ಮಣಿಪಾಲ: ಸಾರಸ್ವತ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಮಣಿಪಾಲ, ಕೆ.ಎಂ.ಸಿ ಆಸ್ಪತ್ರೆಯ ಸಹಯೋಗ ಮತ್ತು ಮಾಹೆ-ಮಣಿಪಾಲ ಇವರ ಸಹಕಾರದೊಂದಿಗೆ ಅತ್ಯುನ್ನತ ಸೌಲಭ್ಯಗಳೊಂದಿಗೆ ರೂಪಿಸಲಾದ ಆಕರ್ಷಕ ಯೋಜನೆ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ (ಕೊಂಕಣಿ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್) ನೋಂದಣಿ ಪಾರಂಭಗೊಂಡಿದ್ದು ಜನವರಿ 31 ನೋಂದಣಿ ಕೊನೆಯ ದಿನವಾಗಿದೆ.
https://chat.whatsapp.com/FCEnlTkAKCC0MGPhXtX4i4
ಈ ಸೌಲಭ್ಯವು ಮಣಿಪಾಲ ಸಮೂಹದ ಆಸ್ಪತ್ರೆಗಳಲ್ಲಿ ಮಾತ್ರ ಈ ಯೋಜನೆ ಸೀಮಿತವಾಗಿದ್ದು, ಈ ಸುರಕ್ಷಾ ಕಾರ್ಡ್‌ನ ಸೌಲಭ್ಯ ಪಡೆಯುವ ಅವಧಿ 15 ಫೆಬ್ರವರಿ 2026ರಿಂದ ಪ್ರಾರಂಭವಾಗಲಿದೆ. ಈ ಹಿಂದೆ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ (ಕೊಂಕಣಿ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್) ಹೊಂದಿದ್ದವರು ಹಾಗೂ ಹೊಸತಾಗಿ ಕಾರ್ಡ್ ಮಾಡಲಿಚ್ಚಿಸುವ ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ಕುಟುಂಬದ ರೇಷನ್ ಕಾರ್ಡ್ ಪ್ರತಿಯೊಂದಿಗೆ ಸಾರಸ್ವತ ಸೌಹಾರ್ದ ಸಹಕಾರಿ ಸಂಘಕ್ಕೆ ಬಂದು ನೋಂದಣಿ ಮಾಡಬಹುದು. ಈ ಆರೋಗ್ಯ ಸುರಕ್ಷಾ ಯೋಜನೆಯು ಮಣಿಪಾಲದ ಸಮೂಹ ಸಂಸ್ಥೆಯ ಆಸ್ಪತ್ರೆಗಳಾದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇಲ್ಲಿ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಗೆ ಶೇ.50, ಡಾ. ಟಿ.ಎಂ.ಎ ಪೈ ಆಸ್ಪತ್ರೆ ಉಡುಪಿ ಇಲ್ಲಿ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಗೆ ಶೇ.20, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಇಲ್ಲಿ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಗೆ ಶೇ.50, ಕೆ.ಎಂ.ಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ ಮಂಗಳೂರು ಇಲ್ಲಿ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಗೆ ಶೇ.25, ಕಾರ್ಕಳ ಟಿ.ಎಂ.ಎ ಪೈ ಆಸ್ಪತ್ರೆ ಇಲ್ಲಿ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಗೆ ಶೇ.20, ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು ಇಲ್ಲಿ ಹೊರರೋಗಿ ವಿಭಾಗದ ವೈದ್ಯಕೀಯ ಚಿಕಿತ್ಸೆಗೆ ಶೇ.50 ರಿಯಾಯಿತಿ ಇರಲಿದೆ. ಆರೋಗ್ಯ ಸುರಕ್ಷಾ ಕಾರ್ಡ್ನ ಸದಸ್ಯರ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾದಲ್ಲಿ ಯಾವುದೇ ನಿರ್ಬಂಧವಿಲ್ಲದೇ (ಜನರಲ್ ವಾರ್ಡ್ ಮಾತ್ರ) ಶೇ.35% ರಿಯಾಯಿತಿ ಪಡೆಯಬಹುದಾದ ವಿಶೇಷ ಸೌಲಭ್ಯ ಹೊಂದಿರುತ್ತದೆ (ಕೆ.ಎಂ.ಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್, ಮಂಗಳೂರು ಹೊರತುಪಡಿಸಿ).
ನೋಂದಣಿ ಮಾಡಲು ಬರುವವರು ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ (ಸರಕಾರಿ ರಜಾದಿನಗಳನ್ನು ಹೊರತುಪಡಿಸಿ) ಕಛೇರಿ ಸಮಯದಲ್ಲಿ (ಕಛೇರಿ ವಿಳಾಸ :- ಪ್ರಧಾನ ಕಛೇರಿ: ಮೊದಲನೇ ಮಹಡಿ ಆರ್.ಎಸ್.ಬಿ ಭವನ, ಮಣಿಪಾಲ, ದೂರವಾಣಿ 0820-2573677 ಮತ್ತು ಮುದರಂಗಡಿ ಶಾಖೆ: ಮೊದಲನೇ ಮಹಡಿ, ಜಾಸ್ಮಿನ್ ಕಾಂಪ್ಲೆಕ್ಸ್, ಬಸ್‌ಸ್ಟಾಂಡ್ ಬಳಿ, ಮುದರಂಗಡಿ ದೂರವಾಣಿ- 7338673777) ಭೇಟಿ ನೀಡಬಹುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



