Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರಮದಾನ ಸಮಾಜ ಜಾಗೃತಿಯ ಸಾಧನ
    News

    ಶ್ರಮದಾನ ಸಮಾಜ ಜಾಗೃತಿಯ ಸಾಧನ

    adminBy adminJanuary 19, 2026

    18ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್‌ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಹೇಳಿಕೆ

    ಮಂಗಳೂರು: ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರವಾಗುವುದಕ್ಕೆ ಶ್ರಮದಾನವು ಸಮಾಜ ಜಾಗೃತಿಯ ಮೂಲ ಸಾಧನವಾಗಿದೆ. ನಿರಂತರ ಮಾಡುವ ಸ್ವಚ್ಛತೆಯ ಶ್ರಮದಾನವು ನಾಗರಿಕ ಸಮಾಜದ ಮಧ್ಯೆ ಜಾಗೃತಿ ಮೂಡಿಸುತ್ತದೆ. ಇದರಿಂದ ಮಹಾತ್ಮ ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಅವರು ವಿಶ್ವಕರ್ಮ ಬ್ಯಾಂಕಿನ ಕಾರ್ಕಳ ಶಾಖೆ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ಆಯೋಜಿಸಿದ 18ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು.
    ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾರ್ಕಳ ತಾಲೂಕು ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಎಂ.ರಮೇಶ್ ಆಚಾರ್ಯ, ಪುರಸಭೆ ಸದಸ್ಯರಾದ ನಳಿನಿ ವಿಜೇಂದ್ರ ಹಸಿರು ನಿಶಾನೆ ತೋರಿಸುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು. ಕಾರ್ಕಳದ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಹಾಗೂ ಕರಿಯಕಲ್ಲು ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿಕೊಂಡು ಸ್ವಯಂಸೇವಕರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದರು.


    ವಿಶ್ವಕರ್ಮ ಬ್ಯಾಂಕ್ ಉಪಾಧ್ಯಕ್ಷರಾದ ಜಗದೀಶ್ ಪಡುಪಣಂಬೂರು, ನಿರ್ದೇಶಕರಾದ ಡಿ.ಭಾಸ್ಕರ ಆಚಾರ್ಯ, ಭರತ್ ನಿಡ್ಪಳ್ಳಿ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಇದರ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಜೊತೆ ಮೊಕ್ತೇಸರರಾದ ಸುರೇಶ್ ಆಚಾರ್ಯ ನಿಟ್ಟೆ, ವ್ಯವಸ್ಥಾಪಕರಾದ ದಿನೇಶ್ ಆಚಾರ್ಯ, ಯುವಶಕ್ತಿ ಮಹಿಳಾ ಮಂಡಳಿ ಕಾರ್ಕಳ ಇದರ ಅಧ್ಯಕ್ಷೆ ಮಮತಾ ಕುಲಾಲ್ ಹಾಗೂ ಸದಸ್ಯರು, ಯುವಶಕ್ತಿ ಆಂಗ್ಲಮಾಧ್ಯಮ ಶಾಲೆಯ ನಿರ್ದೇಶಕಿ ಸುರೇಖಾ ಕೋಟ್ಯಾನ್ ಹಾಗೂ ಸದಸ್ಯರು, ಹಿರಿಯ ನಾಗರಿಕರಾದ ಸುನಂದಾ, ಲಯನ್ಸ್ ಕ್ಲಬ್ ಕಾರ್ಕಳ ಇದರ ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್, ನಿಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರಭಾ ನಿರಂಜನ್, ಡಾ.ಗುರುಚರಣ್, ಡಾ.ಶ್ರೀರಾಮ್ ಮೊಗೇರಾಯ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮಾನಸ ಮೊಗೇರಾಯ, ಸ್ವಚ್ಛ ಬ್ರಿಗೇಡ್ ಕಾರ್ಕಳ ಇದರ ಸಂಯೋಜಕರಾದ ಫೆಲಿಕ್ಸ್ ಜೋಸೆಫ್ ವಾಸ್, ಪದಾಧಿಕಾರಿಗಳಾದ ರಾಜೇಂದ್ರ ಅಮೀನ್, ನಿಖಿಲ್ ಕುಮಾರ್ ಹಾಗೂ ಸದಸ್ಯರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾದ್ಯಕ್ಷ ಪ್ರಕಾಶ್ ರಾವ್, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುಣವರ್ಮ ಜೈನ್, ಸತೀಶ್ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾಧಿಕಾರಿ ನಿತಿನ್ ಕೆ. ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Chinnada Kelasagarara Sangha Rotary Club Karkala Swacch Bharath Swaccha Brigade Karkala Viswakarma Sahakara Bank Limited
    Previous Articleನಾಳೆ ಮೈಸೂರು ಜಿಲ್ಲಾಮಟ್ಟದ ಸೌಹಾರ್ದ ರಜತ ಸಂಭ್ರಮ, ವಿವಿಧ ಸ್ಪರ್ಧೆಗಳ ಆಯೋಜನೆ
    Next Article ಮೈಸೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗೆ ಆಟೋಟ ಸ್ಪರ್ಧೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.