Close Menu
    Top News

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯತ್ವ ಕ್ರಮ ಕೈಬಿಡುವಂತೆ ಸದನದಲ್ಲಿ ಧ್ವನಿ
    News

    ಸಹಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯತ್ವ ಕ್ರಮ ಕೈಬಿಡುವಂತೆ ಸದನದಲ್ಲಿ ಧ್ವನಿ

    adminBy adminJuly 28, 2025

    ಶ್ರೀ ಪೂರ್ಣಾನಂದ ಸಹಕಾರಿಯ ಬಿಜೈ ಶಾಖೆ ಸ್ಥಳಾಂತರ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಭರವಸೆ

    ಮಂಗಳೂರು: ಸಹಕಾರಿ ಕಾಯಿದೆ ನಿಯಮಾವಳಿ ಪ್ರಕಾರ ಸಹಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯತ್ವ  ತಪ್ಪು. ಈ ತರದ ನಾಮನಿರ್ದೇಶಿತ  ಸದಸ್ಯರಾದವರಿಗೆ ಮತದಾನ ಹಕ್ಕು ಕೂಡ ಇಲ್ಲ. ಹಾಗಾಗಿ ಈ ಕ್ರಮವನ್ನು  ಕೈಬಿಡುವಂತೆ ವಿಧಾನಸಭೆಯಲ್ಲಿ ಸರಕಾರವನ್ನು  ಆಗ್ರಹಿಸುವುದಾಗಿ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ.

    https://chat.whatsapp.com/EbVKVnWB6rlHT1mWtsgbch
    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಬಿಜೈ  ಶಾಖಾ ಸ್ಥಳಾಂತರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕಿ ಭಾರತಿ ಭಟ್ ಮುಂದಿಟ್ಟ ಮನವಿಗೆ ಪ್ರತಿಯಾಗಿ ಮೇಲಿನ ಆಶ್ವಾಸನೆ ನೀಡಿದರು. ಪ್ರತಿಯೊಂದು ಹಳ್ಳಿಗೂ ಒಂದು ಸೊಸೈಟಿ ಬೇಕೆಂಬ ಕೇಂದ್ರ ಸರಕಾರದ ಆಶಯದ ಹಿಂದೆ ಅರ್ಥವಿದೆ. ಜನರಲ್ಲಿ ಉಳಿತಾಯ ಪ್ರವೃತ್ತಿ ಗಟ್ಟಿ ಮಾಡುವ ಸಹಕಾರಿ ಸಂಸ್ಥೆಗಳ ಆರಂಭದ ಹಿಂದೆ  ತಾಯಂದಿರ ಉಳಿತಾಯ ಪ್ರವೃತ್ತಿಯ ಸೊಗಡಿದೆ, ಸ್ಫೂರ್ತಿಯಿದೆ ಎಂದರು. ಆರ್ಥಿಕ ಸುರಕ್ಷೆ ಸಹಿತ ಎಲ್ಲಾ ದೃಷ್ಟಿಯಿಂದ ನಾವು ಏಕತೆಯಿಂದಿರುವುದು, ಅತ್ಯಂತ ಜಾಗೃತರಾಗಿರೋದು ಮುಖ್ಯ ಎಂದು ವೇದವ್ಯಾಸ ಕಾಮತ್ ಅವರು ಎಚ್ಚರಿಸಿದರು.

    ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಭಟ್ ಮಾತನಾಡಿ ಸಹಕಾರಿ ರಂಗದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅನನ್ಯವೆಂದು ಬಣ್ಣಿಸಿದರು.

    ಇನ್ನೋರ್ವ ಮುಖ್ಯ ಅತಿಥಿ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸರಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ತುಂಬು ಪ್ರಯೋಜನವಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಸ್ವಾಗತಿಸಿ, ಪ್ರಸ್ತಾವನೆಗೈದ ಸಮಾರಂಭದ ಅಧ್ಯಕ್ಷ  ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಗಣೇಶ್ ಶೆಣೈ, ಐದೂ ಕಾಲು ಲಕ್ಷ ರೂ. ಪಾಲು ಬಂಡವಾಳದೊಂದಿಗೆ ಅಸ್ತಿತ್ವಕ್ಕೆ  ಬಂದ ಶ್ರೀ ಪೂರ್ಣಾನಂದ ಸಹಕಾರಿ ವರ್ಷದಿಂದ ವರ್ಷಕ್ಕೆ ಪ್ರಗತಿ ದಾಖಲಿಸುತ್ತಾ  23ನೇ ವರ್ಷದತ್ತ  ದಾಪುಗಾಲಿಕ್ಕಿದೆ.  ಪ್ರಸ್ತುತ ಸಂಸ್ಥೆ 70 ಲಕ್ಷ ಪಾಲು ಬಂಡವಾಳ, 35ಕೋಟಿ ರೂ.ಠೇವಣಿ ಹೊಂದಿದೆ. 28 ಕೋಟಿ ರೂ.ಸಾಲ ನೀಡಿದ್ದು, 300 ಕೋಟಿ ರೂಗಳಿಗೂ ಅಧಿಕ ವ್ಯವಹಾರ ದಾಖಲಿಸಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ಸುರಕ್ಷೆಗಾಗಿ ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದೆ. ಇ-ಸ್ಟಾಂಪ್ ಮುಖೇನ ವಾರ್ಷಿಕ 2.5 ಕೋಟಿ ರೂ. ರಾಜಸ್ವವನ್ನು ಸರಕಾರಕ್ಕೆ ಸಂದಾಯ ಮಾಡಿರುವ ಹಿರಿಮೆಯಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
    ದ.ಕ. ಜಿಲ್ಲಾ ಒಕ್ಕೂಟ  ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಭಾಸ್ಕರ್ ದೇವಸ್ಯ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ಜೆಸಿಂತಾ ಮಾರ್ಟಿಸ್, ಉದ್ಯಮಿ ಪ್ರವೀಣ್ ಎಸ್.ದರ್ಬೆ, ನಂದನ್ ಬಿ ಎಸ್ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಪೂರ್ಣಾನಂದ ಸಹಕಾರಿಯ ಉಪಾಧ್ಯಕ್ಷ  ಉಪೇಂದ್ರ ನಾಯಕ್ ವೇದಿಕೆಯಲ್ಲಿದ್ದರು.
    ಪಹಲ್ಗಾಮ್ ದಾಳಿಗೆ
    ಬಲಿಯಾದವರಿಗೆ ಭಾಸ್ಕರ್ ರೈ ಕುಕ್ಕುವಳ್ಳಿ ನಮನ ಸಲ್ಲಿಸಿದರು. ಮಾಜಿ ಪ್ರಾಂಶುಪಾಲ ಮತ್ತು ಶ್ರೀ ಪೂರ್ಣಾನಂದ ಸಂಸ್ಥೆ ನಿರ್ದೇಶಕರಾಗಿದ್ದ ದಿ. ವಿಶ್ವನಾಥ್,  ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಲಿಯಾದ ಹಿಂದು ಪ್ರವಾಸಿಗರು ಮತ್ತು ಹುತಾತ್ಮ ಯೋಧರಿಗೆ ನುಡಿನಮನ ಸಲ್ಲಿಸಲಾಯಿತು. ಶ್ರೀ ಪೂರ್ಣಾನಂದ ಸಂಸ್ಥೆ ಯೋಧರ  ಹಿತಕ್ಕಾಗಿ ವರ್ಷವೂ ಕ್ಷೇಮನಿಧಿ ಕಾಯ್ದಿರಿಸುತ್ತಿರುವುದು ಸ್ತುತ್ಯರ್ಹ ಎಂದು ಪ್ರಶಂಸಿಸಿದರು.
    ಶ್ರೀ ಪೂರ್ಣಾನಂದ ನಿರ್ದೇಶಕರಾದ ಮೋಹನ್ ನಾಯಕ್, ಹರಿಶ್ಚಂದ್ರ ಪ್ರಭು,  ಜಗದೀಶ್ ಶೆಣೈ, ಅರವಿಂದ ಕುಮಾರ್ ಶೆಟ್ಟಿ,  ಗೀತಾ ರತ್ನಾಕರ್, ಸದಾನಂದ ಪ್ರಭು, ಶ್ರೀ ಪೂರ್ಣಾನಂದ ಸಂಸ್ಥೆ ಉಪ ಪ್ರಧಾನ ವ್ಯವಸ್ಥಾಪಕ ಋಷಿಕೇಶ್, ಬಿಜೈ ಶಾಖಾ ವ್ಯವಸ್ಥಾಪಕಿ ಶಶಿಕಲಾ, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿರ್ದೇಶಕ ಹರಿಶ್ಚಂದ್ರ ಪ್ರಭು ವಂದಿಸಿದರು. ಉಮೇಶ್ ದಂಡಕೇರಿ ನಿರೂಪಿಸಿದರು.
    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    • ಇಮೇಲ್: sahakaraspandana@gmail.com
    Ganesh Shenoy namanirdeshitha sadasyaru Shree Poornananda Vividhoddesha Souharda Sahakari Sangha Vedavyasa kamath
    Previous Articleಸಹಕಾರವೇ ಭವಿಷ್ಯ: ರಾಷ್ಟ್ರೀಯ ಸಹಕಾರಿ ನೀತಿ -2025 ಅನಾವರಣ
    Next Article ಎಂಸಿಸಿ ಬ್ಯಾಂಕ್ “ಐಡಿಯಾ ಸಮ್ಮಿತ್ 2025” ಆಯೋಜನೆ

    Related Posts

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸೀಲು, ಸಹಿ ಕಡ್ಡಾಯವಲ್ಲ; ಕಂಪ್ಯೂಟರ್ ಆಧರಿತ ಮೆಮೊ ಕೂಡ ಸಾಕ್ಷಿಯಾಗಿ ಮಾನ್ಯ: ಹೈಕೋರ್ಟ್ ಮಹತ್ವದ ತೀರ್ಪು

    April 22, 2026

    ಊರಿನ ಸ್ವಚ್ಛತೆಗಾಗಿ ವಿಶ್ವಕರ್ಮ ಬ್ಯಾಂಕ್‌ನ ಕೆಲಸ ಶ್ಲಾಘನೀಯ

    April 22, 2026

    ಏಪ್ರಿಲ್‌ 26ರಂದು ಶ್ರೀಶಾ ಸೊಸೈಟಿ ಪ್ರಾಯೋಜಕತ್ವದಲ್ಲಿ ಹರಿದಾಸರ ಕೃತಿ ಕೀರ್ತನೆಗಳ ಗಾಯನ

    April 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.