Close Menu
    Top News

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026

    ಎರಡು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

    October 12, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಮಂಗಳಾಜ್ಯೋತಿ ವಿವಿಧೋದ್ಧೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ. 18 ಡಿವಿಡೆಂಡ್ ಘೋಷಣೆ
    News

    ಶ್ರೀ ಮಂಗಳಾಜ್ಯೋತಿ ವಿವಿಧೋದ್ಧೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ. 18 ಡಿವಿಡೆಂಡ್ ಘೋಷಣೆ

    adminBy adminAugust 28, 2026

    ಮಂಗಳೂರು : ನಗರದ ಬಿಜೈ ಪ್ರದೇಶದಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಮಂಗಳಾಜ್ಯೋತಿ ವಿವಿಧೋದ್ಧೇಶ ಸಹಕಾರಿ ಸಂಘ ನಿಯಮಿತ, ಬಿಜೈ, ಮಂಗಳೂರು ಇದರ 31ನೇ ವಾರ್ಷಿಕ ಮಹಾಸಭೆ ಹಾಗೂ 2025-26ನೇ ಸಾಲಿನ ವಾರ್ಷಿಕ ವರದಿ ಮಂಡನೆ ಸಂಘದ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಬಿಜೈ ಚರ್ಚ್ ಹಾಲ್‌ನಲ್ಲಿ ಜರಗಿತು.

    https://chat.whatsapp.com/FCEnlTkAKCC0MGPhXtX4i4
    ಸಂಘವು ವರದಿ ವರ್ಷ 2025-26ರಲ್ಲಿ 22 ಕೋಟಿ 48 ಲಕ್ಷ ಠೇವಣಿ ಹಾಗೂ 23 ಕೋಟಿ 23 ಲಕ್ಷ ಹೊರಬಾಕಿ ಸಾಲಗಳೊಂದಿಗೆ ಒಟ್ಟು 178 ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದು 52.84 ಲಕ್ಷ ರೂಪಾಯಿ ಲಾಭ ಗಳಿಸಿದೆ. 98 ಶೇಕಡಾಕ್ಕಿಂತಲೂ ಅಧಿಕ ಸಾಲ ವಸೂಲಾತಿ ದಾಖಲಿಸಿ ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿ ವರ್ಗಿಕರಣಗೊಂಡಿದೆ. ಸದಸ್ಯರಿಗೆ 18 ಶೇಕಡಾ ಡಿವಿಡೆಂಡ್ ಘೋಷಿಸಲಾಯಿತು. ವರದಿ ವರ್ಷದಲ್ಲಿ ಸಂಘದ ವ್ಯವಹಾರಗಳಲ್ಲಿ ಶೇಕಡಾ 35ರಷ್ಟು ಅಭಿವೃದ್ಧಿ ದಾಖಲಿಸಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿಯೂ ಸಂಘಕ್ಕೆ ಲಭಿಸಿರುತ್ತದೆ.
    ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಆರ್. ಸಂಘದ ವಾರ್ಷಿಕ ವರದಿ ಮಂಡಿಸಿದರು. ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಘದ ಪ್ರಗತಿಯ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಸದಸ್ಯರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಪಿಗ್ಮಿ ಸಂಗ್ರಾಹಕರಿಗೆ ಹಾಗೂ ಸಂಘದ ಎಲ್ಲಾ ಹಿತೈಷಿಗಳಿಗೆ ವಂದನೆಯನ್ನು ಸಲ್ಲಿಸಿ, ಮುಂದಿನ ವರ್ಷಗಳಲ್ಲೂ ಎಲ್ಲರ ಸಹಕಾರ ಅಪೇಕ್ಷಿಸಿದರು.


    ಸಂಘದ ಹೊಸ ಠೇವಣಿ ಯೋಜನೆಯಾದ “ಮಂಗಳ ಲಕ್ಷಾಧಿಪತಿ ಯೋಜನೆ”ಯು ಮಾಜಿ ಅಧ್ಯಕ್ಷರಾದ ದಾಮೋದರ್ ಎ ಇವರಿಂದ ಉದ್ಘಾಟನೆಗೊಂಡಿತು. ಸಂಘದ ವತಿಯಿಂದ 22 ಮಂದಿ ಸದಸ್ಯರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾ ಪ್ರೋತ್ಸಾಹಧನ ವಿತರಿಸಲಾಯಿತು. ನಿರ್ದೇಶಕಿ ಪ್ರಮೀಳಾ ಎ ಸಾಲ್ಯಾನ್ ವಿದ್ಯಾರ್ಥಿಗಳ ಹೆಸರನ್ನು ಸಭೆಗೆ ಓದಿ ಹೇಳಿದರು.
    ಸಂಘದ ಅಭಿವೃದ್ಧಿಗೆ ಶ್ರಮಿಸಿದ ಪಿಗ್ಮಿ ಸಂಗ್ರಾಹಕರನ್ನು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸಂಸ್ಥೆಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಿರಿಯ ನಿರ್ದೇಶಕರಾದ ವಿಶ್ವನಾಥ ಬಂಗೇರ ಹಾಗೂ ಉಪಾಧ್ಯಕ್ಷರಾದ ಭೋಜ ಎಸ್ ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಲೋಕೇಶ್ ಬೊಳ್ಳಾಜೆ ಇವರನ್ನು ಗೌರವಿಸಲಾಯಿತು. ಉಪಾಧ್ಯಕ್ಷರಾದ ಭೋಜ ಎಸ್. ಕುಲಾಲ್, ನಿರ್ದೇಶಕರಾದ ವಿಶ್ವನಾಥ ಬಂಗೇರ, ಜೀವನ್ ಕುಮಾರ್, ಭೋಜ ಯು ಮೂಲ್ಯ, ಸುರೇಶ್ ಕೆ ಕುಲಾಲ್, ಮೋಹನದಾಸ್ ಬಿ. ಹಾಗೂ ಪ್ರಮೀಳಾ ಎ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ವಿದ್ಯಾ ನವೀನ್‌ಚಂದ್ರ ಪ್ರಾರ್ಥನೆ ಸಲ್ಲಿಸಿದರು. ನಿರ್ದೇಶಕರಾದ ಭೋಜ ಯು ಮೂಲ್ಯ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸುರೇಶ್ ಕೆ ಕುಲಾಲ್ ಸ್ವಾಗತಿಸಿದರು. ಜೀವನ್ ಕುಮಾರ್ ವಂದಿಸಿದರು.

     

     

    Banking Co Operative ministry Cooperative Cooperative Department Cooperative Registrar Rajendra Kumar Shree Mangalajyothi Vividhoddesha Sahakari Sangha Bejai
    Previous Articleಹೊಸಾಡು ಸೇವಾ ಸಹಕಾರ ಸಂಘ ನಿ. ಮುಳ್ಳಿಕಟ್ಟೆ ವಾರ್ಷಿಕ ಮಹಾಸಭೆ: ಶೇ10 ಡಿವಿಡೆಂಡ್ ಘೋಷಣೆ
    Next Article ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘ 71.63 ಲಕ್ಷ ರೂ ಲಾಭ, ಶೇ.12 ಡಿವಿಡೆಂಡ್

    Related Posts

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026

    ಎರಡು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

    October 12, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

    October 13, 2026

    ಕೆಪಿಎಸ್‌ಸಿ ನೇಮಕಾತಿ ಹಗರಣ: ಭಾಲ್ಕಿಯಲ್ಲಿ ಸಹಕಾರಿ ಸಂಘದ ಮೇಲೆ ಇ.ಡಿ. ದಾಳಿ

    October 12, 2026

    ಎರಡು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

    October 12, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.