Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಡಿಜಿಟಲ್ ಕ್ರಾಂತಿ
    News

    ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನಲ್ಲಿ ಡಿಜಿಟಲ್ ಕ್ರಾಂತಿ

    adminBy adminMarch 28, 2026

    ಕ್ಯೂಆರ್ ಕೋಡ್ ಸೌಲಭ್ಯಕ್ಕೆ ಚಾಲನೆ

    ಪುತ್ತೂರು: ಸಹಕಾರಿ ಕ್ಷೇತ್ರದಲ್ಲಿ 120 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಪುತ್ತೂರಿನ ಹೆಮ್ಮೆಯ ‘ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್’, ತನ್ನ ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಪೂರ್ಣ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಗ್ರಾಹಕರ ಖಾತೆಗೆ ನೇರವಾಗಿ ಹಣ ಪಾವತಿಸಲು ಅನುಕೂಲವಾಗುವ ಕ್ಯೂಆರ್ ಕೋಡ್ (QR Code) ಸೌಲಭ್ಯವನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಅನಾವರಣಗೊಳಿಸಲಾಯಿತು. ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮಿ ಗ್ರಾಹಕರಿಗೆ ಕ್ಯೂಆರ್ ಕೋಡ್ ಕಾರ್ಡ್ ಮತ್ತು ಸೌಂಡ್ ಬಾಕ್ಸ್‌ ನೀಡಿ ಚಾಲನೆ ನೀಡಲಾಯಿತು.

    https://chat.whatsapp.com/FCEnlTkAKCC0MGPhXtX4i4
    ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಈಗಾಗಲೇ ಸಿಟಿಎಸ್ ಕ್ಲಿಯರಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಇನ್‌ವರ್ಡ್ ಮತ್ತು ಔಟ್‌ವರ್ಡ್ ತ್ವರಿತ ಕ್ಲಿಯರಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ನೇರ ಹಣ ವರ್ಗಾವಣೆಗಾಗಿ ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ವ್ಯವಸ್ಥೆ, ಬ್ಯಾಂಕ್ ಐಎಫ್‌ಎಸ್‌ಸಿ ಕೋಡ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಆಪ್ ಕೂಡ ಬಿಡುಗಡೆಯಾಗಿದೆ. ಇದೀಗ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಸೌಲಭ್ಯವನ್ನು ನೀಡಲಾಗಿದೆ.
    ಕಾಲಕ್ಕೆ ತಕ್ಕಂತೆ ಬದಲಾವಣೆ: ಕಿಶೋರ್ ಕೊಳತ್ತಾಯ
    ಬ್ಯಾಂಕ್‌ನ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ ಮಾತನಾಡಿ, ಯಾವುದೇ ಬ್ಯಾಂಕಿಂಗ್ ವ್ಯವಹಾರ ಇಲ್ಲದ ಸಂದರ್ಭದಲ್ಲಿ ನಮ್ಮ ಹಿರಿಯರು ಸ್ಥಾಪಿಸಿದ ಪಾರಂಪರಿಕ ಬ್ಯಾಂಕ್ ಇದಾಗಿದೆ. ಆದರೆ ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಹಿಂದೆ ಬೀಳಲು ತಯಾರಿಲ್ಲ. ಯುವ ಪೀಳಿಗೆಯು ಸಮಯ ಉಳಿಸಲು ಡಿಜಿಟಲ್ ವ್ಯವಹಾರವನ್ನೇ ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ನಾವು ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದೇವೆ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಶೆಟ್ಟಿಯವರ ವಿಶೇಷ ಮುತುವರ್ಜಿ, ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.


    ಸಂಪೂರ್ಣ ಡಿಜಟಲೀಕರಣ ನಮ್ಮ ಗುರಿ: ಬಿ.ಶೇಖರ ಶೆಟ್ಟಿ
    ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಡಿಜಿಟಲೀಕರಣದ ಪ್ರಗತಿಯ ಬಗ್ಗೆ ತಿಳಿಸಿ, ಮುಂಬರುವ ದಿನಗಳಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್, ಡೋರ್ ಸ್ಟೆಪ್ ಬ್ಯಾಂಕಿಂಗ್ , ಐಎಂಪಿಎಸ್‌, ಯುಪಿಐ ಪಾವತಿ, ಎಟಿಎಮ್ ಕಾರ್ಡ್ ಸೌಲಭ್ಯಗಳನ್ನು ನೀಡಲಿದ್ದೇವೆ. ಕೇವಲ 10ರಿಂದ 11 ಮಂದಿ ಸಿಬ್ಬಂದಿಗಳೊಂದಿಗೆ ಇಷ್ಟೆಲ್ಲಾ ಡಿಜಿಟಲ್ ಸೇವೆಗಳನ್ನು ನೀಡುವ ಏಕೈಕ ಬ್ಯಾಂಕ್ ನಮ್ಮದಾಗಲಿದೆ ಎಂದು ಮಾಹಿತಿ ನೀಡಿ, ಶೀಘ್ರದಲ್ಲಿಯೇ ಸಂಪೂರ್ಣ ಡಿಜಟಲೀಕರಣ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
    ಹಿರಿಯ ಗ್ರಾಹಕ ಮತ್ತು ಹೋಟೆಲ್ ಉದ್ಯಮಿ ಗೋಪಾಲಕೃಷ್ಣ ಹೇರಳೆ (ಶ್ರೀ ನ್ಯೂ ಗಣೇಶ್ ಪ್ರಸಾದ್), ಪ್ರದೀಪ್ (ಶ್ರೀ ಆಟೋ ಮೊಬೈಲ್ಸ್), ರವಿ ಬಾಳಿಗ (ಬಾಳಿಗ ಫುಡ್ಸ್), ವನಿತಾ (ಭಾವನ ಕಲಾ ಆರ್ಟ್ಸ್), ಸಾಯಿ ದೀಕ್ಷಿತ್ ಮತ್ತು ಪವಿತ್ರ (ಶಾಂತಿ ಫ್ಯಾನ್ಸಿ) ಇವರಿಗೆ ಪ್ರಥಮ ಕ್ಯೂಆರ್ ಕೋಡ್ ಕಾರ್ಡ್ ಮತ್ತು ಯಂತ್ರವನ್ನು ವಿತರಿಸಲಾಯಿತು. ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀಧರ ಗೌಡ, ನಿರ್ದೇಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಮಚಂದ್ರ ಕಾಮತ್, ಸುಜೀಂದ್ರ ಪ್ರಭು, ಮಲ್ಲೇಶ್ ಕುಮಾರ್, ರಾಜು ಶೆಟ್ಟಿ, ಕಿರಣ ಕುಮಾರ ರೈ, ಶ್ರೀಧರ ಪಟ್ಲ, ವೀಣಾ, ಸೀಮಾ ನಾಗರಾಜ್, ಗಣೇಶ್ ಕೌಕ್ರಾಡಿ, ಹರೀಶ್ ಬಿಜತ್ರೆ, ಸಿಎ. ಅರವಿಂದ ಕೃಷ್ಣ, ಕೆ. ವಿಶ್ವಾಸ ಶೆಣೈ ಹಾಗೂ ಪುತ್ತೂರು ಶಾಖೆಯ ಮ್ಯಾನೇಜರ್ ಚಿದಂಬರ, ವಿಟ್ಲ ಶಾಖೆಯ ಮ್ಯಾನೇಜರ್ ಜ್ಯೋತಿ, ಬ್ಯಾಂಕಿನ ಸಿಬ್ಬಂದಿಗಳು ಮತ್ತು ಬಿಜಲಿ ಪೇ ಕಂಪೆನಿಯ ಪ್ರತಿನಿಧಿ ತೇಜಸ್ ಉಪಸ್ಥಿತರಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

     

    B.Shekhar Shetty Co Operative ministry Cooperative Cooperative Department Cooperative Registrar Kishor Kolataya Puttur Co Operative Town Bank QR Code
    Previous Articleಆತ್ಮಶಕ್ತಿಯ ಆತ್ಮಸ್ಥೈರ್ಯದಿಂದಲೇ ಕಡಿಮೆ ಅವಧಿಯಲ್ಲಿ ಹಿರಿಯ ಸಾಧನೆ
    Next Article ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ ವತಿಯಿಂದ ನಾಳೆ ಆರೋಗ್ಯ ಶಿಬಿರ

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.