ಮಂಗಳೂರು: ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಬ್ಯಾಂಕಿನ ಅಧ್ಯಕ್ಷ ಎ.ಲೋಕೇಶ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್ ವರದಿ ಸಾಲಿನಲ್ಲಿ 1010 ಕೋಟಿ ರೂ. ವ್ಯವಹಾರ ನಡೆಸಿದೆ. ಪಾಲು ಬಂಡವಾಳ 4.47 ಕೋಟಿ ರೂ. ಠೇವಣಿ 191 ಕೋಟಿ ರೂ. ಹೊಂದಿದೆ. 157 ಕೋಟಿ ರೂ. ಸಾಲ ನೀಡಿದ್ದು, 2,63,56,187.61 ರೂ. ಲಾಭ ಗಳಿಸಿದೆ ಎಂದು ಹೇಳಿ ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರನೀಡಿ ಗೌರವಿಸಲಾಯಿತು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರೀತಮ್ ಪಿ.ಪೂಜಾರಿ ಅವರು ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಬ್ಯಾಂಕಿನ ಉಪಾಧ್ಯಕ್ಷ ಎಸ್.ಧನಂಜಯ ಬಂಗೇರ, ನಿರ್ದೇಶಕರಾದ ಪ್ರೇಮಾ, ಸುಮಂತ್ ರಾವ್, ನೇಮಿರಾಜ್ ಶೆಟ್ಟಿ, ಶ್ರೀರಂಜಿನಿ ಬಿ.ವಿಟ್ಠಲ ಶೆಟ್ಟಿ, ಗಣೇಶ್ ಶೆಟ್ಟಿ, ಸಿತೇಶ್ ಕೊಂಡೆ, ಶರ್ಮಿಳಾ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ಸುಮಂತ್ ರಾವ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



