ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ತಮ್ಮ ಸ್ವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛ ಭಾರತ್ -ಸ್ವಚ್ಛತಾ ಶ್ರಮದಾನದ ಸಮಾರೋಪ ಸಮಾರಂಭ ಜೂನ್ 7ರಂದು ನಡೆಯಲಿದೆ. ವಿಶ್ವಕರ್ಮ ಸಹಕಾರ ಬ್ಯಾಂಕಿನ ವಿವಿಧ ಬ್ರಾಂಚ್ಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
https://chat.whatsapp.com/FCEnlTkAKCC0MGPhXtX4i4
ಮಂಗಳೂರು ಶಾಖೆಯ ವತಿಯಿಂದ ಬೆಳಗ್ಗೆ 7 ಗಂಟೆಗೆ ಕಾರ್ಸ್ಟ್ರೀಟ್ ಮಿಷನ್ ಹೈಸ್ಕೂಲ್ ರಸ್ತೆಯ ಬಿಇಎಂ ವಿದ್ಯಾಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಗ್ರೀನ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಡಾ.ರಾದಾಕೃಷ್ಣ ನಾಯರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಕಳ ಬ್ರಾಂಚ್ನ ವತಿಯಿಂದ ಬೆಳಗ್ಗೆ 7ರಿಂದ 9ರ ತನಕ ಕಾರ್ಕಳ ಬಸ್ ನಿಲ್ದಾಣ ಹಾಗೂ ಮಾರಿಗುಡಿ ದೇವಸ್ಥಾನದ ಪರಿಸರದಲ್ಲಿ, ಉಜಿರೆ ಬ್ರಾಂಚ್ ವತಿಯಿಂದ ಬೆಳಗ್ಗೆ 7ರಿಂದ 9.30ರ ತನಕ ಉಜಿರೆ ಬಸ್ ನಿಲ್ದಾಣ ಹಾಗೂ ಕಾಲೇಜು ರಸ್ತೆಯಲ್ಲಿ, ಮೆಲ್ಕಾರ್ ಬ್ರಾಂಚ್ ವತಿಯಿಂದ ಮೆಲ್ಕಾರ್ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಲಿದೆ. ಉಡುಪಿ ಶಾಖೆಯ ವತಿಯಿಂದ ಬೆಳಗ್ಗೆ 7ರಿಂದ 9.30ರ ತನಕ ದೊಡ್ಡಣಗುಡ್ಡೆ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






