4.05 ಕೋಟಿ ರೂಪಾಯಿ ಲಾಭ, ಐತಿಹಾಸಿಕ ಮೈಲಿಗಲ್ಲು
ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯಾದ ರೂ. 1090 ಕೋಟಿಯ ವ್ಯವಹಾರ ನಡೆಸಿದ್ದು, 4.05 ಕೋಟಿ ರೂಪಾಯಿ ಲಾಭ ಗಳಿಸಿ, ಹೊಸ ಇತಿಹಾಸ ನಿರ್ಮಿಸಿದೆ.
https://chat.whatsapp.com/FCEnlTkAKCC0MGPhXtX4i4
ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡು ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿರುವ ವಿಟ್ಲ ಸಹಕಾರಿ ಗ್ರಾಮೀಣ ಸಂಘವು, ಒಟ್ಟು 9189 ಮಂದಿ ಸದಸ್ಯರನ್ನು ಹೊಂದಿದ್ದು, 3.04 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿರುತ್ತದೆ ಹಾಗೂ ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 226 ಕೋಟಿ ರೂಪಾಯಿಗಳ ಹೆಚ್ಚಿನ ವ್ಯವಹಾರ ದಾಖಲಿಸಿ ಅದ್ಭುತ ಸಾಧನೆ ಪ್ರದರ್ಶಿಸಿದೆ.
ಆಧುನಿಕ ಯುಗದ ಪೈಪೋಟಿಯ ಮಧ್ಯೆಯೂ 149.84 ಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇಕಡಾ 11.22ರಷ್ಟು ಹೆಚ್ಚಳವಾಗಿದೆ. ಅಲ್ಲದೆ 125.63 ಕೋಟಿ ರೂಪಾಯಿಗಳ ಹೊರಬಾಕಿ ಸಾಲಗಳಿದ್ದು ಸಾಲ ವಸೂಲಾತಿಯೂ ಕಳೆದ ಸಾಲಿಗಿಂತ ಹೆಚ್ಚಾಗಿದ್ದು ಶೇಕಡಾ 95.11 ಆಗಿರುತ್ತದೆ.
ಪ್ರಸ್ತುತ ಸಂಘದಲ್ಲಿ 9.96 ಕೋಟಿ ರೂಪಾಯಿ ಮೀಸಲು ನಿಧಿಯಿದ್ದು, 13.65 ಕೋಟಿ ರೂಪಾಯಿಗಳ ಇತರ ನಿಧಿಗಳನ್ನು ಹೊಂದಿದ್ದು, 4.43 ಕೋಟಿ ರೂಪಾಯಿ ಚರ ಹಾಗೂ ಸ್ಥಿರಾಸ್ತಿಗಳನ್ನು ಹೊಂದಿರುತ್ತದೆ. ಸಂಘದ ದುಡಿಯುವ ಬಂಡವಾಳ 180.55 ಕೋಟಿ ರೂಪಾಯಿಗಳಾಗಿರುತ್ತದೆ. ಸಂಘವು ಹಲವಾರು ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯಲ್ಲಿದ್ದು, ಕಳೆದ ಸಾಲಿನಲ್ಲಿ ಶೇಕಡಾ 22 ಡಿವಿಡೆಂಡ್ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರಿಂದ, ಸತತವಾಗಿ 4 ಬಾರಿ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಉಪ್ಪಿನಂಗಡಿಯಲ್ಲಿ ಸಂಘದ 5ನೇ ಶಾಖೆಯನ್ನು ತೆರೆಯಲು ಕೆಲಸಗಳು ಬಿರುಸಿನಿಂದ ಸಾಗುತ್ತಿದೆ.
31-03-2026ಕ್ಕೆ ಸಂಘದ ಪ್ರಧಾನ ಕಚೇರಿ ಹಾಗೂ ಶಾಖೆಗಳ ಸಾಧನೆಯ ಸಿಂಹಾವಲೋಕನ
ಪ್ರಧಾನ ಕಛೇರಿ : ಒಟ್ಟು ವ್ಯವಹಾರ 623 ಕೋಟಿ ರೂಪಾಯಿಗಳಾಗಿದ್ದು, ಠೇವಣಾತಿಯು 87.09 ಕೋಟಿ ರೂಪಾಯಿಗಳಾಗಿರುತ್ತದೆ. 45.70 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 95.45 ಆಗಿರುತ್ತದೆ, ಅಂದಾಜು 3.17 ಕೋಟಿ ರೂಪಾಯಿಗಳ ಲಾಭಗಳಿಸಿರುತ್ತದೆ.
ಕನ್ಯಾನ ಶಾಖೆ : ಒಟ್ಟು ವ್ಯವಹಾರ 128 ಕೋಟಿ ರೂಪಾಯಿಗಳಾಗಿದ್ದು, ಠೇವಣಾತಿಯು 21.01 ಕೋಟಿ ರೂಪಾಯಿಗಳಾಗಿರುತ್ತದೆ. 15.07 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 98.28 ಆಗಿರುತ್ತದೆ. ಅಂದಾಜು 20.79 ಲಕ್ಷ ರೂಪಾಯಿ ಲಾಭಗಳಿಸಿರುತ್ತದೆ.
ಕಲ್ಲಡ್ಕ ಶಾಖೆ : ಒಟ್ಟು ವ್ಯವಹಾರ 146.53 ಕೋಟಿ ರೂಪಾಯಿಗಳಾಗಿದ್ದು, ಠೇವಣಾತಿಯು 11.82 ಕೋಟಿ ರೂಪಾಯಿಗಳಾಗಿರುತ್ತದೆ. 24.53 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 97.33 ಆಗಿರುತ್ತದೆ. ಅಂದಾಜು 38.03 ಲಕ್ಷ ರೂಪಾಯಿ ಲಾಭಗಳಿಸಿರುತ್ತದೆ.
ಬಿ.ಸಿ.ರೋಡ್ ಶಾಖೆ : ಒಟ್ಟು ವ್ಯವಹಾರ 82.67 ಕೋಟಿ ರೂಪಾಯಿಗಳಾಗಿದ್ದು, ಠೇವಣಾತಿಯು 11.02 ಕೋಟಿ ರೂಪಾಯಿಗಳಾಗಿರುತ್ತದೆ. 9.72 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 94.98 ಆಗಿರುತ್ತದೆ, ಅಂದಾಜು 5.18 ಲಕ್ಷ ರೂಪಾಯಿ ಲಾಭಗಳಿಸಿರುತ್ತದೆ.
ಪುತ್ತೂರು ಶಾಖೆ : ಒಟ್ಟು ವ್ಯವಹಾರ 110.52 ಕೋಟಿ ರೂಪಾಯಿಗಳಾಗಿದ್ದು, ಠೇವಣಾತಿಯು 18.87 ಕೋಟಿ ರೂಪಾಯಿಗಳಾಗಿರುತ್ತದೆ. 18.27 ಕೋಟಿ ರೂಪಾಯಿಗಳ ಹೊರ ಬಾಕಿ ಸಾಲ ಇದ್ದು ವಸೂಲಾತಿಯು ಶೇಕಡಾ 88.01 ಆಗಿರುತ್ತದೆ. ಅಂದಾಜು 24.50 ಲಕ್ಷ ರೂಪಾಯಿ ಲಾಭಗಳಿಸಿರುತ್ತದೆ.
2026-27 ಕ್ಕೆ ವ್ಯವಹಾರದ ಗುರಿ:
2026-27ನೇ ಸಾಲಿನಲ್ಲಿ ಸಂಘವು 1150 ಕೋಟಿಗೂ ಮೀರಿದ ವ್ಯವಹಾರವನ್ನು, 160 ಕೋಟಿ ಮೇಲ್ಪಟ್ಟು ಠೇವಣಿ ಸಂಗ್ರಹಣೆ, 135 ಕೋಟಿಗೂ ಮೀರಿದ ಸಾಲ ನೀಡಿಕೆ, 4.45 ಕೋಟಿಗೂ ಮೀರಿದ ಲಾಭವನ್ನು ಹಾಗೂ 96 ಶೇಕಡಾ ಸಾಲ ವಸೂಲಾತಿ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಸಂಘವು ಅನುಭವಿ ಆಡಳಿತ ಮಂಡಳಿಯನ್ನು ಹೊಂದಿದ್ದು, ಸಂಘದ ಅಧ್ಯಕ್ಷರಾಗಿ ಶ್ರೀಯುತ ಹೆಚ್.ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾಗಿ ಶ್ರೀ ಮನೋರಂಜನ್ ಕೆ.ಆರ್ ಹಾಗೂ ನಿರ್ದೇಶಕರಾಗಿ ಶ್ರೀಮತಿ ಜಯಂತಿ ಎಚ್. ರಾವ್, ಶ್ರೀಮತಿ ಶುಭಲಕ್ಷ್ಮಿ, ಶ್ರೀ ದಯಾನಂದ ಆಳ್ವ ಕೆ. ಶ್ರೀ ಪೂವಪ್ಪ ಎಸ್. ಶ್ರೀ ದಿವಾಕರ ವಿ. ಶ್ರೀ ಕೇಶವ ಎ, ಶ್ರೀ ಗೋವರ್ಧನ ಕುಮಾರ್. ಐ. ಶ್ರೀ ಭಾಸ್ಕರ್ ಶೆಟ್ಟಿ, ಶ್ರೀ ರಾಮದಾಸ ಶೆಣೈ, ಶ್ರೀ ಮೋಹನ್ ಕೆ.ಎಸ್. ಶ್ರೀ ವಿಶ್ವನಾಥ ಎಂ. ಶ್ರೀ ತಿರುಮಲೇಶ್ವರ ಭಟ್ ಪಿ, ಶ್ರೀ ಸತೀಶ್ ಪಿ. ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಸಂಘದಲ್ಲಿ 32 ನುರಿತ ಸಿಬ್ಬಂದಿಗಳಿದ್ದು, ಇವರೆಲ್ಲರ ಸಹಕಾರದೊಂದಿಗೆ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ. ಇವರು ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸಂಘವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದಾರೆ.

