾವಳಿ ಸಂಭ್ರಮಾಚರಣೆ

    Related Posts

    ಏಕತೆ, ಮಾನವೀಯತೆ, ಸೌಹಾರ್ದದ ಸಂದೇಶದೊಂದಿಗೆ ಎಂಸಿಸಿ ಬ್ಯಾಂಕಿನಲ್ಲಿ ದೀಪಾವಳಿ ಸಂಭ್ರಮಾಚರಣೆ

    November 11, 2026

    ದಿ ಮೈ‌‌ಸೂರು ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಜಿ.ನಿರಂಜನ್‌, ಉಪಾಧ್ಯಕ್ಷರಾಗಿ ಎಂ.ರಾಮಕೃಷ್ಣ ಆಯ್ಕೆ

    November 11, 2026

    ನವೆಂಬರ್‌ 18ರಂದು ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಗಮ ಸಭಾಭವನ, ಗೋದಾಮು ಕಟ್ಟಡ ಉದ್ಘಾಟನೆ

    November 7, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನವೆಂಬರ್‌ 14ರಿಂದ ಮೂಡುಬಿದಿರೆಯಲ್ಲಿ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ

    November 12, 2026

    ಏಕತೆ, ಮಾನವೀಯತೆ, ಸೌಹಾರ್ದದ ಸಂದೇಶದೊಂದಿಗೆ ಎಂಸಿಸಿ ಬ್ಯಾಂಕಿನಲ್ಲಿ ದೀಪಾವಳಿ ಸಂಭ್ರಮಾಚರಣೆ

    November 11, 2026

    ದಿ ಮೈ‌‌ಸೂರು ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷರಾಗಿ ಜಿ.ನಿರಂಜನ್‌, ಉಪಾಧ್ಯಕ್ಷರಾಗಿ ಎಂ.ರಾಮಕೃಷ್ಣ ಆಯ್ಕೆ

    November 11, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.