ಬೆಳ್ತಂಗಡಿ: ಮಂಗಳೂರಿನ ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ತಂಗಡಿ ಶಾಖೆಯ ಉದ್ಘಾಟನೆ ಬೆಳ್ತಂಗಡಿ ಚರ್ಚ್ ಬಳಿಯ ನೊರೋನಾ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಲಕ್ಷ್ಮಣ್ ಕರಾವಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಕಳೆದ ಮೂವತ್ತು ವರ್ಷಗಳಿಂದ ಉತ್ತಮವಾಗಿ ಪ್ರಗತಿ ಕಂಡಿದ್ದು ಸೊಸೈಟಿಯ ಶಾಖೆಗಳ ವಿಸ್ತರಣೆಗೆ ಯೋಜನೆ ಹಮ್ಮಿಕೊಳ್ಳಬೇಕು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಶಾಖೆಯಂತೆ ಹತ್ತರಿಂದ ಹದಿನೈದು ಶಾಖೆಗಳು ಶೀಘ್ರ ಆಗಬೇಕಿದೆ. ಬೆಳ್ತಂಗಡಿಯಲ್ಲಿ ಆರಂಭಗೊಂಡ ಶಾಖೆ ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿ ಪ್ರಗತಿಪಥದಲ್ಲಿ ಸಾಗುವಂತಾಗಲಿ ಎಂದು ಶುಭ ಹಾರೈಸಿದರು.
ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ್ ಕೆ ಅಧ್ಯಕ್ಷತೆ ವಹಿಸಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಭಂಡಾರಿ ಮಹಾಮಂಡಲದ ಅಧ್ಯಕ್ಷ ಶಶಿಧರ ಭಂಡಾರಿ ಕಂಪ್ಯೂಟರೀಕರಣ ವ್ಯವಸ್ಥೆಯನ್ನು ಉದ್ಘಾಟಿಸಿದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಜಯಾನಂದ ಗೌಡ ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ನೊರೋನಾ ಕಾಂಪ್ಲೆಕ್ಸ್‌ನ ಮಾಲೀಕರಾದ ಜೋಕಿಮ್ ನೊರೋನಾ, ಬೆಳ್ತಂಗಡಿ ಭಂಡಾರಿ ಸಮಾಜದ ಮಾಜಿ ಅಧ್ಯಕ್ಷರಾದ ಎ.ಪೂವಪ್ಪ ಭಂಡಾರಿ ಪಣೆಜಾಲು, ಕೇಶವ ಭಂಡಾರಿ, ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ವಿಶ್ವನಾಥ ಭಂಡಾರಿ, ಬೆಳ್ತಂಗಡಿ ಸವಿತಾ ಸಮಾಜದ ಉಪಾಧ್ಯಕ್ಷ ಜಿ.ಎಸ್ ಪೂವಪ್ಪ ಭಂಡಾರಿ ಮದ್ದಡ್ಕ, ಜೇಸಿ ವಲಯ ನಿರ್ದೇಶಕ ಅಶೋಕ್ ಗುಂಡಯ, ನಾರಾವಿ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಉಪಸ್ಥಿತರಿದ್ದರು.








ಸೊಸೈಟಿಯ ಉಪಾಧ್ಯಕ್ಷರಾದ ರಾಮ ಭಂಡಾರಿ ಎಚ್., ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ., ನಿರ್ದೇಶಕರಾದ ರಘುವೀರ ಭಂಡಾರಿ, ಶಶಿಧರ ಭಂಡಾರಿ ಕಾರ್ಕಳ, ಬಿ.ಎಸ್ ಭಂಡಾರಿ, ಶೇಖರ್ ಎಚ್., ಕುಮಾರ್ ಭಂಡಾರಿ, ಅಶೋಕ್ ಜಿ., ದಿವಾಕರ ಶಂಭೂರ್, ರಮೇಶ್ ಭಂಡಾರಿ ಸಿ.ಎಂ, ಹರೀಶ್ ಭಂಡಾರಿ, ರಮಾನಾಥ ಭಂಡಾರಿ, ರವೀಂದ್ರನಾಥ್ ಉಳ್ಳಾಲ್, ಶಾಂತಾ ಬಿ.ಎಸ್, ರಾಜಾ ಬಂಟ್ವಾಳ, ಶಶಿಕಲಾ ಉಪಸ್ಥಿತರಿದ್ದರು. ಸತೀಶ್ ಭಂಡಾರಿ ನಾಳ ಪ್ರಾರ್ಥಿಸಿ, ರಾಜಾ ಬಂಟ್ವಾಳ ಸ್ವಾಗತಿಸಿದರು. ಸಿಇಒ ಪದ್ಮನಾಭ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಭಂಡಾರಿ ಕಾಯರ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

