2025ರ ಆಗಸ್ಟ್ 1ರಿಂದಲೇ ಅನ್ವಯ
ನವದೆಹಲಿ: 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ತಿದ್ದುಪಡಿ ನಿಯಮದ ಪ್ರಕಾರ ಇನ್ಮುಂದೆ ಪಟ್ಟಣ ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಗರಿಷ್ಠ ಅವಧಿಯನ್ನು 10 ವರ್ಷಕ್ಕೆ ನಿಗದಿಪಡಿಸಿ ಭಾರತ ಸರ್ಕಾರ ಪ್ರಕಟಣೆ ಹೊರಡಿಸಿದೆ.
https://chat.whatsapp.com/EbVKVnWB6rlHT1mWtsgbch
ಕಾಯ್ದೆಯ ಸೆಕ್ಷನ್ 10A ಅನ್ನು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸಲಾಗಿದ್ದು, ಅದರ ಪ್ರಕಾರ ಯುಸಿಬಿಯ ನಿರ್ದೇಶಕರು ಹತ್ತು ವರ್ಷಗಳನ್ನು ಮೀರಿದ ಅವಧಿಗೆ ನಿರಂತರವಾಗಿ ಅಧಿಕಾರ ವಹಿಸಿಕೊಳ್ಳುವಂತಿಲ್ಲ. ಸರ್ಕಾರವು ಹೊರಡಿಸಿದ ಪ್ರಕಟಣೆಯ ಪ್ರಕಾರ ಈ ತಿದ್ದುಪಡಿ 2025 ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ. ನಿರ್ದೇಶಕರಾಗಿ ನಿರಂತರ 10 ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ನಂತರ ಮತ್ತೆ ಸ್ಪರ್ಧಿಸಲು ಅವಕಾಶವಾಗುವಂತೆ ಕುರಿತು ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ. ಈ ಬಗ್ಗೆ ಪಟ್ಟಣ ಸಹಕಾರಿ ಬ್ಯಾಂಕುಗಳು ತಮ್ಮ ಉಪ-ಕಾನೂನುಗಳನ್ನು ತಿದ್ದುಪಡಿ ಮಾಡಲು ಅನುವು ಮಾಡಿಕೊಡಲು ಆರ್‌ಬಿಐ ವಿವರವಾದ ಮಾರ್ಗಸೂಚಿಗಳನ್ನು ಹೊರತರಬೇಕಿದೆ. ಕಾನೂನು ತಜ್ಞರ ಪ್ರಕಾರ ಆಗಸ್ಟ್ 1, 2025ರ ಮೊದಲು ಹತ್ತು ವರ್ಷಗಳನ್ನು ಪೂರ್ಣಗೊಳಿಸಿದ ಯಾವುದೇ ನಿರ್ದೇಶಕರಿಗೆ ಹೊಸ ನಿಬಂಧನೆ ಅನ್ವಯವಾಗುವುದಿಲ್ಲ ಮತ್ತು ಅವರು ಮರು-ಚುನಾವಣೆಗೆ ಅರ್ಹರಾಗಬಹುದು. ಆದರೆ ಆಗಸ್ಟ್ 1, 2025ರಂದು ಅಥವಾ ನಂತರ ಆಯ್ಕೆಯಾದ ಅಥವಾ ಮರು ಆಯ್ಕೆಯಾದ ನಿರ್ದೇಶಕರು ಹೊಸದಾಗಿ ಸೂಚಿಸಲಾದ 10-ವರ್ಷಗಳ ಮಿತಿಗೆ ಒಳಪಡಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com







