ಡಾ| ಆರ್.ಎಂ. ಮಂಜುನಾಥ ಗೌಡ, ಎಂ.ಎಂ. ಪರಮೇಶ್, ಕೆ.ಎನ್ ರಾಮಕೃಷ್ಣ, ಎಸ್.ಕೆ. ಮರಿಯಪ್ಪ, ವಾಟಗೋಡು ಸುರೇಶ್ ಅವರಿಗೆ ಸನ್ಮಾನ
ಶಿವಮೊಗ್ಗ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ಸಹಕಾರ ಇಲಾಖೆ ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ಎಲ್ಲಾ ರೀತಿಯ ಸಹಕಾರ ಸಂಘ ಮತ್ತು ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನವೆಂಬರ್ 20ರಂದು ಬೆಳಗ್ಗೆ 10ಕ್ಕೆ ರಿಪ್ಪನ್‌ಪೇಟೆಯ ಸಾಗರ ರಸ್ತೆ, ವಿಶ್ವಮಾನವ ಒಕ್ಕಲಿಗರ ಸಭಾಭವನದಲ್ಲಿ ನಡೆಯಲಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರೂ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಸಹಕಾರ ರತ್ನ ಡಾ।। ಆರ್.ಎಂ. ಮಂಜುನಾಥ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಗರ ಶಾಸಕ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾದ ಗೋಪಾಲಕೃಷ್ಣ ಬೇಳೂರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ವಾಟಗೋಡು ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ, ಸಹಕಾರ ರತ್ನ ಎಸ್.ಕೆ. ಮರಿಯಪ್ಪ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎಂ.ಶ್ರೀಕಾಂತ್, ‘ಸಹಕಾರ ರತ್ನ’ ಎಂ.ಎಂ.ಪರಮೇಶ್, ಜಿ.ಎನ್ ಸುಧೀರ್, ದಿನೇಶ್ ಬರದವಳ್ಳಿ, ವೃತ್ತಿಪರ ನಿರ್ದೇಶಕ ಮಧುಸೂದನ್ ಎಸ್. ನಾವಡ, ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಶಿವಮೊಗ್ಗ ಇದರ ಅಧ್ಯಕ್ಷ, ಸಹಕಾರ ರತ್ನ ಕೆ.ಎನ್. ರಾಮಕೃಷ್ಣ, ಮ್ಯಾಮ್ ಕೋಸ್, ಶಿವಮೊಗ್ಗದ ನಿರ್ದೇಶಕರಾದ ಕೃಷ್ಣಮೂರ್ತಿ ಕೆ.ವಿ., ಧರ್ಮೇಂದ್ರ ಹೆಚ್., ಸಾಗರ ಆಪ್ಸ್ ಕೋಸ್ ನಿರ್ದೇಶಕ ಹೆಚ್.ಬಿ.ಕಲ್ಯಾಣಪ್ಪಗೌಡರು, ಹೆಚ್.ನಾಗರಾಜ್, ಹೊಸನಗರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ ಜಯರಾಂ, ಶಿವಮೊಗ್ಗ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘ ನಿರ್ದೇಶಕರಾದ ಶ್ವೇತಾ ಬಂಡಿ, ಶಿವಮೊಗ್ಗ ಆಮ್‌ಕಾಂಮ್ಸ್ ನಿರ್ದೇಶಕ ನರಸಿಂಹ ಗೌಡರು, ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಪ್ರಮೀಳಾ ಲಕ್ಷ್ಮಣ ಗೌಡ, ಹೆಚ್.ಓಂಕೇಶ್, ಸಾಗರ ಸಹ್ಯಾದ್ರಿ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಪಿ..ಎನ್. ಶಶಿಧರ್ ಹರತಾಳು, ಹೊಸನಗರ ಟಿ.ಎ.ಪಿ.ಎಂ.ಎಸ್ ನಿರ್ದೇಶಕಿ ಸುಮಾ ಸುಬ್ರಹ್ಮಣ್ಯ, ಹೊಸನಗರ ಮ್ಯಾಟ್ ಕೋಸ್ ಅಧ್ಯಕ್ಷ ಹೆಚ್.ಪಿ. ನಂಜುಂಡಪ್ಪ, ಶಿವಮೊಗ್ಗಜಿಲ್ಲಾ ಗ್ರಾಹಕರ ಸಹಕಾರ ಸಂಘದ ನಿರ್ದೇಶಕ ಜಯಶೀಲಪ್ಪಗೌಡರು ಹೆಚ್.ಬಿ., ರಿಪ್ಪನ್ ಪೇಟೆ ವಾಯುಪುತ್ರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳವಳ್ಳಿ ವೀರೇಶ್, ಹೊಸನಗರ ತುಂಗಾ ಅಡಿಕೆ ಸಹಕಾರ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಡಿ.ಆರ್., ಹೊಸನಗರ ವರಾಹಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಲ್. ಉಮೇಶ್, ರಿಪ್ಪನ್ ಪೇಟೆ ವಿಶ್ವಮಾನವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್ ಹೆಚ್.ವಿ., ಹೊಸನಗರ ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈಶ್ವರಪ್ಪ ಗೌಡ, ಶಿವಮೊಗ್ಗ ಸಹಕಾರ ಸಂಘಗಳ ಉಪ ನಿಬಂಧಕ ನಾಗಭೂಷಣ ಸಿ.ಕಲ್ಮನೆ, ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ, ಶಿವಮೊಗ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್.ಬಿ ಶೇಖರ್, ಸಾಗರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ತೇಜೋಮೂರ್ತಿ, ಸಾಗರ ಉಪವಿಭಾಗದ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಪರಮೇಶ್ವರಪ್ಪ ಭಾಗವಹಿಸಲಿದ್ದಾರೆ. ಶಿವಮೊಗ್ಗ ಕೆಐಸಿಎಂನ ಪ್ರಭಾರ ಉಪನ್ಯಾಸಕರಾದ ಬಿ.ಸರಸ್ವತಿ ಉಪನ್ಯಾಸ ನೀಡಲಿದ್ದಾರೆ.
ಶಿವಮೊಗ್ಗ ಹಾಲು ಒಕ್ಕೂಟದಿಂದ ರಾಜ್ಯ ಹಾಲು ಒಕ್ಕೂಟ (ಕೆ.ಎಂ.ಎಫ್)ಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಡಾ| ಆರ್.ಎಂ. ಮಂಜುನಾಥ ಗೌಡ, ಸಹಕಾರ ರತ್ನ ಪುರಸ್ಕೃತರಾದ ಎಂ.ಎಂ. ಪರಮೇಶ್, ಕೆ.ಎನ್ ರಾಮಕೃಷ್ಣ, ಎಸ್.ಕೆ. ಮರಿಯಪ್ಪ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‌ಗೆ ಆಯ್ಕೆಯಾದ ವಾಟಗೋಡು ಸುರೇಶ್ ಅವರನ್ನು ಸನ್ಮಾನಿಸಲಾಗುವುದು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










