ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ವತಿಯಿಂದ ಸಹಕಾರ ಭಾರತಿ ಸ್ಥಾಪನಾ ದಿನದ ಅಂಗವಾಗಿ ಸೋಮವಾರ ಲಕ್ಷ್ಮಣ ರಾವ್ ಇನಾಮ್ದಾರ್ ಹಾಗೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
https://chat.whatsapp.com/FCEnlTkAKCC0MGPhXtX4i4
ಸಹಕಾರ ಭಾರತಿಯ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.
ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಗ್ರಾಹಕ ಪ್ರಕೋಷ್ಠ ಸಂಚಾಲಕಿ ಭಾರತಿ ಜಿ.ಭಟ್ ಮಾತನಾಡಿ, ಸಹಕಾರ ಭಾರತಿ ಬೆಳೆದು ಬಂದ ರೀತಿ, ಸ್ಥಾಪಕರ ಆಶಯ ಉದ್ದೇಶಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಈಗಿನ ವ್ಯವಸ್ಥೆಯಲ್ಲಿ ಸಹಕಾರ ಭಾರತಿ ಪ್ರಸ್ತುತತೆ ಮತ್ತು ಹೆಚ್ಚಿದ ಪ್ರಾಮುಖ್ಯತೆ ಕುರಿತು ತಿಳಿ ಹೇಳಿದರು.

ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಸುಧಾಕರ ರೈ, ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಜಿ.ಆರ್ ಪ್ರಸಾದ್, ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಶೆಣೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್, ಮಹಾನಗರ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್, ಪ್ರಮುಖರಾದ ಮದಲಾಕ್ಷಿ ರೈ, ಸುಜಯ ಹೇಮಚಂದ್ರ, ದಯಾನಂದ ಅಡ್ಯಾರ್, ವಲ್ಸರಾಜ್ ಮೊದಲಾದವರು ಪಾಲ್ಗೊಂಡಿದ್ದರು.

