ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ
ಕಲ್ಲಡ್ಕದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ 24ನೇ ಶಾಖೆ ಉದ್ಘಾಟನೆ
ಕಲ್ಲಡ್ಕ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 24ನೇ ನೂತನ ಶಾಖೆ ಶುಕ್ರವಾರ ಕಲ್ಲಡ್ಕದ ಲಲಿತ ಎಸ್.ರಾವ್ ವಾಣಿಜ್ಯ ಸಂಕೀರ್ಣದಲ್ಲಿಉದ್ಘಾಟನೆಗೊಂಡಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನೂತನ ಶಾಖೆ ಉದ್ಘಾಟಿಸಿ ಆಶೀರ್ವಚನ ನೀಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಕಾರದ ವಿಕಾಸವಾಗಬೇಕಾಗಿದೆ. ಸಂಸ್ಕಾರವಂತ ಜನರಿಂದ ಸಮಾಜಕ್ಕೆ ಉನ್ನತ ಕೊಡುಗೆ ಸಿಗುತ್ತದೆ. ಪ್ರಜ್ಞಾವಂತ ಪ್ರಜೆಗಳಿಂದ ರಾಷ್ಟ್ರದ ಉನ್ನತಿಯಾಗುತ್ತದೆ. ಉತ್ತಮ ಗ್ರಾಹಕರೇ ಸಹಕಾರಿಯ ಜೀವಾಳ. ಸೌಹಾರ್ದ ಸಹಕಾರಿ ಹಾಗೂ ಗ್ರಾಮವಿಕಾಸ ಪರಿಕಲ್ಪನೆಗಳು ಏಕದೃಷ್ಟಿಯಿಂದ ಮುನ್ನಡೆಯಬೇಕು ಎಂದು ಹೇಳಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಶ್ರೀರಾಮನ ಆದರ್ಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಬೇಕು. ರಾಷ್ಟ್ರದ ಉನ್ನತಿಯ ಉದ್ದೇಶದಿಂದ ಸಾಗಿದಾಗ ಸುಂದರ ಬದುಕು ಸಿಗುತ್ತದೆ. ರಾಷ್ಟ್ರೋನ್ನತಿಯ ಕಾರ್ಯದಲ್ಲಿ ಯುವಶಕ್ತಿಯ ಜಾಗೃತಿಯಾಗಬೇಕಾಗಿದೆ. ಸಹಕಾರಿ ಸಂಘಗಳ ಶಾಖೆಗಳು ಬೆಳೆಯಲು ಸಿಬ್ಬಂದಿಯ ನಗುಮುಖದ ಸೇವೆಯ ಜೊತೆಗೆ ತಳಪಾಯವೂ ಗಟ್ಟಿಯಾಗಿರಬೇಕು. ಧರ್ಮದ ಚೌಕಟ್ಟು ಇದ್ದಾಗ ಎಲ್ಲವೂ ಸುಸೂತ್ರವಾಗಿ ಮುನ್ನಡೆಯುತ್ತದೆ ಎಂದು ಹೇಳಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಾರ್ಗದರ್ಶಕಿ ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ ಮಾರ್ಗದರ್ಶನ, ಪ್ರಯತ್ನ, ಉದ್ದೇಶ ಇಟ್ಟು ಸಾಗಿದಾಗ ಸಂಸ್ಥೆ ಯಶಸ್ಸು ಕಾಣುತ್ತದೆ. ವಿಶ್ವಾಸ ಹಾಗೂ ಶ್ರದ್ಧೆಯನ್ನಿಟ್ಟುಕೊಂಡಿದ್ದರಿಂದ ಸಹಕಾರಿ ಉನ್ನತ ಸ್ಥಾನಕ್ಕೇರಿದೆ. ಸಂಸ್ಥೆಯ ಶ್ರೇಯಸ್ಸಿಗೆ ಗ್ರಾಹಕರ ಸಹಾಯಕ ಅಗತ್ಯವಿದ್ದು, ಸೇವಾಕಾರ್ಯದಲ್ಲಿ ಸೇವಾ ಮನೋಭಾವದಿಂದ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.




ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಬಂಟವಾಳದ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ.ಭಟ್, ಕಟ್ಟಡ ಮಾಲಕರಾದ ಲಲಿತಾ ರಾವ್, ಕಲ್ಲಡ್ಕ ಉಮಾಶಿವ ಕ್ಷೇತ್ರದ ಅಧ್ಯಕ್ಷ ಈಶ್ವರ ಭಟ್, ಕಲ್ಲಡ್ಕ ಸುಮಂಗಲ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ದ.ಕ. ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎನ್., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಇಂಜಿನಿಯರ್ ರಾಮಪ್ರಸಾದ್ ಕೆ., ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಗಣೇಶ್ ಅತ್ತಾವರ್, ಶಾರದಾಮಣಿ, ಸರಿತಾ ಅಶೋಕ್, ದೇವಪ್ಪ ನಾಯ್ಕ, ಮೋನಪ್ಪ ಪೂಜಾರಿ, ಸೋಮಪ್ಪ ನಾಯ್ಕ್, ಜಯಪ್ರಕಾಶ್ ರೈ ನೂಜಿಬೈಲು, ಭವಾನಿಶಂಕರ್ ಶೆಟ್ಟಿ ಪುತ್ತೂರು, ಅಶೋಕ್ ಕುಮಾರ್ ಯು.ಎಸ್. ಉಪಸ್ಥಿತರಿದ್ದರು.
ಜಯಂತಿ ಪ್ರಾರ್ಥಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಸ್ವಾಗತಿಸಿದರು. ನಿರ್ದೇಶಕರಾದ ಗಣಪತಿ ಭಟ್ ಸೇರಾಜೆ ವಂದಿಸಿದರು. ಲೋಕೇಶ್ ರೈ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










