ಪಡುಬಿದ್ರಿ ಇಎಸ್ಐ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ| ಸಾತ್ವಿಕ್ ಪ್ರಮೋದ್ ಅಭಿಪ್ರಾಯ
ಹಳೆಯಂಗಡಿ: ಕಳೆದ ನಾಲ್ಕು ವರ್ಷಗಳ ಹಿಂದೆ ಪಡುಬಿದ್ರೆಯಲ್ಲಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಶಾಖೆಯು ಸ್ಥಳೀಯವಾಗಿ ಉತ್ತಮ ವ್ಯವಹಾರದೊಂದಿಗೆ ಸಮಾಜದ ಪ್ರೀತಿ ಗಳಿಸಿರುವುದಲ್ಲದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಅಭಿನಂದನೀಯ. ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಇನ್ನಷ್ಟು ಅಭಿವೃದ್ಧಿ ಆಗಲಿ ಎಂದು ಪಡುಬಿದ್ರಿ ಇಎಸ್ಐ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ| ಸಾತ್ವಿಕ್ ಪ್ರಮೋದ್ ಅಭಿಪ್ರಾಯಪಟ್ಟರು.
https://chat.whatsapp.com/FCEnlTkAKCC0MGPhXtX4i4
ಅವರು ಪಡುಬಿದ್ರಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಶಾಖೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಏರ್ ಕೂಲರ್ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಪ್ರಶಸ್ತಿ ವಿಜೇತ ಸಾಹಿತಿ ಫಾತಿಮಾ ರಲಿಯಾ ಹೆಜಮಾಡಿ ಮಾತನಾಡಿ ಪ್ರಿಯದರ್ಶಿನಿ ಸೊಸೈಟಿಯು ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿರದೆ ಅಂಗನವಾಡಿಯ ಬಡ ವಿದ್ಯಾರ್ಥಿಗಳಿಗೂ ಉತ್ತಮ ವ್ಯವಸ್ಥೆಗಾಗಿ ಇಂತಹ ವ್ಯವಸ್ಥೆಗಳನ್ನು ನೀಡುತ್ತಿರುವುದು ಅಭಿನಂದನೀಯ. ಈ ಸೊಸೈಟಿಯ ಕಾರ್ಯ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷರಾದ ಹೆಚ್ ವಸಂತ್ ಬೆರ್ನಾರ್ಡ್ ಮಾತನಾಡಿ ಪಡುಬಿದ್ರೆ ಶಾಖೆಯು ಉತ್ತಮ ಲಾಭಾಂಶದೊಂದಿಗೆ ಅಭಿವೃದ್ಧಿ ಹೊಂದಲು ಸಹಕರಿಸಿದ ಸ್ಥಳೀಯ ಗ್ರಾಹಕರಿಗೂ, ಸದಸ್ಯರಿಗೂ ಮತ್ತು ಮಾಧ್ಯಮ ಮಿತ್ರರಿಗೂ ಕೃತಜ್ಞತೆ ಅರ್ಪಿಸಿದರು.

ಅಬ್ಬೇಡಿ ಅಂಗನವಾಡಿ ಕೇಂದ್ರದ ಶ್ಯಾಮಲಾ, ಗಣಪತಿ ದೇವಸ್ಥಾನ ಕೆಳಗಿನಪೇಟೆ ಅಂಗನವಾಡಿ ಕೇಂದ್ರದ ಅನಿತಾ, ಸಾಗರ್ ವಿದ್ಯಾಮಂದಿರ ಅಂಗನವಾಡಿ ಕೇಂದ್ರದ ಶೋಭಾ, ಬೀಡಿನಕೆರೆ ಅಂಗನವಾಡಿ ಕೇಂದ್ರದ ಲೀಲಾ ಸೊಸೈಟಿಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ಸೊಸೈಟಿಯ ನಿರ್ದೇಶಕರಾದ ಗಣೇಶ್ ಪ್ರಸಾದ್ ದೇವಾಡಿಗ, ಧನಂಜಯ ಮಟ್ಟು, ಅನಿಲ್ ಪೂಜಾರಿ ಸಸಿಹಿತ್ಲು ಭಾಗವಹಿಸಿದ್ದರು. ಶಾಖಾ ಪ್ರಬಂಧಕರಾದ ಅಂಜಲಿ ಉಳ್ಳಾಲ್ ಎಸ್ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು. ಸಿಬ್ಬಂದಿಗಳಾದ ಪರ್ಣಾಲಿ ಕಿಣಿ ಮತ್ತು ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.









