ಉತ್ತಮ ಕೃಷಿಕ ಪ್ರಶಸ್ತಿ ಪ್ರದಾನ, ಪ್ರಗತಿಪರ ಕೃಷಿಕರಿಗೆ ಗೌರವಾರ್ಪಣೆ
ಬಂಟ್ವಾಳ: ದಕ್ಷಿಣ ಕನ್ನಡ ಸೌಹಾರ್ದ ಸಹಕಾರಿ ಅಣ್ಣಳಿಕೆ ಬಂಟ್ವಾಳ ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಬಿ.ಸಿ.ರೋಡ್ ರಂಗೋಲಿ ಹೋಟೆಲ್‌ನಲ್ಲಿ ಜರುಗಿತು.
ಸಹಕಾರಿಯ ಅಧ್ಯಕ್ಷರಾದ ಸಿಲ್ವೆಸ್ಟರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಸಿಬ್ಬಂದಿ ಸುಮಂಗಲಾ, ವಿನೋದಾ ಪ್ರಾರ್ಥಿಸಿದರು. ಸಹಕಾರಿಯ ಉಪಾಧ್ಯಕ್ಷ ದೇವಪ್ಪ ಕುಲಾಲ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದೇಶ್ ಪೂಜಾರಿ ವಾರ್ಷಿಕ ವರದಿ, ಲೆಕ್ಕಪತ್ರಗಳು ಹಾಗೂ ನಿವ್ವಳ ಲಾಭದ ವಿಂಗಡನೆಯ ವಿಷಯ ಮಂಡಿಸಿದರು. ಸದಸ್ಯರಿಗೆ ಶೇ.5.13 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಹಕಾರಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮಾತನಾಡಿ ಸದಸ್ಯರ ನಂಬಿಕೆ, ವಿಶ್ವಾಸದಿಂದ ಸಹಕಾರಿಯ ಅಭಿವೃದ್ಧಿ ಸಾಧ್ಯ ಎಂದರು.




https://chat.whatsapp.com/EbVKVnWB6rlHT1mWtsgbch
ನೇತ್ರಾವತಿ ಕೃಷಿಕ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ 2025ರ ಸಾಲಿನ ಉತ್ತಮ ಕೃಷಿಕ ಪ್ರಶಸ್ತಿಯನ್ನು ಬಂಟ್ವಾಳ ತಾಲೂಕಿನ ಪ್ರಗತಿಪರ ಕೃಷಿಕರಾದ ಮಹಾಬಲ ಶೆಟ್ಟಿ ಕುಂದಬೆಟ್ಟು ತೆಂಕಬೆಳ್ಳೂರು, ರಂಜಿನಿ ದಿವಾಕರ್ ಮಾದಾಯಿ ಸಿದ್ದಕಟ್ಟೆ, ಜೆರಾಲ್ದ್ ಲೋಬೊ ದೆಂಬುಡೆ ಅರಳ, ಕೃಷ್ಣರಾಜ್ ಜೈನ್ ಪಂಜಿಕಲ್ಲು ಗುತ್ತು ಇವರಿಗೆ ನೀಡಿ ಗೌರವಿಸಲಾಯಿತು. ನೇಸರ ಕೇಂದ್ರ ಸಮಿತಿ ಗುರುಪುರ ಕೈಕಂಬ ಇವರ ನೇತೃತ್ವದಲ್ಲಿ ಮಲ್ಲೂರು ಪರಾರಿ ಬರ್ಕೆ ದಿ.ತ್ಯಾಂಪಣ್ಣ ಶೆಟ್ಟಿ ಇವರ ಸ್ಮರಣಾರ್ಥ 2025ರ ಸಾಲಿನ ಉತ್ತಮ ಕೃಷಿಕ ಪ್ರಶಸ್ತಿಯನ್ನು ಮಂಗಳೂರು ತಾಲೂಕಿನ ಪ್ರಗತಿಪರ ಕೃಷಿಕರಾದ ಲಾರೆನ್ಸ್ ನೋರ್ಬರ್ಟ್ ಸಿಕ್ವೇರ ರಾಯರಕೋಡಿ ಕಂದಾವರ, ರಾಮಣ್ಣ ನಾಯ್ಕ ಅಂಗಡಿಬಳಿ ಕಿಲೆಂಜಾರು, ಬಾಲಕೃಷ್ಣ ಪೂಜಾರಿ ಬರಿಪಲ್ಲ ಗುರುಪುರ, ಜೋನ್ಸಿ ಮಿನೇಜಸ್ ಕಿರಾಮ ಮೂಡುಶೆಡ್ಡೆ ಇವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂಧರ್ಭ ಸಹಕಾರಿಯ ಸ್ಠಾಪನೆಯಲ್ಲಿ ಶ್ರಮಿಸಿದ ಮುಖಂಡರಳನ್ನು ಗುರುತಿಸಿ ಗೌರವಿಸಿ ಅಭಿನಂದಿಸಲಾಯಿತು.
ಸಹಕಾರಿಯ ನಿರ್ದೇಶಕರಾದ ಗೋಡ್ವಿ ಫೆರ್ನಾಂಡಿಸ್ ಅಮ್ಮುಂಜೆ, ವಸಂತಿ ಸುರೇಶ್ ಸೊರ್ನಾಡ್, ಮಹಮ್ಮದ್ ಇಡ್ಮ ಮಲ್ಲೂರು, ಹೆನ್ರಿ ಫಾಸ್ಕಲ್ ವಾಲ್ಟರ್ ಕಿನ್ನಿಕಂಬಳ, ರಮೇಶ್ ಹೆಗ್ಡೆ ಬೆಳ್ಳಿಬೆಟ್ಟುಗುತ್ತು ಗುರುಪುರ, ಜಯಲಕ್ಷ್ಮಿ ಸುಭಾಶ್ಚಂದ್ರ ಅಡ್ಡೂರು, ನಿರಂಜನ್ ಸೇಮಿತ ಬಡಗಬೆಳ್ಳೂರು, ಚಂದಪ್ಪ ಮೂಲ್ಯ ರಾಯಿ, ಕರುಣಾಕರ ಪೂಜಾರಿ ಕೊಪ್ಪಳ ಪಿಲಿಮೊಗರು, ಆನಂದ ಗಾಡಿಪಲ್ಕೆ ಸಂಘಬೆಟ್ಟು, ವಸಂತಿ ಕುಪ್ಪೆಪದವು, ಸಾಹಿರಾಬಾನು ಅಡ್ಡೂರು, ಪ್ರಮೀಳಾ ಉಳಾಯಿಬೆಟ್ಟು ಉಪಸ್ಥಿತರಿದ್ದರು ಸಂಘಟನೆಯ ಮುಖಂಡರಾದ ಮಾರ್ಗರೇಟ್ ಅಂದ್ರಾದೆ ಕಿನ್ನಿಕಂಬಳ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com










