Close Menu
    Top News

    ಎನ್‌ಸಿಯುಐ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳು ವಜಾ; ಪದಾಧಿಕಾರಿಗಳ ಚುನಾವಣೆಗೆ ದಾರಿ ಸುಗಮ

    August 18, 2026

    ಸೂರ್ಯ ಸೌಹಾರ್ದ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆ

    August 18, 2026

    ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿಗೆ ರೂ 1.15 ಕೋಟಿ ನಿವ್ವಳ ಲಾಭ: ಶೇಕಡಾ 16 ಡಿವಿಡೆಂಡ್ ಘೋಷಣೆ

    August 18, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಆಟಿದ ಪೊಲಬು
    News

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಆಟಿದ ಪೊಲಬು

    adminBy adminAugust 18, 2026

    ಮಂಗಳೂರು: ಆಟಿ ತಿಂಗಳ ವಿಶೇಷ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಛೇರಿ ಪಡೀಲ್‌ನ “ಆತ್ಮಶಕ್ತಿ ಸೌಧ”ದಲ್ಲಿ ಆಚರಿಸಲಾಯಿತು.

    https://chat.whatsapp.com/FCEnlTkAKCC0MGPhXtX4i4
    ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ತಾರಾ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇವತ್ತಿನ ಆಟಿದ ಪೊಲಬು ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಶೈಲಿಯ ತಿನಿಸಿಗಳನ್ನು ಸಂಘದ ಎಲ್ಲಾ ಸಿಬ್ಬಂದಿಗಳು ತಮ್ಮ ಮನೆಯಲ್ಲಿ ತಯಾರಿಸಿ ತಂದಿರುತ್ತಾರೆ . ಜೊತೆಗೆ ನಾಟಿ ವೈದ್ಯರನ್ನು ಸನ್ಮಾನಿಸುವ ಮೂಲಕ ತುಳುನಾಡಿನ ಸಂಸ್ಕೃತಿ ಹಾಗೂ ಭಾಷೆಯನ್ನು ಬೆಳೆಸುವ ಕೆಲಸಗಳನ್ನು ಸಂಘವು ಮಾಡುತ್ತಿದೆ. ಸಂಘವು ಆಟಿದ ಪೊಲಬು ವಿಶಿಷ್ಟವಾದ ಕಾರ್ಯಕ್ರಮವನ್ನು ಆಯೋಜಿಸಿ, ವೇದಿಕೆಯನ್ನು ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ ಮಾಡಿರುವುದು ಕಾರ್ಯಕ್ರಮದ ಮೆರಗನ್ನು ಇನ್ನೂ ಹೆಚ್ಚಿಸಿದೆ ಎಂದರು.
    ಆಟಿಯ ಇಡೀ ತಿಂಗಳನ್ನು ನಮ್ಮ ಹಿರಿಯರು ಧಾರ್ಮಿಕತೆಯ ಲೇಪದಲ್ಲಿ ವೈಜ್ಞಾನಿಕತೆಯನ್ನು ಪ್ರತಿಬಿಂಬಿಸಿ ಆರೋಗ್ಯ ಮಾನಸಿಕ ಗಟ್ಟಿತನವನ್ನು ಗಳಿಸಿಕೊಳ್ಳುವುದರಲ್ಲಿ ನಮಗೆ ದಾರಿದೀಪವನ್ನು ಉರಿಸಿಟ್ಟು ಹೋಗಿದ್ದಾರೆ. ಆಟಿಯ ತಿಂಡಿ ತಿನಸು ಆಹಾರ. ಇಡೀ ವರುಷ ನಮ್ಮನ್ನು ಆರೋಗ್ಯವಾಗಿ ಇಡುವಲ್ಲಿ ಕಾರಣವಾಗಿದೆ. ಯಾoತ್ರಿಕ ಬದುಕಿನ ಈ ದಿನಗಳಲ್ಲೂ ಆಟಿಯ ಸೊಗಡನ್ನು ಈ ಬಗೆಯಲ್ಲದರೂ ವ್ಯಕ್ತಪಡಿಸುವುದು ಶ್ಲಾಘನೀಯ ಎಂದು ಹೇಳಿದರು.

     


    ನಾಟಿ ವೈದ್ಯರಾದ ಕಮಲ ಕೆ. ಅವರನ್ನು ಸಂಘದ ವತಿಯಿಂದ ಸನ್ಮಾನಿಲಾಯಿತು. ಸಂಘದ ಸದಸ್ಯರಾದ ಉಮಾನಾಥ ಕೋಟೆಕಾರ್ ಸ್ವಚ್ಛತೆಯ ಬಗ್ಗೆ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ ಪರಿಸರವನ್ನು ರಕ್ಷಿಸುವ ಬಗ್ಗೆ ಮಾಹಿತಿ ನೀಡಿದರು.
    ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು ನಮ್ಮ ಸಂಸ್ಥೆಯಲ್ಲಿ ಆಟಿದ ಪೊಲಬು ಎಂಬ ಹೆಸರಿನಿಂದ ಎಲ್ಲಾ ಸಿಬ್ಬಂದಿಗಳ ಪೂರ್ಣ ಸಹಕಾರದಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತ ಇದ್ದೇವೆ. ಇದು ಆತ್ಮಶಕ್ತಿ ಕುಟುಂಬದ ಕಾರ್ಯಕ್ರಮ. ಇದರಲ್ಲಿ ನಮ್ಮ ಸಿಬ್ಬಂದಿಗಳು ಅವರ ಮನೆಯಲ್ಲಿ ತಯಾರು ಮಾಡಿದ ರುಚಿ ರುಚಿಯಾದ ತುಳುನಾಡಿನ ಆಟಿ ತಿಂಗಳಿನ ವಿವಿಧ ತಿಂಡಿ ತಿನಿಸುಗಳು, ಭಕ್ಷ್ಯ ಭೋಜನಗಳನ್ನು ತಂದಿರುತ್ತಾರೆ. ಅಲ್ಲದೇ ಈ ಬಾರಿಯ ವೇದಿಕೆಯನ್ನೂ ಸಹ ವಿಶೇಷವಾಗಿ ಅತ್ಯಂತ ಅರ್ಥಪೂರ್ಣವಾಗಿ ನಿರ್ಮಿಸಲಾಗಿದೆ ಎಂದರು.
    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಆನಂದ್ ಎಸ್ ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ದಿವಾಕರ್ ಬಿ.ಪಿ, ಗೋಪಾಲ್ ಎಂ., ಉಮಾವತಿ, ಚಂದ್ರಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಗೌರವಾಧ್ಯಕ್ಷ ವಾಮನ್ ಕೆ, ಅಧ್ಯಕ್ಷರಾದ ಗೋಪಾಲ್, ಜೊತೆ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ ರೆಂಜಾಳ ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಪರಮೇಶ್ವರ ಜಿ. ಪೂಜಾರಿ ಸ್ವಾಗತಿಸಿ, ಉಪಾಧ್ಯಕ್ಷರಾದ ನೇಮಿರಾಜ್ ಪಿ ವಂದಿಸಿದರು. ಶಾಖಾಧಿಕಾರಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

    Aatida Polabu Athmashakthi Vividhoddesha Sahakara Sangha Atmashakti Soudha Padeel Banking Canara College Mangalore Chittaranjan Bolar Co Operative ministry Cooperative Department Cooperative Registrar
    Previous Articleಸಫಲ ಸೌಹಾರ್ದ ಸಹಕಾರಿ ಸಂಘದ ಏಳನೇ ವಾರ್ಷಿಕ ಮಹಾಸಭೆ
    Next Article ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿಗೆ ರೂ 1.15 ಕೋಟಿ ನಿವ್ವಳ ಲಾಭ: ಶೇಕಡಾ 16 ಡಿವಿಡೆಂಡ್ ಘೋಷಣೆ

    Related Posts

    ಎನ್‌ಸಿಯುಐ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳು ವಜಾ; ಪದಾಧಿಕಾರಿಗಳ ಚುನಾವಣೆಗೆ ದಾರಿ ಸುಗಮ

    August 18, 2026

    ಸೂರ್ಯ ಸೌಹಾರ್ದ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆ

    August 18, 2026

    ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿಗೆ ರೂ 1.15 ಕೋಟಿ ನಿವ್ವಳ ಲಾಭ: ಶೇಕಡಾ 16 ಡಿವಿಡೆಂಡ್ ಘೋಷಣೆ

    August 18, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಎನ್‌ಸಿಯುಐ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ವಿಶೇಷ ಅನುಮತಿ ಅರ್ಜಿಗಳು ವಜಾ; ಪದಾಧಿಕಾರಿಗಳ ಚುನಾವಣೆಗೆ ದಾರಿ ಸುಗಮ

    August 18, 2026

    ಸೂರ್ಯ ಸೌಹಾರ್ದ ಸೊಸೈಟಿಯ ಮೂರನೇ ವಾರ್ಷಿಕ ಮಹಾಸಭೆ

    August 18, 2026

    ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿಗೆ ರೂ 1.15 ಕೋಟಿ ನಿವ್ವಳ ಲಾಭ: ಶೇಕಡಾ 16 ಡಿವಿಡೆಂಡ್ ಘೋಷಣೆ

    August 18, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.