ರಾಜ್ಯಪತ್ರದಲ್ಲಿ ಪ್ರಕಟವಾಗುವುದರೊಂದಿಗೆ ಅಧಿಕೃತ ಜಾರಿ
ಬೆಂಗಳೂರು: ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಅಂಕಿತಕ್ಕೆ ಬಂದಿದ್ದ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆಗೆ ಶುಕ್ರವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಹಿ ಹಾಕಿದ್ದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿದೆ. ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗುವುದರೊಂದಿಗೆ ಈ ಮಸೂದೆ ಅಧಿಕೃತವಾಗಿ ಜಾರಿಗೆ ಬಂದಂತಾಗಿದೆ.
https://chat.whatsapp.com/EbVKVnWB6rlHT1mWtsgbch
ಸೌಹಾರ್ದ ಸಹಕಾರಿ ಸಂಘಗಳ ಪ್ರಾಥಮಿಕ, ಮಾಧ್ಯಮಿಕ ಅಥವಾ ಒಕ್ಕೂಟ ಅಥವಾ ಅಪೆಕ್ಸ್ ಸಹಕಾರಿಗಳ ಸಂಘದ ಆಡಳಿತ ಮಂಡಳಿಯಲ್ಲಿ ಎಸ್‌ಸಿ, ಎಸ್‌ಟಿ ತಲಾ ಒಂದು, ಒಬಿಸಿ ಮತ್ತು ಮಹಿಳೆಯರಿಗೆ ತಲಾ ಎರಡು ಸದಸ್ಯ ಸ್ಥಾನ ಮೀಸಲಿಡುವ ಕಾಯ್ದೆ ಜಾರಿಯಾಗಿದೆ. ಸೌಹಾರ್ದ ಸಹಕಾರಿ ಬ್ಯಾಂಕ್ ಹೊರತುಪಡಿಸಿ ಪ್ರತಿಯೊಂದು ಸಹಕಾರಿಯೂ ಸಹಕಾರಿ ವರ್ಷದ ಅಂತ್ಯಕ್ಕೆ ಹೊಂದಿರುವ ಒಟ್ಟು ಠೇವಣಿಯಲ್ಲಿ ಶೇ.೨೦ರಷ್ಟನ್ನು ಶಾಸನಬದ್ಧ ದ್ರವ್ಯತಾ ಮೀಸಲು ರೂಪದಲ್ಲಿ ನಿರ್ವಹಣೆ ಕಡ್ಡಾಯವಾಗಿದೆ.

ಕರ್ನಾಟಕ ರಾಜ್ಯಪ್ರತದ ಯಥಾಪ್ರತಿಯನ್ನು ಇಲ್ಲಿ ಹಾಕಲಾಗಿದೆ.



