ಕಾರ್ಕಳ: ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಇದರ ಸ್ವರ್ಣ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿಗುವ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ 19ನೇ “ಸ್ವಚ್ಚ ವಿಚಾರ್ ” ಸಂವಾದ ಕಾರ್ಯಕ್ರಮವು ಗುರುವಾರ ಕಾರ್ಕಳದ ಪ್ಲಾನೆಟ್ ಚಿತ್ರಮಂದಿರದಲ್ಲಿ ಜರುಗಿತು.
https://chat.whatsapp.com/FCEnlTkAKCC0MGPhXtX4i4
ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ, ಸ್ವಚ್ಛ ಕಾರ್ಕಳ ಬ್ರಿಗೇಡ್ನ ಫೆಲಿಕ್ಸ್ ವಾಸ್, ಪತ್ರಕರ್ತ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ ರೊ.ಭಾಸ್ಕರ್ ರೈ ಕಟ್ಟ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಭಾಗವಹಿಸಿದ್ದರು. ವಿಶ್ವಕರ್ಮ ಬ್ಯಾಂಕ್ ನ ಅಧ್ಯಕ್ಷ ಡಾ| ಎಸ್. ಆರ್. ಹರೀಶ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಂಬಾಮಹೇಶ್ವರಿ ಟ್ರಸ್ಟ್ ಜೆಪ್ಪು ಇದರ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಉಮಾನಾಥ ಕೋಟೆಕಾರ್ “ಸ್ವಚ್ಛತೆ ಯಾಕೆ ಮತ್ತು ಹೇಗೆ…? ಸ್ವಚ್ಛತೆಯ ವಿಷಯದಲ್ಲಿ ಸಂಘ ಸಂಸ್ಥೆಗಳು ಪಾತ್ರ” ಎಂಬ ಬಗ್ಗೆ ವಿಷಯ ಮಂಡಿಸಿದರು.

ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರರಾದ ಪಿ.ರವಿ ಆಚಾರ್ಯ, ವ್ಯವಸ್ಥಾಪಕ ದಿನೇಶ್ ಆಚಾರ್ಯ, ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹಾಗೂ ಸದಸ್ಯರು, ನಿವೃತ್ತ ಪ್ರಾಧ್ಯಾಪಕ ವಸಂತ ಎಂ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸದಸ್ಯರು, ಸರಕಾರಿ ಆಯುರ್ವೇದಿಕ್ ಡಿಸ್‌ಪೆನ್ಸರಿ ಬೆಳಪು ಇದರ ವೈದ್ಯಾಧಿಕಾರಿ ಡಾ. ಮಾನಸ ಮುಗೇರಾಯ, ರಾಘವೇಂದ್ರ ಗೇಮ್ಸ್ ಕ್ಲಬ್‌ನ ರಾಜೇಶ್, ವಿಶ್ವಕರ್ಮ ಸಂಘ ನಿಂಜೂರ್ ಇದರ ಗೋಪಾಲ ಆಚಾರ್ಯ, ವಿಶ್ವಕರ್ಮ ಸಂಘ ಬೈಲೂರು ವಾದಿರಾಜ ಆಚಾರ್ಯ, ಕಾರ್ಕಳ ಚಿನ್ನದ ಕೆಲಸಗಾರರ ಸಂಘದ ರತ್ನಾಕರ ಆಚಾರ್ಯ ಕಟ್ಟೆಮಾರ್, ವಿಶ್ವಕರ್ಮ ಸಂಘ ರೆಂಜಾಳ ಶ್ರೀನಿವಾಸ ಆಚಾರ್ಯ, ಜೈನ್ ಮಿಲನ್‌ನ ಕೆ ಗುಣವರ್ಮ ಜೈನ್, ಶ್ರೀ ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್ ಅಧ್ಯಕ್ಷ ಸುಧಾಕರ ಆಚಾರ್ಯ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಇದರ ಸ್ಥಾಪಕ ಅಧ್ಯಕ್ಷೆ ಜ್ಯೋತಿ ರಮೇಶ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಇದರ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಕಾಳಿಕಾಂಬಾ ಡೆವಲಪ್‌ಮೆಂಟ್ ಟ್ರಸ್ಟ್ ಇದರ ಕಾರ್ಯದರ್ಶಿ, ಶಿಲ್ಪಿ ಕೆ ಸತೀಶ್ ಆಚಾರ್ಯ, ಪುರಸಭೆ ಸದಸ್ಯೆ ಹಾಗೂ ವಿಶ್ವಕರ್ಮ ಮಹಿಳಾ ಸಮಿತಿಯ ಅಧ್ಯಕ್ಷೆ ನಳಿನಿ ವಿಜೇಂದ್ರ, ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಸಂಘ ದ ಜ್ಯೋತಿ ರವಿ, ಜಯಕರ್ನಾಟಕ ಜನಪರ ವೇದಿಕೆ ಇದರ ಅಧ್ಯಕ್ಷ ಉಮರಬ್ಬ, ಮಹಿಳಾ ಸಮಿತಿ ಮೂಡುಬಿದಿರೆ ಇದರ ಗೀತಾ ಯೋಗೀಶ್, ಫೋಟೋಗ್ರಾಫರ್ ಅಸೋಸಿಯೇಷನ್‌ನ ಹರೀಶ್ ಪವಾರ್, ಭುವನೇಂದ್ರ ಕಾಲೇಜಿನ ಪ್ರಾಧ್ಯಾಪಕರಾದ ನಂದಕಿಶೋರ್, ಶಂಕರ ಕುಡ್ವ, ಪ್ರಕಾಶ್ ಹೋಟೆಲ್ ಮಾಲಕರಾದ ಹರಿಪ್ರಕಾಶ್ ಶೆಟ್ಟಿ, ಸಮಾಜಸೇವಕರಾದ ಸತೀಶ್, ವೆಸ್ಟರ್ನ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸತೀಶ್ ಆಚಾರ್ಯ, ಧ್ವನಿ ಬೆಳಕು ಸಂಯೋಜಕರ ಸಂಘ ಕಾರ್ಕಳದ ಜೀವನ್ ವೈ ಭಾಗವಹಿಸಿದ್ದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಕಾರ್ಕಳದ ಶಾಖಾ ವ್ಯವಸ್ಥಾಪಕ ನಿತಿನ್ ಕಣ್ಣೂರ್ ಸ್ವಾಗತಿಸಿದರು. ಸಿಬ್ಬಂದಿ ಕಿರಣ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

