ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಾಣಿ ಶಾಖೆಯ ತೃತೀಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಮಾಣಿ ಶಾಖೆಯಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಸಂಘದ ಗ್ರಾಹಕರುಗಳಾದ ಕಮಲಾಕ್ಷ, ಪುಷ್ಪರಾಜ್ ಕೆ, ಶಿವಣ್ಣ ಎಸ್. ಎಸ್., ಪ್ರಕಾಶ್, ಪ್ರದೀಪ್, ಅಬ್ದುಲ್ ರಜಾಕ್ ಮತ್ತು ಅಬ್ದುಲ್ ರಿಯಾಜ್ ಎನ್ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಮಾಣಿ ಶಾಖೆಯಲ್ಲಿ ಗ್ರಾಹಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಿರಖು ಠೇವಣಿ ಹಾಗೂ ಆಭರಣ ಸಾಲ ನೀಡಲಾಗಿದೆ. ಶಾಖೆಯು ಲಾಭದಾಯಕವಾಗಿ ಕಾರ್ಯಾಚರಿಸುತ್ತಿದೆ. ನಮ್ಮ ಎಲ್ಲಾ ಶಾಖೆಗಳಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ಎಲ್ಲಾ ಕಂಪನಿಗಳ ವಿಮಾ ಸೌಲಭ್ಯಗಳು ಕೂಡ ಲಭ್ಯವಿರುತ್ತದೆ. ಎಲ್ಲಾ ಗ್ರಾಹಕರು ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.
ಸದಸ್ಯರಾದ ಪುಷ್ಪರಾಜ್ ಕೆ ಮಾತನಾಡಿ, ಸಂಘದ ಸಿಬ್ಬಂದಿಗಳ ಸೇವೆ ಉತ್ತಮವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯರಾದ ಅಬ್ದುಲ್ ರಿಯಾಜ್ ಎನ್ ಸಂಘವು ಶೀಘ್ರಗತಿಯಲ್ಲಿ ಚಿನ್ನಾಭರಣ ಸಾಲ ನೀಡುತ್ತಿದ್ದು, ಇದರಿಂದ ಗ್ರಾಹಕರಿಗೆ ತುಂಬ ಅನುಕೂಲವಾಗುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಉತ್ತಮ ಪ್ರಗತಿ ಹೊಂದಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿನ್ನಾಭರಣ ಸಾಲದ ಸೇವೆಯನ್ನು ಹೆಚ್ಚಾಗಿ ನೀಡುತಿದ್ದು, ಈಗಾಗಲೇ ಸುಮಾರು ೨೦೦ ಕೋಟಿಗೂ ಮಿಕ್ಕಿ ಹೆಚ್ಚಿನ ಚಿನ್ನಾಭರಣ ಸಾಲ ನೀಡಲಾಗಿದ್ದು, ಗ್ರಾಹಕರ ಸಹಕಾರದಿಂದ ಮಾತ್ರ ಇದು ಸಾಧ್ಯ ಎಂಬುವುದಾಗಿ ತಿಳಿಸಿದರು. ಸಂಸ್ಥೆಯು ಕೇವಲ ಬ್ಯಾಂಕಿ೦ಗ್ ಮಾತ್ರವಲ್ಲದೆ, ಜೀವ ವಿಮೆ, ಆರೋಗ್ಯ ವಿಮೆ ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುವುದಾಗಿ ತಿಳಿಸಿದರು. ಆಯ್ದ ರಜಾದಿನಗಳಲ್ಲಿ ನಮ್ಮ ಸೇವೆಯು ನಿರಂತರವಾಗಿರುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ ನಡೆಸುವುದಾಗಿ ತಿಳಿಸಿದರು. ಶಾಖೆಯ ಸಿಬ್ಬಂದಿ ದೀಪ್ತಿ ಡಿ.ಎನ್. ಸ್ವಾಗತಿಸಿ, ಶಾಖೆಯ ಶಾಖಾಧಿಕಾರಿ ಚಿತ್ರಾವತಿ ಎಚ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com




