Close Menu
    Top News

    ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    October 14, 2026

    ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    October 14, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ
    News

    ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    adminBy adminOctober 14, 2026

    ಮಂಗಳೂರು: ಸಹಕಾರ ಕ್ಷೇತ್ರದ ವಿಶಿಷ್ಠ ಸಾಧಕ, ಸಹಕಾರ ರಂಗದ ಧೀಮಂತ ನಾಯಕ ಸಹಕಾರ ರತ್ನ ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಮುಖಿ ಸೇವಾಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರಿಸುವ ಕಾರ್ಯಕ್ರಮ ಅ.15ರಂದು ಮಧ್ಯಾಹ್ನ 12 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.

    https://chat.whatsapp.com/FCEnlTkAKCC0MGPhXtX4i4
    ಸಹಕಾರ ಕ್ಷೇತ್ರದ ಮೂಲಕ ಆರ್ಥಿಕ ಪ್ರಗತಿ, ಸಾಮಾಜಿಕ ಕಳಕಳಿ ಹಾಗೂ ಜನಸೇವೆಗೆ ಮಹತ್ವದ ಕೊಡುಗೆ ನೀಡಿರುವ ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಅವರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಶುಭ ಹಾರೈಸುವ ಉದ್ದೇಶದಿಂದ ಈ ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ. ದುರ್ಬಲ ವರ್ಗದವರ ಸಂಕಷ್ಟಗಳಿಗೆ ಸ್ಪಂದಿಸುವುದು, ಅಶಕ್ತರಿಗೆ ನೆರವಿನ ಹಸ್ತ ಚಾಚುವುದು ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳಿಗೆ ಉತ್ತೇಜನ ನೀಡುವುದು ಪ್ರಮುಖ ಆಶಯವಾಗಿದೆ.
    ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರಿಸಲಾಗುವುದು. ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಅಗತ್ಯವಿರುವವರಿಗೆ ಸಕಾಲದಲ್ಲಿ ನೆರವು ತಲುಪಿಸುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಕಾರ ಕ್ಷೇತ್ರ ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂಬ ಆಶಯವನ್ನು ಡಾ.ಎಂ. ಎನ್‌.ರಾಜೇಂದ್ರ ಕುಮಾ‌ರ್ ಸದಾ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
    ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಂ.ಮೋಹನ್ ಆಳ್ವ ಹಾಗೂ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭಾಗವಹಿಸಲಿದ್ದಾರೆ. ಶಿಕ್ಷಣ, ಸಮಾಜಸೇವೆ ಹಾಗೂ ಆಡಳಿತ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಸಾರ್ವಜನಿಕ ಸೇವೆಯ ಮಹತ್ವವನ್ನು ಸಾರುವ ವೇದಿಕೆಯಾಗಲಿದೆ. ಸಹಕಾರ ಕ್ಷೇತ್ರದ ಮೂಲಕ ಜನರ ವಿಶ್ವಾಸ ಗಳಿಸಿರುವ ಡಾ.ಎಂ.ಎನ್‌.ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಕಾರ್ಯಕ್ರಮವು ಮಾನವೀಯತೆ, ಸಹಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ವದೊಂದಿಗೆ ನಡೆಯಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

    Banking Co Operative ministry Cooperative Cooperative Department Cooperative Registrar Dr.M.N.Rajendra Kumar SCDCC Bank Udupi District
    Previous Articleಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ
    Next Article ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    Related Posts

    ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    October 14, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸೈಬರ್ ವಂಚನೆ ತಡೆಗೆ ಮಹತ್ವದ ಹೆಜ್ಜೆ: ಐ4ಸಿ ವೇದಿಕೆಗೆ 1,200ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳು

    October 14, 2026

    ನಾಳೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಹಸ್ತಾಂತರ

    October 14, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.