40 ಲಕ್ಷ ರೂ. ನಿವ್ವಳ ಲಾಭ: ಅಧ್ಯಕ್ಷ ಲಿಂಗದೇವರು ಹೇಳಿಕೆ
ತುಮಕೂರು: ತಿಪಟೂರಿನ ಶ್ರೀ ಕಲ್ಪತರು ವೀರಶೈವ ಲಿಂಗಾಯಿತ ಸೌಹಾರ್ದ ಪತ್ತಿನ ಸಹಕಾರಿ ಸಂಘದ 6ನೇ ವಾರ್ಷಿಕ ಮಹಾಸಭೆ ಶನಿವಾರ ನಡೆಯಿತು.

ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಶಾಸಕ, ಸಹಕಾರಿ ರತ್ನ ಪುರಸ್ಕೃತ ಕೆ.ಷಡಾಕ್ಷರಿ ಸಭೆ ಉದ್ಘಾಟಿಸಿ ಮಾತನಾಡಿ, ಶ್ರೀ ಕಲ್ಪತರು ವೀರಶೈವ ಲಿಂಗಾಯಿತ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಪ್ರಾರಂಭದಿಂದಲೂ ಉತ್ತಮ ಸೇವೆ ಸಲ್ಲಿಸುತ್ತ ಬಂದಿದೆ. ಮುಂದೆಯೂ ಸಂಘವು ಚೆನ್ನಾಗಿ ಕಾರ್ಯನಿರ್ವಹಿಸಿ, ಸಹಕಾರಿಯ ಸದಸ್ಯರಿಗೆ ಉತ್ತಮ ಸೇವೆ ಒದಗಿಸಲಿ ಎಂದು ಹಾರೈಸಿದರು.
https://chat.whatsapp.com/EbVKVnWB6rlHT1mWtsgbch
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಲಿಂಗದೇವರು ವಹಿಸಿದ್ದರು. ನಗರ ಸಭೆ ಅಧ್ಯಕ್ಷರಾದ ಯಮುನಾ ಧರಣೇಶ್ ಉಪಸ್ಥಿತರಿದ್ದರು. ಮುಖ್ಯಅತಿಥಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ನಿರ್ದೇಶಕ ಸಿ.ಪಿ.ವಿಜಯ್ ಮಾತನಾಡಿ ಸಂಘದ, ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ವಿಚಾರಗಳನ್ನು ಮಂಡಿಸಿದರು. ಎಸ್ಸೆಸ್ಸೆಲ್ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಪಾಧ್ಯಕ್ಷರಾದ ಜಗದೀಶಪ್ಪ, ನಿರ್ದೇಶಕರಾದ ತೇಜಮೂರ್ತಿ, ಜಿ.ಎಸ್.ನಿಜಗುಣ, ಎಂ.ನಿಜಗುಣ, ಕೆ.ಎಸ್.ಮರುಳಸಿದ್ಧಸ್ವಾಮಿ, ತೋಂಟಾರಾಧ್ಯ, ಎಂ.ಬಿ.ವೀರಭದ್ರಸ್ವಾಮಿ, ಟಿ.ಆರ್.ತೇಜಮೂರ್ತಿ, ಡಿ.ಎಸ್.ನೀಲಕಂಠಸ್ವಾಮಿ, ಬೋರೇಗೌಡ, ವೀಣಾ ಬಸವರಾಜು, ಕಾವ್ಯಶ್ರೀ.ಕೆ, ಟಿ.ಕೆ.ಶಶಿಧರ್, ರಾಜು, ಇ.ಬಿ.ಮಹಾಲಿಂಗಪ್ಪ, ಅಪ್ಪೇಗೌಡಸ್ವಾಮಿ ಎಂ, ಬಿ.ಎಂ.ಚಿದಾನಂದಸ್ವಾಮಿ, ಸಂಸ್ಥಾಪಕ ಸದಸ್ಯರುಗಳಾದ ಎಸ್.ಜಗದೀಶಪ್ಪ, ಜೆ.ಪಿ.ಸೋಮಶೇಖರಪ್ಪ, ಎಂ.ಆರ್.ಶಿವಸ್ವಾಮಿ ಮಂಜುನಾಥಸ್ವಾಮಿ, ಟಿ.ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಒಟ್ಟು ದುಡಿಮೆ ಬಂಡವಾಳ 26.32 ಕೋಟಿ ರೂ., ಠೇವಣಿಗಳು ಒಟ್ಟು 22.71 ಕೋಟಿ ರೂ. ಇದ್ದು, 40 ಲಕ್ಷ ರೂ. ನಿವ್ವಳ ಲಾಭ ಬಂದಿದೆ. ಐದು ಜಿಲ್ಲಾ ಕಾರ್ಯವ್ಯಾಪ್ತಿ ಹೊಂದಿರುವ ಈ ಸೊಸೈಟಿ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ.


