Close Menu
    Top News

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದಿಂದ ಉಡುಪಿಯ ಹಾವಂಜೆಯಲ್ಲಿ ಕಾವಿ ಕಲೆಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ
    News

    ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದಿಂದ ಉಡುಪಿಯ ಹಾವಂಜೆಯಲ್ಲಿ ಕಾವಿ ಕಲೆಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

    adminBy adminDecember 16, 2025

    ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಕಾರ್ಯಕ್ಷೇತ್ರವನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ವತಿಯಿಂದ ಕೇಂದ್ರ ಜವಳಿ ಸಚಿವಾಲಯದ ಕರಕುಶಲ ಆಯುಕ್ತರ ಕಚೇರಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆಯಲ್ಲಿ ಕಾವಿ ಕಲೆಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರ ಹಾವಂಜೆಯಲ್ಲಿ ನಡೆಯಿತು.

    https://chat.whatsapp.com/Ge11n7QCiMj5QyPvCc0H19
    ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಗ್ರಾಮೀಣ ಗುಡಿ ಕೈಗಾರಿಕೆಗಳು, ಕರಕುಶಲ ಕಲೆಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘವಾಗಿದೆ. ಕಾವಿ ಕಲೆಯು ಅತೀ ಪುರಾತನ ಕಲೆಯಾಗಿದ್ದು ನಶಿಸಿ ಹೋಗುವ ಹಂತದಲ್ಲಿದ್ದು ಸದ್ರಿ ಕಲೆಯ ಬೆಳವಣಿಗೆಗಾಗಿ ಹಾವಂಜೆ ಗ್ರಾಮ ಪಂಚಾಯತ್ ಪ್ರದೇಶದ 30 ಜನ ಕುಶಲಕರ್ಮಿಗಳನ್ನು ಸೇರಿಸಿ 25 ದಿನಗಳ ಕಾರ್ಯಾಗಾರ ನಡೆಸಲಾಯಿತು. ಡಾ.ಜನಾರ್ದನ ಹಾವಂಜೆಯವರು ಕಾವಿ ಕಲೆಯಲ್ಲಿ ಪರಿಣತಿ ಹೊಂದಿದವರಾಗಿದ್ದು ಅವರ ನೇತೃತ್ವದಲ್ಲಿ ತರಬೇತಿ ನಡೆಯಿತು.


    ದೆಹಲಿಯ ಬ್ರಿಜೇಶ್ ಜೈಸ್ವಾಲ್‌ ತರಬೇತಿಗೆ ಸಹಕಾರ ನೀಡಿದರು. ಕಾವಿ ಕಲೆಯನ್ನು ಕುಂಬಾರಿಕೆ ಉತ್ಪನ್ನಗಳ ಮೇಲೆ, ಬಟ್ಟೆ, ಮರದ ಸಾಮಗ್ರಿಗಳ ಮೇಲೆ ಉಪಯೋಗಿಸಿ ದೈನಂದಿನ ಬಳಕೆಯಲ್ಲಿ ಯಾವ ರೀತಿ ಉಪಯೋಗಿಸಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬಹುದೆಂದು ತಿಳಿಸಿಕೊಡಲಾಯಿತು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕರಾದ ಗಣೇಶ್ ಕುಲಾಲ್ ಮತ್ತು ಸೇಸಪ್ಪ ಕುಲಾಲ್ ಭಾಗವಹಿಸಿದ್ದರು. ಕರಕುಶಲ ಅಭಿವೃದ್ಧಿ ಮಂತ್ರಾಲಯದ ಸೇವಾ ಕೇಂದ್ರ ಮಂಗಳೂರು ಇದರ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ ತರಬೇತಿ ಕಾರ್ಯಕ್ರಮದ ಬಗೆ ಹಾಗೂ ಸರಕಾರದ ಯೋಜನೆಗಳ ಬಗ್ಗೆ, ಮಾಹಿತಿ ನೀಡಿದರು. ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಪೂಜಾರಿ ಸ್ಥಳೀಯ ಕರಕುಶಲಕರ್ಮಿಗಳು ಇನ್ನಷ್ಟು ತೊಡಗಿಸಿಕೊಂಡು ನಮ್ಮ ಗ್ರಾಮದ ಅಭಿವೃದ್ಧಿ ಆಗಲಿ ಎಂದು ಆಶಿಸಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ದರ ಇಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜನಾರ್ದನ ಮೂಲ್ಯ ಭಾಗವಹಿಸಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Co Operative ministry Cooperative Cooperative Registrar Havanje Grama Panchayath Kumbarara Gudi Kaigarika Sahakara Sangha Putturu S Janardhana Mulya
    Previous Articleಬೆಳ್ತಂಗಡಿಯಲ್ಲಿ ಪ್ರವರ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ಲೋಕಾರ್ಪಣೆ
    Next Article ಇಫ್ಕೋ ಸಾಹಿತ್ಯ ಪ್ರಶಸ್ತಿಗಳಿಗೆ ಮೈತ್ರೇಯಿ ಪುಷ್ಪಾ, ಅಂಕಿತಾ ಜೈನ್ ಆಯ್ಕೆ

    Related Posts

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.