ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿಕೆ
ಉಡುಪಿ: ಸ್ವಚ್ಛ ಗಾಳಿ, ನೀರು, ಬೆಳಕು ಹಾಗೂ ಪರಿಸರವನ್ನು ನಿರ್ಮಿಸಿಕೊಳ್ಳುವುದು ನಮ್ಮ ಕರ್ತವ್ಯದ ಭಾಗವಾಗಿದೆ. ಇದು ಸರಕಾರದ ಜವಾಬ್ದಾರಿಯಲ್ಲ. ನಮ್ಮ ಮೂಲಭೂತ ಜವಾಬ್ದಾರಿ. ಸ್ವಚ್ಛ ಪರಿಸರವನ್ನು ನಿರ್ಮಿಸುವರೇ ನಮ್ಮ ಕಸ, ನಮ್ಮ ಹೊಣೆ ಎಂಬ ಸಾಮಾಜಿಕ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದಂತೆ ನಡೆದ 11ನೇ “ಸ್ವಚ್ಛ ಭಾರತ್” ಶ್ರಮದಾನದ ಸಂದರ್ಭದಲ್ಲಿ ಅವರು ಮಾತನಾಡಿದರು.
ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ ಇದರ ಮೊಕ್ತೇಸರರಾದ ಮುರಹರಿ ಕೆ ಆಚಾರ್ಯ ಹಾಗೂ ಗಂಗಾಧರ ಆಚಾರ್ಯ, ಇವರು ಹಸಿರು ನಿಶಾನೆ ತೋರಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು.






ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆಯ ಕಾರ್ಯ ನಡೆಯಿತು.
ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಿ, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ, ನಿರ್ದೇಶಕರಾದ ಜಗದೀಶ್ ಜೆ ಆಚಾರ್ಯ , ವಿಶ್ವಬ್ರಾಹ್ಮಣ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಉಪಾಧ್ಯಕ್ಷರಾದ ಹರೀಶ್ ಆಚಾರ್ಯ ಕಳತ್ತೂರು ಹಾಗೂ ವಿಜಯ್ ಆಚಾರ್ಯ ಪಡುಬಿದ್ರಿ, ಸಂಚಾಲಕರಾದ ಮುರಳೀಧರ ಆಚಾರ್ಯ ಇನ್ನಂಜೆ ಮತ್ತು ಗೌರವ ಸದಸ್ಯರಾದ ಪ್ರಕಾಶ್ ಆಚಾರ್ಯ, ವಿಶ್ವನಾಥ ಆಚಾರ್ಯ ಕೈಪುಂಜಾಲು ಮತ್ತು ನಿತ್ಯಾನಂದ ಆಚಾರ್ಯ ಬಂಟಕಲ್ಲು ಮತ್ತು ಸದಸ್ಯರು, ಶ್ರೀ ನಾಗಧರ್ಮೇಂದ್ರ ಸೇವಾ ಸಮಿತಿಯ ಅಧ್ಯಕ್ಷರಾದ ರವೀಂದ್ರ ಆಚಾರ್ಯ ಕಟಪಾಡಿ, ಪದಾಧಿಕಾರಿಗಳಾದ ರಾಘವೇಂದ್ರ ಆಚಾರ್ಯ ಕಾಡಬೆಟ್ಟು ಮತ್ತು ಸದಸ್ಯರು ಹಾಗೂ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ಯುವಕ ಸೇವಾದಳ ಇದರ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಇನ್ನಂಜೆ, ಪದಾಧಿಕಾರಿಗಳಾದ ಪ್ರಶಾಂತ್ ಆಚಾರ್ಯ ಕಟಪಾಡಿ, ನಿತಿನ್ ಆಚಾರ್ಯ, ಶೈಲೇಶ್ ಆಚಾರ್ಯ ಮತ್ತು ಸದಸ್ಯರು, ಹಾಗೂ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ಮಹಿಳಾ ಬಳಗದ ಅಧ್ಯಕರಾದ ಶಾಲಿನಿ ಶಿವರಾಮ್ ಆಚಾರ್ಯ, ಕಾರ್ಯದರ್ಶಿ ದೀಪಾ ಪ್ರಶಾಂತ್ ಆಚಾರ್ಯ, ಕೋಶಾಧಿಕಾರಿಯಾದ ದೀಪಾ ಸುರೇಶ್ ಆಚಾರ್ಯ ಮತ್ತು ಸದಸ್ಯರು ಹಾಗೂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಶೋಕ್ ಆಚಾರ್ಯ ಮತ್ತು ಸದಸ್ಯರು ಹಾಗೂ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಗ್ರಾಹಕ ವರ್ಗದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

