Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ರೂ 13.18 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 12% ಡಿವಿಡೆಂಡ್‌
    News

    ಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ರೂ 13.18 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 12% ಡಿವಿಡೆಂಡ್‌

    adminBy adminSeptember 10, 2025

    ರಾಯಚೂರು: ಇಲ್ಲಿನ ಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘದ 9ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಭಾನುವಾರ ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ನಾಗಪ್ಪ ಹೊರಪ್ಯಾಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

    https://chat.whatsapp.com/EbVKVnWB6rlHT1mWtsgbch

    ಸಹಕಾರಿಯು 13.04 ಕೋಟಿ ರೂ. ವ್ಯವಹಾರ ದಾಟಿದ್ದು 8.28 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ರೂ. 6.18 ಕೋಟಿ ಸಾಲ ವಿತರಣೆ ಮಾಡಲಾಗಿದೆ ಸಾಲ ವಸೂಲಾಯಿತಿ 95 ಪ್ರತಿಶತ ದಾಖಲಾಗಿದೆ ಎಂದು ಅಧ್ಯಕ್ಷ ನಾಗಪ್ಪ ಹೊರಪ್ಯಾಟಿ ಮಾಹಿತಿ ನೀಡಿ, ಸಹಕಾರಿಯ ಸದಸ್ಯರಿಗೆ ಶೇ.12 ಲಾಭಾಂಶ (ಡಿವಿಡೆಂಡ್‌) ಘೋಷಿಸಿದರು. ಶಿವ ಪಾರ್ವತಿ ಗಣೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಏಳಿಗೆಗೆ ಕಾರಣರಾದ ಸಹಕಾರಿಯ ಸರ್ವ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ, ಸಹಕಾರಿಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಏಜೆಂಟರುಗಳಿಗೆ, ಮತ್ತು ಸಹಕಾರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು.


    ಸಭೆಯ ಉದ್ಘಾಟನೆ ಬಳಿಕ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ್ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಹಕಾರಿಯ ನಿರ್ದೇಶಕರಾದ ಜ್ಯೋತಿ ಪ್ರಭು ಶಾಸ್ತ್ರ ಪ್ರಾರ್ಥನೆ ಗೀತೆ ಹಾಡಿದರು, ಸದಸ್ಯರಾದ ಬಸವರಾಜ ಪಲ್ಲೇದ ಸ್ವಾಗತಿಸಿದರು, ನಿರ್ದೇಶಕರಾದ ಮಲ್ಲಯ್ಯ ಕಲ್ಲೂರ ಪ್ರಾಸ್ತಾವಿಕ ಮಾತನಾಡಿದರು, ಮುಖ್ಯಕಾರ್ಯನಿರ್ವಾಹಕರಾದ ಪ್ರಭಾಕರ ರೆಡ್ಡಿ 2024-25ನೇ ಸಾಲಿನ ಸಾಮಾನ್ಯ ಸಭೆ ವಿಷಯವಾರು ಚರ್ಚೆ ಮತ್ತು ವಾರ್ಷಿಕ ವರದಿ ಮಂಡಿಸಿದರು. ಸದಸ್ಯರಾದ ವೈ.ಕೆ ಯಶೋಧ ಕಾರ್ಯಕ್ರಮ ನಿರೂಪಿಸಿದರು. ಮುತ್ತಣ್ಣ ಗೌಡ ವಂದಿಸಿದರು. ಉಪಾಧ್ಯಕ್ಷರಾದ ಬಲವಂತ ರೆಡ್ಡಿ, ನಿರ್ದೇಶಕರಾದ ತೋಟಪ್ಪ, ಸಿದ್ದಪ್ಪ, ಡಾ| ಶಿವಲೀಲಾ, ವಿಜಯಲಕ್ಷ್ಮೀ ಪಲ್ಲೇದ, ಕೆ.ವೆಂಕಟಲಕ್ಷ್ಮೀ, ಮಹಾಲಕ್ಷ್ಮೀ, ಉಮಾದೇವಿ ಎಂ.ಪಾಟೀಲ, ನೀಲಾಂಬಿಕಾ, ವಿದ್ಯಾ, ಸಹಕಾರಿಯ ಸಿಬ್ಬಂದಿಗಳಾದ ಕಾರ್ತಿಕ, ಪದ್ಮ, ಸಹಕಾರಿಯ ಕಾನೂನು ಸಲಹೆಗಾರ ಎ.ಶ್ರೀನಿವಾಸ ಹಾಜರಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Kotary Function Hall Nagappa Horapyati Raichuru Shiva Parvathi Ganesha Pattina Souharda Sahakari Sangha
    Previous Articleಸೆ.14ರಂದು ಶಿವಬಸವ ನೌಕರರ ಸೌಹಾರ್ದ ಸಹಕಾರಿ ಸಂಘ ಗುಬ್ಬಿ ಇದರ ಮಹಾಸಭೆ
    Next Article ಶಿಕ್ಷಕರಿಂದ ಪ್ರೀತಿ, ಸಮರ್ಪಣಾ ಭಾವದ ಸೇವೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.