ಶೇ.50 ಸುಂಕ ವಿಧಿಸುವ ಅಮೆರಿಕದ ಆದೇಶಕ್ಕೆ ಸೆಡ್ಡು ಹೊಡೆಯಲು ದಿಲೀಪ್ ಸಂಘಾನಿ ಕರೆ
ಅಮೆರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸಿ ಆತ್ಮನಿರ್ಭರ ಭಾರತ ಪರಿಕಲ್ಪನೆ ಬೆಂಬಲಿಸಲು ಮನವಿ
ನವದೆಹಲಿ: ಭಾರತದ ಮೇಲೆ ಆರ್ಥಿಕವಾಗಿ ಒತ್ತಡ ಹೇರಲು ಅಮೆರಿಕವು ಮಾಡುತ್ತಿರುವ ಪ್ರಯತ್ನಗಳನ್ನು ಖಂಡಿಸಿರುವ ಹಿರಿಯ ಸಹಕಾರಿ ಮುಖಂಡ ದಿಲೀಪ್‌ಸಂಘಾನಿ, ಭಾರತೀಯ ನಾಗರಿಕರು ಅಮೆರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ತಮ್ಮ ದೇಶಭಕ್ತಿ ಮತ್ತು ರಾಷ್ಟ್ರೀಯ ಶಕ್ತಿಯನ್ನು ಪ್ರದರ್ಶಿಸುವ ಜೊತೆಗೆ ಭಾರತೀಯರು ಆತ್ಮನಿರ್ಭರ ಪರಿಕಲ್ಪನೆಯ ಮೂಲಕ ಸ್ವಾವಲಂಬಿಯಾಗಲು ಇದು ಸುಸಮಯ ಎಂದು ಹೇಳಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಭಾರತೀಯ ಜನ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಸಂಘಾನಿ, ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯುತ್ತಿರುವ ಭಾರತದ ಪ್ರಮುಖ ವಲಯಗಳ ಮೇಲೆ ಪ್ರಭಾವ ಬೀರಲು ಅಮೆರಿಕ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತೀಯರು ಅಮೆರಿಕದ ಸರಕುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಡೊನಾಲ್ಡ್‌ಟ್ರಂಪ್‌ಹೇರಲು ಹೊರಟಿರುವ ಶೇ.50ರ ಸುಂಕ ನೀತಿಗೆ ಬಲವಾದ ತಿರುಗೇಟು ನೀಡಬೇಕು. ಇದು ಕೇವಲ ಪ್ರತಿಭಟನೆಯಲ್ಲ, ಆದರೆ ಭಾರತದ ಸಾರ್ವಭೌಮತ್ವ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುವ ಕಾರ್ಯತಂತ್ರದ ಕ್ರಮವಾಗಿ ಹೊರಹೊಮ್ಮಬೇಕು ಎಂದು ಹೇಳಿದರು.


“ಭಾರತವು ನಿಜವಾಗಿಯೂ ಸ್ವಾವಲಂಬಿಯಾಗಲು ಇಮೊಂದು ಸುವರ್ಣಾವಕಾಶ” ಎಂದು ಪ್ರತಿಪಾದಿಸಿದ ಅವರು, ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ)ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಇದು ಸಕಾಲ, ಭಾರತದ ಜನ ಶಾಂತಿಯುತವಾಗಿ, ಸ್ವಯಂಪ್ರೇರಿತರಾಗಿ ಅಮೆರಿಕದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು, ಇದರಿಂದ ಭಾರತವು ಯಾವುದೇ ವಿದೇಶಿ ಒತ್ತಡಕ್ಕೆ ಎಂದಿಗೂ ಮಣಿಯುವುದಿಲ್ಲ ಎಂದು ಹೇಳಿದರು.
ಅಮೆರಿಕನ್‌ವಸ್ತುಗಳನ್ನು ಖರೀದಿಸಲು ಅಥವಾ ಬಳಸಲು ನಿರಾಕರಿಸುವ ಮೂಲಕ, ಭಾರತವು ಆರ್ಥಿಕ ದಬ್ಬಾಳಿಕೆಯ ಎದುರು ದೃಢವಾಗಿ ನಿಲ್ಲುತ್ತದೆ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ನಾವು ಕಳುಹಿಸಬಹುದು. ಭಾರತದ ಬೆಳವಣಿಗೆ ಮತ್ತು ಸ್ಥಿರತೆಗೆ ಕೃಷಿ ಮತ್ತು ಆರ್ಥಿಕ ನೀತಿಗಳ ಮೇಲೆ ಪ್ರಭಾವ ಬೀರಲು ಅಮೆರಿಕ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಿದೆ ಎಂದು ಸಂಘಾನಿ ತಿಳಿಸಿದ್ದಾರೆ. ಅಮೆರಿಕ ಸುಂಕ ನೀತಿಯ ಬಗ್ಗೆ ಭಾರತೀಯರಲ್ಲಿ ಸಂಘಾನಿಯವರು ಮಾಡಿರುವ ಮನವಿಯು ಹೆಚ್ಚುತ್ತಿರುವ ರಾಷ್ಟ್ರೀಯತಾ ಭಾವನೆ ಮತ್ತು ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಮತ್ತು ದೇಶೀಯ ಕೈಗಾರಿಕೆಗಳನ್ನು ಬಲಪಡಿಸುವ ಗುರಿ ಹೊಂದಿರುವ ದೊಡ್ಡ ಆತ್ಮನಿರ್ಭರ ಭಾರತ್‌ಗೆ ಪುಷ್ಟಿ ನೀಡಲಿದೆ.
ಆರ್ಥಿಕ ಸಾರ್ವಭೌಮತ್ವವು ಮಿಲಿಟರಿ ಅಥವಾ ರಾಜಕೀಯ ಶಕ್ತಿಯಷ್ಟೇ ನಿರ್ಣಾಯಕ ಎಂದು ಪ್ರತಿಪಾದಿಸುವ ಅನೇಕರ ಮಾತುಗಳನ್ನು ದಿಲೀಪ್ ಸಂಘಾನಿಯವರ ಸಂದೇಶವು ಪ್ರತಿಬಿಂಬಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com







