ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಹರೀಶ್ ಕೆ ಘೋಷಣೆ
ಮಂಗಳೂರು: ದಿವ್ಯಜ್ಯೋತಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಗೋಲ್ಡ್ ಪ್ಯಾಲೆಸ್ ಒನೆಕ್ಸ್ ಕಟ್ಟಡದಲ್ಲಿರುವ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಿತು. ಸಂಘವು ಒಟ್ಟು ರೂ. 20.86 ಕೋಟಿ ವ್ಯವಹಾರ ನಡೆಸಿದ್ದು, 48,17,569.57 ರೂ. ನಿವ್ವಳ ಲಾಭ ಗಳಿಸಿದೆ.
https://chat.whatsapp.com/EbVKVnWB6rlHT1mWtsgbch
ಸಂಘದ ಅಧ್ಯಕ್ಷ ಹರೀಶ್ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಬೆಳವಣಿಗೆಗೆ ಎಸ್.ಪ್ರಸಾದ್ ಗುರೂಜಿಯವರ ಮಾರ್ಗದರ್ಶನ, ಆಶೀರ್ವಾದ, ಸದಸ್ಯರ ಪ್ರೋತ್ಸಾಹ ಮತ್ತು ಸಲಹೆ, ಆಡಳಿತ ಮಂಡಳಿಯ ನಿರ್ದೇಶನ ಮತ್ತು ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಪ್ರಮುಖ ಕಾರಣ. ಸಂಘವು ಸಮಾಜಮುಖಿ ಕಾರ್ಯದ ಉದ್ದೇಶದಿಂದ ಇತ್ತೀಚೆಗೆ ಮೂಡುಶೆಡ್ಡೆ ಮತ್ತು ಜೆಪ್ಪಿನಮೊಗರುವಿನಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿದ್ದು ಪರಿಸರದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಸಂಘವು 48.17 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.15 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಹೇಳಿದರು.




ಸಂಘದ ಮಾರ್ಗದರ್ಶಕ ಎಸ್.ಪ್ರಸಾದ್ ಗುರೂಜಿಯವರು ಮಾತನಾಡಿ, ಸದಸ್ಯರು ಉತ್ತಮವಾಗಿ ವ್ಯವಹಾರ ನಡೆಸಿರುವುದರಿಂದ, ಆಡಳಿತ ಮಂಡಳಿಯವರ ನಿಸ್ವಾರ್ಥ ಸೇವೆ ಸಲ್ಲಿಸಿದ ಪರಿಣಾಮ ಮತ್ತು ಸಿಬ್ಬಂದಿಯವರ ಕರ್ತವ್ಯ ನಿಷ್ಠೆ, ಸಂಘದ ಉತ್ತಮ ಪ್ರಗತಿಗೆ ಕಾರಣ. ಮುಂದೆಯೂ ಸಂಘವು ಉನ್ನತಿ ಕಾಣಲಿ ಎಂದು ಶುಭ ಹಾರೈಸಿದರು. ಹಿರಿಯ ಸದಸ್ಯರಾದ ಎನ್.ಪಿ.ಅಮೀನ್, ಎಂ.ಎಸ್.ಗುರುರಾಜ್, ವಿಷ್ಣುಮೂರ್ತಿ ಭಟ್, ಎಂ.ಟಿ.ಭಟ್, ವಿ.ಬಿ.ಮೈಂದನ್ ಸಂಘದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಲಹೆ ಸೂಚನೆ ನೀಡಿದರು. ನಿರ್ದೇಶಕರಾದ ನವೀನ್ಚಂದ್ರ ಸೇಮಿತ ಕೆ., ಕೃಷ್ಣ ಎ.ಶೆಟ್ಟಿ, ರಂಜನ್ ಎಂ.ಶೆಟ್ಟಿ, ದೀಪಕ್ ಸುವರ್ಣ ಹಾಗೂ ಕಾರ್ಯದರ್ಶಿ ಎನ್.ಪ್ರಕಾಶರಾಜ ರಾವ್ ವೇದಿಕೆಯಲ್ಲಿದ್ದರು. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಹಾಯಕ ಕಾರ್ಯದರ್ಶಿ ಧನರಾಜ ಶೆಟ್ಟಿ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಹರೀಶ್ ಆಳ್ವ ವಂದಿಸಿದರು.
ನಿರ್ದೇಶಕರದ ಮನೋಜ್ ಶೆಟ್ಟಿ ಸ್ವಾಗತಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ.ಜಿ. ಆರ್.ಶೆಟ್ಟಿಯವರು ಸಂಘದ ಪ್ರಗತಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಸಂಘದ ವಾರ್ಷಿಕ ವರದಿ, ಆರ್ಥಿಕ ತಖ್ತೆಗಳು, ಲಾಭಾಂಶ ವಿತರಣೆ, ಮುಂದಿನ ಸಾಲಿನ ಆಯವ್ಯಯ, ಮುಂದಿನ ಕಾರ್ಯಯೋಜನೆಗಳನ್ನು ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com






