ಉಳ್ಳಾಲ: ಅಸೈಗೋಳಿಯ ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.
https://chat.whatsapp.com/FCEnlTkAKCC0MGPhXtX4i4
ಸನ್ಮಾನ ಸ್ವೀಕರಿಸಿ ಮಾತನಾಡಿದ ಯು.ಟಿ ಖಾದರ್, ಸಮಾಜ, ದೇಶ ಕಟ್ಟಲು ಶೈಕ್ಷಣಿಕ ಸಂಸ್ಥೆ, ಸಂಘ ಸಂಸ್ಥೆಗಳು, ಸಹಕಾರಿ ಸಂಘಗಳ ಸಹಕಾರ ಅಗತ್ಯವಿದೆ. ಅಸೈಗೋಳಿ ಮೈದಾನವನ್ನು ಶೀಘ್ರ ಮಿನಿ ಸ್ಟೇಡಿಯಂ ಆಗಿ ರೂಪಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಶುಭ ಹಾರೈಸಿದರು. ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಲ್ಲು ಅಧ್ಯಕ್ಷತೆ ವಹಿಸಿದ್ದರು. ಮೂರ್ನಾಲ್ಕು ಗ್ರಾಮಗಳಿಗೆ ಆಟಕ್ಕಾಗಿ ಅಸೈಗೋಳಿ ಮೈದಾನ ಮಾತ್ರ ಇರುವುದು. ಇದನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿಸುವ ಅವಶ್ಯಕತೆ ಇದೆ. 50 ವರ್ಷಗಳ ಹಿಂದೆ ಸರ್ವಧರ್ಮೀಯರು ಸೇರಿ ಸ್ಥಾಪಿಸಿದ ಸಹಕಾರಿ ಸಂಘದ ಅಭಿವೃದ್ಧಿಗೆ ಸಚಿವರ ಸಹಕಾರ ಬೇಕಿದೆ ಎಂದು ಸಂತೋಷ್ ಶೆಟ್ಟಿ ಮನವಿ ಮಾಡಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಪುಲ್ಲು, ಪಜೀರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಭರತ್ರಾಜ್ ಶೆಟ್ಟಿ ಪಜೀರುಗುತ್ತು, ನಝೀರ್ ಮೊಯಿದ್ದೀನ್, ಗಡಿಪ್ರಧಾನರಾದ ದಿವಾಕರ ಭಂಡಾರಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಗತಿಪರ ಕೃಷಿಕರಾದ ರಮಾನಾಥ ಶೆಟ್ಟಿ, ನಾರಾಯಣ ರೈ ಕಕ್ಕೆಮಜಲು, ಸಂಘದ ಉಪಾಧ್ಯಕ್ಷ ಕರುಣಾಕರ ಮೊದಲಾದವರು ಉಪಸ್ಥಿತರಿದ್ದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com



