ಬೈಂದೂರು ಶಾಖೆ ರೂ. 10 ಕೋಟಿ ವ್ಯವಹಾರ ಗುರಿ ಸಾಧನೆಯ ಬಗ್ಗೆ ಅಧ್ಯಕ್ಷ ಅನಿಲ್ ಲೋಬೊ ಹರ್ಷ
ಬೈಂದೂರು: ಎಂಸಿಸಿ ಬ್ಯಾಂಕ್ ಬೈಂದೂರು ಶಾಖೆಯು ಪ್ರಾರಂಭವಾದ ಕೇವಲ ಆರು ತಿಂಗಳೊಳಗೆ ರೂ.10 ಕೋಟಿ ವ್ಯವಹಾರ ವಹಿವಾಟು ದಾಟಿದ ಗಮನಾರ್ಹ ಸಾಧನೆಯ ಅಂಗವಾಗಿ ಭಾನುವಾರ ಬೈಂದೂರು ಶಾಖೆಯ ಆವರಣದಲ್ಲಿ ಸಂಭ್ರಮಾಚರಣೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
https://chat.whatsapp.com/FCEnlTkAKCC0MGPhXtX4i4
ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಹೋಲಿಕ್ರಾಸ್ ಚರ್ಚ್ ಧರ್ಮಗುರುಗಳಾದ ಫಾದರ್ ವಿನ್ಸೆಂಟ್ ಕುವೆಲ್ಲೊ, ರಂಗಭೂಮಿ ಕಲಾವಿದ ಗಣೇಶ್ ಕಾರಂತ್, ಸಮಾಜ ಸೇವಕ ಫಯಾಜ್ ಅಲಿ ಮತ್ತು ಬೈಂದೂರು ಯೆಡ್ತರೆಯ ಶ್ರೀ ಧರ್ಮಸ್ಥಳ ಸ್ವಸಹಾಯ ಗುಂಪಿನ ಅಧ್ಯಕ್ಷೆ ಶೈಲಾ ಮುಖ್ಯ ಅತಿಥಿಗಳಾಗಿದ್ದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ|ಎಲ್‌ರಾಯ್ ಸಲ್ಡಾನ್ಹಾ, ಶಾಖಾ ನಿರ್ದೇಶಕರಾದ ಎಲ್ರಾಯ್ ಕೆ.ಕ್ರಾಸ್ಟೊ, ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮಿನೇಜಸ್ ಮತ್ತು ಬೈಂದೂರ್ ಶಾಖೆಯ ಹಿರಿಯ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ಹಾಜರಿದ್ದರು. ಉಚಿತ ವೈದ್ಯಕೀಯ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.
ಅನಿಲ್ ಲೋಬೊ ಮಾತನಾಡಿ, ಶಾಖೆಯ ಪ್ರಾರಂಭದಿಂದಲೂ ಶಾಖೆಯ ಮೇಲೆ ನಂಬಿಕೆ ಇಟ್ಟು ಪ್ರೋತ್ಸಾಹಿಸಿ, ಶಾಖೆಯು ಕಡಿಮೆ ಅವಧಿಯಲ್ಲೇ ರೂ. 10 ಕೋಟಿ ವ್ಯವಹಾರದ ಮೈಲಿಗಲ್ಲನ್ನು ಸಾಧಿಸುವಲ್ಲಿ ನೀಡಿದ ಪ್ರೋತ್ಸಾಹಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಬೈಂದೂರು ಶಾಖೆಯು ಆರು ತಿಂಗಳೊಳಗೆ ರೂ.10 ಕೋಟಿ ವ್ಯವಹಾರ ಸಾಧಿಸುವುದು ಎಂಸಿಸಿ ಬ್ಯಾಂಕಿನ ಐತಿಹಾಸಿಕ ಮೈಲಿಗಲ್ಲು ಆಗಿದೆ. ಬ್ಯಾಂಕ್ ಈ ವರ್ಷ ಬೈಂದೂರು ಶಾಖೆಯ ರೂ. 10 ಕೋಟಿ ವ್ಯವಹಾರ ಸಾಧನೆಯನ್ನು ಗುರುತಿಸಲು ಬೈಂದೂರು ಶಾಖೆಯಲ್ಲಿ ಈ ಸಂಭ್ರಮದ ಜೊತೆಗೆ ಮಹಿಳಾ ದಿನಾಚರಣೆಯನ್ನೂ ಆಚರಿಸಲು ನಿರ್ಧರಿಸಿದೆ. ರೂ. 10 ಕೋಟಿ ವ್ಯವಹಾರ ಸಾಧನೆಯು ಬೈಂದೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ ಎಂಬುದನ್ನು ತೋರಿಸುತ್ತದೆ. ಎಂಸಿಸಿ ಬ್ಯಾಂಕ್ ಸ್ಥಿರವಾಗಿ ಪ್ರಗತಿ ಸಾಧಿಸುತ್ತಿದ್ದು, 2018ರಲ್ಲಿ ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗಿನಿಂದ ಬ್ಯಾಂಕ್ ರೂ.1500 ಕೋಟಿಗಳ ವಹಿವಾಟು ದಾಟಿದೆ, ಇದು ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಮತ್ತು ಗ್ರಾಹಕರ ಬೆಂಬಲದಿಂದಾಗಿ ಸಾಧ್ಯವಾಗಿದೆ ಎಂದು ಪುನರುಚ್ಚರಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಭ್ಯವಿರುವಂತೆ ಸುಧಾರಿತ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ಪರಿಚಯಿಸಲು ಕೆಲಸ ಮಾಡುತ್ತಿದೆ ಎಂದರು. ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಮಾತನಾಡಿ, ಬೈಂದೂರು ಶಾಖೆಯು ಅಲ್ಪಾವಧಿಯಲ್ಲಿಯೇ ರೂ. 10 ಕೋಟಿ ವಹಿವಾಟು ಸಾಧಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಗ್ರಾಹಕರು ಮತ್ತು ಬೈಂದೂರು ಪ್ರದೇಶದ ಜನರ ನಂಬಿಕೆ ಮತ್ತು ಬೆಂಬಲ ಹಾಗೂ ಬ್ಯಾಂಕಿನ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಈ ಯಶಸ್ಸು ಸಾಧ್ಯವಾಯಿತು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೈಂದೂರು ಶಾಖೆಯ ಮಹಿಳಾ ಗ್ರಾಹಕರನ್ನು, ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಬೈಂದೂರು ಶಾಖೆಯ ಹಿರಿಯ ಪ್ರಬಂಧಕರು ಮತ್ತು ಸಿಬ್ಬಂದಿಗಳನ್ನು ಹಾಗೂ ಶಾಖಾ ನಿರ್ದೇಶಕರಾದ ಎಲ್ರಾಯ್ ಕೆ ಕ್ರಾಸ್ಟೊ ಅವರನ್ನೂ ಸನ್ಮಾನಿಸಲಾಯಿತು. ಶಾಖಾ ನಿರ್ದೇಶಕ ಎಲ್‌ರಾಯ್ ಕೆ. ಕ್ರಾಸ್ಟೊ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

