Close Menu
    Top News

    ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸಂಪನ್ನ

    September 2, 2026

    ಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    September 2, 2026

    ರಾಯಚೂರಿನ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 26.90 ಲಕ್ಷ ರೂ. ನಿವ್ವಳ ಲಾಭ

    September 2, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸಂಪನ್ನ
    News

    ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸಂಪನ್ನ

    adminBy adminSeptember 2, 2026

    ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಸುಭಾಶ್ಚಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4

    ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಜನ್ಯ ಡಿ. ಶೆಟ್ಟಿ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು.
    ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಇವರು, 2025-26ನೇ ಸಾಲಿನಲ್ಲಿ ಸಂಘವು ₹81.68 ಕೋಟಿ ವಹಿವಾಟು ನಡೆಸಿದ್ದು, ₹57.09 ಲಕ್ಷ ಲಾಭ ಗಳಿಸಿದೆ. ಪ್ರಸ್ತುತ ₹33.47 ಲಕ್ಷ ಪಾಲು ಬಂಡವಾಳ ಹೊಂದಿದ್ದು, ಒಟ್ಟು 3608 ಸದಸ್ಯರನ್ನು ಹೊಂದಿದೆ.ಒಟ್ಟು ₹10.99 ಕೋಟಿ ಠೇವಣಿ ಸಂಗ್ರಹವಾಗಿದ್ದು, ₹ 8.76 ಕೋಟಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿ ಪ್ರಮಾಣ 98.94%ರಷ್ಟಿದ್ದು, ಈ ಸಾಲಿನಲ್ಲಿಯೂ ಸಂಘಕ್ಕೆ ಆಡಿಟ್ ವರ್ಗಿಕರಣದಲ್ಲಿ ಎ ದರ್ಜೆ ದೊರೆತಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
    ಸಹಕಾರಿಯು 1 ಕೋಟಿ 11 ಲಕ್ಷ ವೆಚ್ಚದ ಸ್ವಂತ ಸುಸಜ್ಜಿತ ಹವಾನಿಯಂತ್ರಿತ ಕಚೇರಿಯನ್ನು ನಿರ್ಮಾಣ ಮಾಡಿರುವುದು ಬಹಳ ಖುಷಿ ತಂದಿದೆ ಎಂದು ಹೇಳಿದರು. ನಮ್ಮೆಲ್ಲ ಸದಸ್ಯರಿಗೆ ಅವರ ಅನುಕೂಲಕ್ಕಾಗಿ ಎಲ್ಲ ರೀತಿಯ ಸೇವೆ ಗಳನ್ನು ನಮ್ಮ ಸಿಬ್ಬಂದಿ ವರ್ಗದವರು ಸಮಯಕ್ಕೆ ಸರಿಯಾಗಿ ನೀಡುತ್ತಿದ್ದು ನಮ್ಮೆಲ್ಲ ಸದಸ್ಯರ ಪ್ರೀತಿಗೆ ಪಾತ್ರರಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಠೇವಣಿ ಸಂಗ್ರಹ, ಸಾಲ ನೀಡಿಕೆ ಸಾಲ ವಸೂಲಾತಿ ಸೇರಿದಂತೆ ಎಲ್ಲಾ ಕ್ಷೇತ್ರಗಳು ನಿರೀಕ್ಷೆಗೂ ಮೀರಿ ಪ್ರಗತಿಯನ್ನು ದಾಖಲಿಸಿದೆ ಎಂದು ಹೇಳಿದರು. ಪ್ರತಿಯೊಬ್ಬ ಸದಸ್ಯರು ಆರ್.ಡಿ , ಎಫ್.ಡಿ ಮುಂತಾದ ಉಳಿತಾಯ ಯೋಜನೆಗಳನ್ನು ಮಾಡುವಂತೆ ಸದಸ್ಯರಲ್ಲಿ ವಿನಂತಿ ಮಾಡಿದರು.
    ಸಭೆಯಲ್ಲಿ ಉಪಾಧ್ಯಕ್ಷರಾದ ಶಿವರಾಮ್ ಜೆ ಶೆಟ್ಟಿ, ನಿರ್ದೇಶಕರಾದ ವಿಶ್ವನಾಥ್ ಬೋವಿ, ರಾಮಚಂದ್ರ ಕೆಂಬಾರೆ, ಬಾಬು ಎಂ, ನಾಗರಾಜ್ ಶೆಟ್ಟಿ, ಅಬುಲಾಲ್ ಪುತ್ತಿಗೆ, ದಯಾನಂದ, ನಾರಾಯಣ ಶೆಟ್ಟಿ, ಶಾಂತಾ, ಗೀತಾಂಜಲಿ, ರೆನಿಟಾ ಗ್ರೇಸಿ ಡಿಸೋಜ ಉಪಸ್ಥಿತರಿದ್ದರು.
    “ಸ್ವ ಸಹಾಯ ಗುಂಪು ಕಲ್ಯಾಣ ನಿಧಿ ”
    ಸ್ವ ಸಹಾಯ ಸಂಘದ ಸದಸ್ಯರು ಮೃತ ಪಟ್ಟ ಸಂದರ್ಭದಲ್ಲಿ ಆ ಸದಸ್ಯರ ಸಾಲದ ಬಾಕಿ ಮೊತ್ತದಲ್ಲಿ 50,000 ಮನ್ನಾ ಮಾಡುವ ಯೋಜನೆಯನ್ನು ಘೋಷಣೆ ಮಾಡಲಾಯಿತು.

    ಒಟ್ಟು 65 ಸ್ವ ಸಹಾಯ ಗುಂಪುಗಳು ಇದ್ದು ಇದರಲ್ಲಿ 10 ಉತ್ತಮ ಸ್ವ ಸಹಾಯ ಗುಂಪುಗಳನ್ನು ಗುರುತಿಸಿ ಗೌರವಿಸಲಾಯಿತು. ನಿರ್ದೇಶಕರಾದ ದಯಾನಂದರವರು ವಂದನಾರ್ಪಣೆ ನಡೆಸಿಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿ ಬಂದ ಸದಸ್ಯರೆಲ್ಲರಿಗೂ ಉಡುಗೊರೆ ನೀಡಲಾಯಿತು.

    Banking Co Operative ministry Cooperative Cooperative Department Cooperative Registrar Mudubidire Vividhoddesha Souharda Sahakari Sangha
    Previous Articleಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    Related Posts

    ಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    September 2, 2026

    ರಾಯಚೂರಿನ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 26.90 ಲಕ್ಷ ರೂ. ನಿವ್ವಳ ಲಾಭ

    September 2, 2026

    ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ

    September 2, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸಂಪನ್ನ

    September 2, 2026

    ಪ್ರಿಯದರ್ಶಿನಿ ಸೊಸೈಟಿಯಲ್ಲಿ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿ ಸ್ಥಾಪನೆ

    September 2, 2026

    ರಾಯಚೂರಿನ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 26.90 ಲಕ್ಷ ರೂ. ನಿವ್ವಳ ಲಾಭ

    September 2, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.