Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ವಾರ್ಷಿಕ ಸಾಮಾನ್ಯ ಸಭೆ
    News

    ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ವಾರ್ಷಿಕ ಸಾಮಾನ್ಯ ಸಭೆ

    adminBy adminAugust 13, 2025

    ಕುಂದಾಪುರ: ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ (ನಿ) ಕುಂದಾಪುರ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ತಲ್ಲೂರಿನ ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆನ್ಷನ್ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಎಸ್.ಸಚ್ಚಿದಾನಂದ ಚಾತ್ರ ಅಧ್ಯಕ್ಷತೆಯಲ್ಲಿ ನಡೆಯಿತು.
    2010ನೇ ವರ್ಷದಲ್ಲಿ ಪ್ರಾರಂಭಗೊಂಡ ಈ ಸೊಸೈಟಿಯು ತೀವ್ರಗತಿಯಲ್ಲಿ ಮುನ್ನಡೆಯುತ್ತಿದ್ದು, 2024-25ನೇ ಸಾಲಿನಲ್ಲಿ 37.81 ಲಕ್ಷ ರೂ. ಲಾಭ ಗಳಿಸಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ. ಸಂಘವು ತನ್ನಲ್ಲಿರುವ ಠೇವಣಾತಿಗಳನ್ನು ಸಮರ್ಪಕವಾಗಿ ಸಾಲ ವಿತರಣೆ ಹಾಗೂ ಸುಸ್ಥಿರ ಹೂಡಿಕೆ ಮಾಡಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ.

    https://chat.whatsapp.com/EbVKVnWB6rlHT1mWtsgbch
    ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಅಡಿಗ ಇವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕರಾದ ಸುಪ್ರೀತ್ ಛಾತ್ರ, ಗಾಯತ್ರಿ ಕಾರಂತ್, ರವೀಂದ್ರ ಕನ್ನಂತ ,ಕುಷ್ಟ ನಾಯಕ್, ನಾಗೇಶ್ ರಾವ್, ಟಿ.ರಾಮ, ಪ್ರಭಾಕರ ಪೈ ಹಾಜರಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಐವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಹಾಗೂ ಸಕಾಲದಲ್ಲಿ ಸಾಲ ಮರುಪಾವತಿಸಿದ ಇಬ್ಬರು ಸದಸ್ಯರನ್ನು ಗೌರವಿಸಲಾಯಿತು. ಸಿಬ್ಬಂದಿಗಳಾದ ಮಮತಾ ಮತ್ತು ರೇಷ್ಮಾ ಖಾರ್ವಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ವಿವೇಕ್ ಯು ಸ್ವಾಗತಿಸಿ, ಸುಪ್ರೀತ್ ಚಾತ್ರ ವಂದಿಸಿದರು. ರಮಾನಂದ ಕಾರಂತ ಕಾರ್ಯಕ್ರಮ ನಿರೂಪಿಸಿದರು.


    ಸಂಘದಲ್ಲಿ 3625 ‘ಎ’ತರಗತಿ ಸದಸ್ಯರು, 2014 ‘ಸಿ’ ತರಗತಿ ಮತ್ತು ‘ಬಿ’ ತರಗತಿ 43 ಸದಸ್ಯರಿದ್ದಾರೆ. 2024-25ನೇ ಸಾಲಿನಲ್ಲಿ ರೂ.36.15 ಕೋಟಿ ಠೇವಣಿ ಹೊಂದಿದ್ದು ರೂ. 29.41 ಕೋಟಿ ರೂಪಾಯಿ ಸಾಲ ನೀಡಿದೆ. ಠೇವಣಿಯಲ್ಲಿ ಕಳೆದ ಬಾರಿಗಿಂತ ಶೇ.21 ಪ್ರಗತಿ ಸಾಧಿಸಿದೆ. ಕಳೆದ ಬಾರಿ ನಿಗದಿಪಡಿಸಿದ ಠೇವಣಿ, ಸಾಲ ನೀಡಿಕೆ, ಸುಸ್ತಿ ಸಾಲ ಗುರಿ ಮೀರಿ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿ 35 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿದ ಸಂಸ್ಥೆಯಾಗಿದ್ದು, ಇದರಲ್ಲಿ ನೌಕರರ ಶ್ರಮ ಗ್ರಾಹಕರ ಸಹಕಾರ ಪರಿಶ್ರಮವಿದೆ. ಪ್ರಧಾನ ಕಛೇರಿಯಲ್ಲಿ ಠೇವಣಿ 16 ಕೋಟಿ ರೂಪಾಯಿ, 2013ರಲ್ಲಿ ಪ್ರಾರಂಭಗೊಂಡ ಸಿದ್ಧಾಪುರ ಶಾಖೆಯಲ್ಲಿ 8.17 ಕೋಟಿ, 2016ರಲ್ಲಿ ಪ್ರಾರಂಭವಾದ ಉಪ್ಪುಂದ ಶಾಖೆಯಲ್ಲಿ 6.69 ಕೋಟಿ ಮತ್ತು 2019ರಲ್ಲಿ ಪ್ರಾರಂಭವಾದ ತೆಕ್ಕಟ್ಟೆ ಶಾಖೆಯಲ್ಲಿ 5.03 ಕೋಟಿ ಠೇವಣಿ ಇದೆ.
    ಸಿದ್ಧಾಪುರ ಶಾಖೆಯಲ್ಲಿ ರೂ.6.58 ಕೋಟಿ, ಉಪ್ಪುಂದ ಶಾಖೆಯಲ್ಲಿ 5.63 ಕೋಟಿ ಮತ್ತು ತೆಕ್ಕಟ್ಟೆ ಶಾಖೆಯಲ್ಲಿ 4.23 ಕೋಟಿ ರೂಪಾಯಿ ಮತ್ತು ಪ್ರಧಾನ ಕಛೇರಿಯಲ್ಲಿ 12.96 ಕೋಟಿ ಸಾಲ ನೀಡಲಾಗಿದ್ದು ಎಲ್ಲಾ ಶಾಖೆಗಳೂ ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘವು ವರದಿ ವರ್ಷದಲ್ಲಿ ರೂ.87,09,562ರಷ್ಟು ಇ-ಸ್ಟ್ಯಾಂಪ್‌ ವ್ಯವಹಾರ ನಡೆಸಿದೆ. ಮುಂದಿನ ಸಾಲಿನಲ್ಲಿ ಸಾಲ ವಸೂಲಾತಿ, ಠೇವಣಿ ಸಂಗ್ರಹ ಮುಂತಾದ ವ್ಯವಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು ಠೇವಣಿಯ ಶೇ.20ರಂತೆ ರೂ.10.98 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Cooperative Registrar K S Adiga Kundapura S. Sacchidananda Chatra Shree Brahmi Souharda Sahakari Sangha Souharda Sahakari Spandana Tallur Thaluru
    Previous Articleಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸದಸ್ಯರಿಗೆ ಶೇ.10 ಡಿವಿಡೆಂಡ್
    Next Article ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.