ಪ್ರತಿಪಕ್ಷದ ಶಾಸಕ ಸುನೀಲ್ ಕುಮಾರ್ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಖಿತ ಉತ್ತರ
ಬೆಳಗಾವಿ: ರಾಜ್ಯದಲಿರುವ ಹಾಲು ಉತ್ಪಾದಕ ಸಹಕಾರ ಸಂಘಗಳೂ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿರುವ 47,736 ಸಹಕಾರ ಸಂಘಗಳ ಪೈಕಿ 14,798 ಸಹಕಾರ ಸಂಘಗಳು ನಷ್ಟದಲ್ಲಿವೆ! ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಈ ವಿವರವನ್ನು ಸೋಮವಾರ ವಿಧಾನಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ರಾಜ್ಯದಲ್ಲಿ 47,736 ಸಹಕಾರ ಸಂಘಗಳಿದ್ದು ಇವುಗಳಲ್ಲಿ 28,145 ಸಂಸ್ಥೆಗಳು ಮಾತ್ರ ಲಾಭದಲ್ಲಿ ನಡೆಯುತ್ತಿವೆ. ಸಹಕಾರ ಕ್ಷೇತ್ರದ ಆಡಳಿತಾತ್ಮಕ ವೆಚ್ಚಗಳಿಂದಾಗಿ ಸಂಘಗಳ ಲಾಭಾಂಶ ಕಡಿಮೆಯಾಗಿವೆ ಎಂದು ಸರ್ಕಾರವೇ ಸದನಕ್ಕೆ ತಿಳಿಸಿದೆ. ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಅತಿಹೆಚ್ಚು ಸಹಕಾರ ಸಂಘಗಳು ನಷ್ಟದಲಿವೆ ಎಂದೂ ಸರ್ಕಾರ ಮಾಹಿತಿ ನೀಡಿದೆ.
ಬಿಜೆಪಿ ಶಾಸಕ ಕಾರ್ಕಳದ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ರಾಜ್ಯದ ಮುಖ್ಯಮಂತ್ರಿಯೂ ಆಗಿರುವ ಸಹಕಾರ ಸಚಿವರಾದ ಸಿದ್ದರಾಮಯ್ಯ ಈ ಮಾಹಿತಿ ಒದಗಿಸಿದ್ದು ಬೆಳಗಾವಿಯಲ್ಲಿ 2661 ಸಹಕಾರ ಸಂಘಗಳು ನಷ್ಟದಲ್ಲಿವೆ. ಕಲಬುರಗಿಯಲ್ಲಿ ಲಾಭದಲ್ಲಿರುವ ಸಹಕಾರ ಸಂಘಗಳ ಸಂಖ್ಯೆಗಿಂತ ಆರು ಪಟ್ಟು ಹೆಚ್ಚಿನ ಸಂಘಗಳು ನಷ್ಟದಲ್ಲಿವೆ. ಹೈನುಗಾರರು ವಾಣಿಜ್ಯ ಬೆಳೆ ಬೆಳೆಯುವತ್ತ ಆಸಕ್ತರಾಗಿದ್ದು ಇದರಿಂದ ಹಾಲು ಉತ್ಪಾದನೆಯೂ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಆಡಳಿತಾತ್ಮಕ ವೆಚ್ಚವೂ ಹೆಚ್ಚುತ್ತಿರುವುದರಿಂದ ಹಲವಾರು ಸಂಘಗಳು ನಷ್ಟ ಅನುಭವಿಸುವಂತಾಗಿದೆ ಎಂದು ಸಿಎಂ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸಹಕಾರ ಸಂಘಗಳು ನಷ್ಟದಲ್ಲಿ?
ಬೆಂಗಳೂರು ನಗರ 1045
ತುಮಕೂರು 506
ಚಿತ್ರದುರ್ಗ 696
ಮೈಸೂರು 713
ಬೆಳಗಾವಿ 1661
ವಿಜಯಪುರ 558
ಬಾಗಲಕೋಟೆ 497
ಧಾರವಾಡ 562
ಗದಗ 517
ಹಾವೇರಿ 532
ಉತ್ತರಕನ್ನಡ 252
ಬೀದರ್ 592
ಕಲಬುರಗಿ 1226
ಯಾದಗಿರಿ 489
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

