ಮಂಗಳೂರು: ಇಲ್ಲಿನ ಪ್ರತಿಷ್ಠಿತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 31ನೇ ವಾರ್ಷಿಕ ಮಹಾಸಭೆ, ಸ೦ಘದ ಅಧ್ಯಕ್ಷರಾದ ಕೆ.ಜೈರಾಜ್ ಬಿ.ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್ನಲ್ಲಿ ನಡೆಯಿತು. ಸ೦ಘವು 2024-25ನೇ ಸಾಲಿನಲ್ಲಿ ರೂ.589 ಕೋಟಿ ಠೇವಣಾತಿ ಹಾಗೂ ರೂ.505 ಕೋಟಿ ಸಾಲ ಮತ್ತು ಮುಂಗಡ ಹೀಗೆ ಒಟ್ಟು ರೂ. 1094 ಕೋಟಿ ಒಟ್ಟು ವ್ಯವಹಾರದೊಂದಿಗೆ ರೂ.16.29 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆ೦ಡ್ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಯಿತು.
https://chat.whatsapp.com/EbVKVnWB6rlHT1mWtsgbch
ಸಂಘದ ಅಧ್ಯಕ್ಷರಾದ ಕೆ.ಜೈರಾಜ್ ಬಿ.ರೈಯವರು 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮತ್ತು ಸದಸ್ಯರಿಂದ ಬಂದ ಪತ್ರಗಳ ವಿಷಯಗಳ ಬಗ್ಗೆ ಸಮಂಜಸ ವಿವರಗಳನ್ನು ನೀಡಿದರು. ಸಂಘ ಈವರೆಗೆ ಸಾಧಿಸಿದ ಸರ್ವತೋಮುಖ ಪ್ರಗತಿ ಗುರುತಿಸಲ್ಪಟ್ಟು ಪ್ರತಿಷ್ಠಿತ ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಸಂಘವು ಭಾಜನರಾಗಿರುವುದಕ್ಕೆ ಎಲ್ಲಾ ಸದಸ್ಯ ಭಾಂಧವರನ್ನು ಅಧ್ಯಕ್ಷರು ಅಭಿನಂದಿಸಿದರು. ಸಂಘದ ಕೇಂದ್ರ ಕಛೇರಿ ಕಟ್ಟಡದ ಕಾಮಗಾರಿ ಚುರುಕಾಗಿ ನಡಿಯುತ್ತಿದ್ದು, 2025ರ ವರ್ಷಾಂತ್ಯದೊಳಗೆ ಕಟ್ಟಡದ ಲೋಕಾರ್ಪಣೆ ಮಾಡುವುದಾಗಿ ತಿಳಿಸಿ, ಸದಸ್ಯರಿಗೆ ಅನುಕೂಲವಾಗುವಂತೆ ಸಾಲ ಸಂರಕ್ಷಣೆ ಯೋಜನೆ, ಸದಸ್ಯರ ಖಾತೆಗೆ ನೇರ ಹಣ ವರ್ಗಾವಣೆಯ ಸೌಲಭ್ಯಗಳನ್ನು ಅನುಷ್ಠಾನಿಸಲಾಗುವುದು ಎಂದು ತಿಳಿಸಿದರು.

ಸ೦ಘದ ಉಪಾಧ್ಯಕ್ಷರಾದ ಲಕ್ಷ್ಮೀ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರಾದ ಎ.ರತ್ನಕಾ೦ತಿ ಶೆಟ್ಟಿ, ಡಾ.ಕೆ.ಸುಭಾಶ್ಚ೦ದ್ರ ಶೆಟ್ಟಿ, ಪಿ.ಎಸ್.ಅಡ್ಯ೦ತಾಯ, ಸಿ.ಎ. ಎಚ್.ಆರ್.ಶೆಟ್ಟಿ, ವಿಠಲ ಪಿ.ಶೆಟ್ಟಿ, ಎಂ.ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ.ದಿವಾಕರ ರೈ, ರವೀ೦ದ್ರನಾಥ ಜಿ. ಹೆಗ್ಡೆ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಮತ್ತು ಡಾ| ಬಿ.ಸಂಜೀವ ರೈ ಉಪಸ್ಥಿತರಿದ್ದರು.
ಮಹಾಪ್ರಬ೦ಧಕರಾದ ಗಣೇಶ್ ಜಿ.ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ೦ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ೦ಡಿಸಿದರು. ಸಂಘದ ಸೇವೆಯಿಂದ ನಿವೃತ್ತರಾದ ಸಹಾಯಕ ಮಹಾಪ್ರಬಂಧಕರಾಗಿದ್ದ ಮೋಹನ್ದಾಸ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ನಿರ್ದೇಶಕ ಪಿ.ಬಿ. ದಿವಾಕರ ರೈ ಸ್ವಾಗತಿಸಿದರು, ಎಂ.ರಾಮಯ ಶೆಟ್ಟಿ ವ೦ದಿಸಿದರು. ಸಿಬ್ಬ೦ದಿ ಅಶ್ವಿನಿ ಎಸ್.ಶೆಟ್ಟಿ ಹಾಗೂ ಕಾವ್ಯಶ್ರೀ ಪ್ರಾರ್ಥಿಸಿದರು. ಶಮಂತ್ ಟಿ.ರೈ ಮತ್ತು ಸನಿಹ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com





