Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್‌ ಸೊಸೈಟಿಗೆ 10.42 ಕೋಟಿ ರೂ. ಲಾಭ, ಶೇ.25 ಡಿವಿಡೆಂಡ್ ಘೋಷಣೆ
    News

    ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್‌ ಸೊಸೈಟಿಗೆ 10.42 ಕೋಟಿ ರೂ. ಲಾಭ, ಶೇ.25 ಡಿವಿಡೆಂಡ್ ಘೋಷಣೆ

    adminBy adminAugust 5, 2025

    ಮೂಡುಬಿದಿರೆ: 109ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್‌ ಸೊಸೈಟಿಯು 2024-25ನೇ ಸಾಲಿನಲ್ಲಿ 57.33 ಕೋಟಿ ರೂ. ಆದಾಯದೊಂದಿಗೆ 10.42 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದ್ದು ತಮ್ಮ ಸಂಸ್ಥೆಯ ಸದಸ್ಯರಿಗೆ ಸತತ 25ನೇ ವರ್ಷವೂ ಶೇ.25 ಡಿವಿಡೆಂಡ್ ನೀಡಿದೆ.

    https://chat.whatsapp.com/EbVKVnWB6rlHT1mWtsgbch
    ಮೂಡುಬಿದಿರೆ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಈ ವಿಷಯ ತಿಳಿಸಿದರು. ಸದಸ್ಯರ ನಂಬಿಕೆ, ವಿಶ್ವಾಸಾರ್ಹತೆಯ ನೆಲೆಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಬದ್ಧತೆಯ ಸೇವೆಯಿಂದಾಗಿ ‘ನಮ್ಮ ಸೊಸೈಟಿʼ ಎಂಬ ಅಭಿಮಾನಕ್ಕೆ ಪಾತ್ರವಾಗಿದೆ ಎಂದು ಅವರು ಹೇಳಿದರು.


    ಸುದರ್ಶನ ಭಟ್ ಲೆಕ್ಕ ಪರಿಶೋಧನಾ ವರದಿ, ಲಾಭಾಂಶ ವಿಂಗಡಣೆ ವರದಿ ಮಂಡಿಸಿದರು. ಮಂಜುನಾಥ ಎಸ್. ಇವರು 2024-25ನೇ ಸಾಲಿನ ಬಜೆಟ್‌ಗಿಂತ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರು, ಸಂತೋಷ್ ನಾಯ್ಕ 2025-26ನೇ ಸಾಲಿನ ಬಜೆಟ್ ಮಂಡನೆ ಕಲಾಪ ನಡೆಸಿಕೊಟ್ಟರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಮಾತನಾಡಿ, ಲಾಭದಲ್ಲಿ ಶೇ.50ಕ್ಕಿಂತಲೂ ಅಧಿಕ ಅಂದರೆ 4,50,00,000 ರೂ. ಅಷ್ಟನ್ನು ಕ್ಷೇಮ ನಿಧಿಗೆ ಇರಿಸಿದ್ದು ಶೇ.25 ಅನ್ನು ಸದಸ್ಯರಿಗೆ ಪಾಲು ಮುನಾಫೆಗೆ ಇರಿಸಲಾಗಿದೆ. ಅಧಿಕೃತ ಬ್ಯಾಂಕಿನ ಬಂಡವಾಳದ ಮಿತಿಯನ್ನು 30 ಕೋಟಿ ರೂ.ಗೇರಿಸಲು ನಿರ್ಧರಿಸಲಾಗಿದೆ ಎಂದರು.
    ಕೇಂದ್ರ ಸರಕಾರದ ಸೂಚನೆಯಂತೆ ಸಾಮಾನ್ಯ ತಂತ್ರಜ್ಞಾನ ಅಳವಡಿಸುವ ಬಗ್ಗೆ ಚರ್ಚಿಸಿ ತ್ರಿಮುಖ ಒಪ್ಪಂದದ ಮೂಲಕ ಸೊಸೈಟಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ನಿರ್ಧರಿಸಲಾಯಿತು. ಕೆಲವು ಲಿಖಿತ ಪ್ರಶ್ನೆಗಳಿಗೆ ನಿರ್ದೇಶಕ ಜಯರಾಮ ಕೋಟ್ಯಾನ್ ಉತ್ತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಂ.ಗಣೇಶ್ ನಾಯಕ್‌, ನಿರ್ದೇಶಕರಾದ ಜಾರ್ಜ್ ಮೋನಿಸ್, ಮನೋಜ್ ಶೆಟ್ಟಿ ಸಿ.ಎಚ್‌.ಅಬ್ದುಲ್ ಗಫೂರ್, ಎಂ.ಪಿ.ಅಶೋಕ ಕಾಮತ್, ಎಂ.ಜ್ಞಾನೇಶ್ವರ ಕಾಳಿಂಗ ಪೈ, ಎಂ.ಪದ್ಮನಾಭ, ಜಯರಾಮ ಕೋಟ್ಯಾನ್, ಪ್ರೇಮಾ ಎಸ್.ಸಾಲ್ಯಾನ್, ಅನಿತಾ ಪಿ.ಶೆಟ್ಟಿ, ದಯಾನಂದ ನಾಯ್ಕ ಉಪಸ್ಥಿತರಿದ್ದರು. ನಿರ್ದೇಶಕ ಜಯರಾಮ ಕೋಟ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷ ಎಂ.ಗಣೇಶ್ ನಾಯಕ್ ವಂದಿಸಿದರು.

    ಪ್ರಗತಿ ಪಥದಲ್ಲಿ ಮುನ್ನಡೆ
    ಸೊಸೈಟಿಯ ನಿರ್ದೇಶಕ, ಮಾಜಿ ಸಚಿವ ಕೆ.ಅಭಯಚಂದ್ರ ಅವರು ಮಾತನಾಡಿ, ಸುದೀರ್ಘ ಕಾಲ ಸೊಸೈಟಿಯ ಅಧ್ಯಕ್ಷರಾಗಿದ್ದ ಅಮರನಾಥ ಶೆಟ್ಟಿ ಅವರೂ ಒಳಗೊಂಡಂತೆ ನಿರ್ದೇಶಕರ ವೈಯಕ್ತಿಕ ರಾಜಕೀಯ ಒಲವುಗಳೇನಿದ್ದರೂ ಸೊಸೈಟಿಯು ರಾಜಕೀಯೇತರ ಶುದ್ಧ ಸಹಕಾರಿ ಸಂಘವಾಗಿ ಪ್ರಗತಿಪಥದಲ್ಲಿ ಸಾಗಿ ಬಂದಿದೆ, ಇನ್ನಷ್ಟು ಪ್ರಗತಿಯಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

     

     

    Abhayachandra Jain Bahubali Prasad Co Operative ministry Cooperative Cooperative Registrar Mudubidire Co Operative Service Society
    Previous Articleಸಹಕಾರ್ ಟ್ಯಾಕ್ಸಿಗೆ 200 ಚಾಲಕರು ಸೇರ್ಪಡೆ, ತ್ವರಿತ ಪ್ರಗತಿಯತ್ತ ದಾಪುಗಾಲು
    Next Article ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವಾರ್ಷಿಕ ಸಾಮಾನ್ಯ ಸಭೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.