ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬೆಂದೂರಿನ ಸೇಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಂಘದ ಅಧ್ಯಕ್ಷ ಚಂದ್ರಶೇಖರ್ ಕೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಎಂ 2024-25 ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರ, ಬಜೆಟ್ ಮಂಡಿಸಿದರು. ಸೊಸೈಟಿಯ ಲಾಭದಲ್ಲಿ ಶೇ.20 ಡಿವಿಡೆಂಡ್ ಘೋಷಿಸಲಾಯಿತು. ಹಾಲಿ ಸಾಲಿನಲ್ಲಿ ಗರಿಷ್ಠ ಲಾಭ ಗಳಿಕೆ, ಠೇವಣೆ, ಸಾಲ ಸೌಲಭ್ಯ ಕಳೆದ ಸಾಲಿಗೆ ಹೋಲಿಸಿದಾಗ ಶೇ.29 ವೃದ್ಧಿಯಾಗಿದ್ದು, ವಾರ್ಷಿಕ ವಹಿವಾಟಿನಲ್ಲಿ ಗರಿಷ್ಠ ವೃದ್ಧಿಯ ದಾಖಲೆ ಮಾಡಿರುವುದನ್ನು ಸಭೆಯಲ್ಲಿ ಪ್ರಶಂಶಿಸಲಾಯಿತು.
ಸೊಸೈಟಿಯು ಹಾಲಿ ನಾಲ್ಕು ಶಾಖೆಗಳನ್ನು ಹೊಂದಿದ್ದು ಮಂಗಳೂರು, ಸುರತ್ಕಲ್, ಉಡುಪಿ, ಬಂಟ್ವಾಳದ ಎಲ್ಲ ಶಾಖೆಗಳೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿವೆ. ಐದನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ತೆರೆದು ವ್ಯವಹಾರ ಆರಂಭಗೊಂಡಿದ್ದು ಅಧಿಕೃತ ಉದ್ಘಾಟನೆ ಅಕ್ಟೋಬರ್ ಒಂದರಂದು ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಸಂಸ್ಥೆಯು ಸತತ ಲಾಭ ಗಳಿಸುತ್ತ ಆಡಿಟ್ ವರ್ಗೀಕರಣದಲ್ಲಿ ಸತತ ಎ ವರ್ಗದ ಸಾಧನೆ ಮಾಡಿದೆಯಲ್ಲದೆ, ಐದು ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಾಧನಾ ಪ್ರಶಸ್ತಿ ಪಡೆಯುತ್ತಿದೆ.

ಪಿಯುಸಿ ಮತ್ತು ಎಸ್ಸೆಸ್ಸೆಯಲ್ಲಿ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಾಸಭೆಯ ನೋಟಿಸ್ ಅನ್ನು ನಿರ್ದೇಶಕ ದಿವಾಕರ ಶಂಭೂರು ಓದಿದರು. ಸಭೆಯ ನಿರ್ಣಯವನ್ನು ನಿರ್ದೇಶಕ ಅಶೋಕ್ ಜಿ ಮಂಡಿಸಿದರು. ಲಾಭ ಹಂಚಿಕೆ ಮತ್ತು ಡಿವಿಡೆಂಡ್ ಘೋಷಣೆಯನ್ನು ನಿರ್ದೇಶಕ ರಾಜಾ ಬಂಟ್ವಾಳ ಮಂಡಿಸಿದರು. ಕಾರ್ಯಚಟುವಟಿಕೆಯ ವಿವರವನ್ನು ನಿರ್ದೇಶಕ ಬಿ.ಎಸ್. ಭಂಡಾರಿ ಹಾಗೂ ಪ್ರತಿಭಾ ಪುರಸ್ಕಾರ ಮಾಹಿತಿಯನ್ನು ನಿರ್ದೇಶಕ ರಮೇಶ್ ಸಿ.ಎಂ. ಭಂಡಾರಿ ಮಂಡಿಸಿದರು.
ಸಭೆಯಲ್ಲಿ ನಿರ್ದೇಶಕರಾದ ರಘುವೀರ ಭಂಡಾರಿ, ಕುಮಾರ್ ಭಂಡಾರಿ, ಹರೀಶ್ ಪಿ.ಭಂಡಾರಿ, ರವೀಂದ್ರನಾಥ್ ಉಳ್ಳಾಲ, ಶೇಖರ್ ಎಚ್., ರಮಾನಾಥ್ ಭಂಡಾರಿ, ಶಾಂತಾ ಬಿ.ಎಸ್. ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಮ ಭಂಡಾರಿ ಎಚ್. ವಂದಿಸಿದರು. ನಿರ್ದೇಶಕ ಶಶಿಧರ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com







